ಉಳ್ಳಾಲ: ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಕುರಿತಂತೆ ನಿರಂತರ ದೂರಿನ ಹಿನ್ನೆಲೆಯಲ್ಲಿ ಸ್ವತಃ ಕಮಿನರೇ ಫೀಲ್ಡ್ ಗೆ ಇಳಿದಿದ್ದಾರೆ. ಈ ನಿಟ್ಟಿನಲ್ಲಿ ಫೆಬ್ರವರಿ 27ರಂದು ಬೆಳಗ್ಗಿನ ಜಾವ ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಮಾರುವೇಷದಲ್ಲಿ ಕಾರ್ಯಾಚರಣೆ ಗೆ ಇಳಿದಿದ್ದರು.
ಆಕ್ಟೀವಾ ಗಾಡಿಯಲ್ಲಿ ಬಂದು ತಲಪಾಡಿ ಟೋಲ್ ಬಳಿ ನಿಂತಿದ್ದ ಪೊಲೀಸರಿಗೆ ಟೋಲ್ ಗೇಟ್ ಮೂಲಕ ಮರಳು ಸಾಗಿಸಿಕೊಂಡು ಲಾರಿಯೊಂದು ತೆರಳುತ್ತಿರುವುದು ಗಮನಕ್ಕೆ ಬಂದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆ್ಯಕ್ಟೀವಾವನ್ನು ಲಾರಿಗೆ ಅಡ್ಡಲಾಗಿ ನಿಲ್ಲಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಕೂಡಲೇ ಉಳ್ಳಾಲ ಠಾಣೆಗೆ ಮಾಹಿತಿ ರವಾನಿಸಿ ಲಾರಿಗೆ ಬೆಂಗಾವಲಾಗಿ ಬಂದು ತಪ್ಪಿಸಿಕೊಂಡಿದ್ದ ವಾಹನವನ್ನು ಪತ್ತೆ ಹಚ್ಚಲು ಸೂಚಿಸಿದ್ದರು. ಈ ವೇಳೆ ಬೆಂಗಾವಲು ವಾಹನದಲ್ಲಿ ಇದ್ದವರು ಪೊಲೀಸರ ಕರ್ತವ್ಯ ಕ್ಕೆ ಅಡ್ಡಿ ಪಡಿಸಿದ್ದು ಅವರ ವಿರುದ್ದವೂ ಪ್ರಕರಣ ದಾಖಲಾಗಿದೆ