ಉಪ್ಪುಂದ : ಕರಾವಳಿ ಭಾಗದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಸದ್ದು ಮಾಡಿದ ಹೊನ್ನಾವರದ ಪರೇಶ ಮೇಸ್ತ ಅನುಮಾನಾಸ್ಪದ ಸಾವಿನ ಬಗ್ಗೆ ನ್ಯಾಯ ಕೊಡಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಿಬಿಐಗೆ ಶಿಫಾರಸ್ಸು ಮಾಡಿತ್ತು, ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ, ಅವರಿಗೆ ತನಿಖೆ ನಡೆಸಲು ಏನು ಕಷ್ಟ? ಸಾವಿನ ಪ್ರಕರಣದಲ್ಲಿ ಬಿಜೆಪಿಯವರೇ ಭಾಗಿಯಾಗಿದ್ದಾರೆ ಅನ್ನೋವ ಅನುಮಾನಗಳು ಇದ್ದು, ಈ ಪ್ರಕರಣವನ್ನು ಅವರು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವುದೇ ಸಾಕ್ಷಿಯಾಗಿದೆ. ನನ್ನ ಮೇಲೆ ಸಿಬಿಐ ತನಿಖೆ ಸೇರಿದಂತೆ ಉಳಿದೆಲ್ಲಾ ಪ್ರಕರಣಗಳನ್ನು ತುರ್ತಾಗಿ ಮಾಡುತ್ತೀರಿ, ಆದರೆ ಮೇಸ್ತ ಪ್ರಕರಣದಲ್ಲಿ ಏಕೆ ವಿಳಂಬ ಧೋರಣೆ ಎಂದು ಡಿ.ಕೆ.ಶಿವಕುಮಾರ್ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇಂದು ಜನಧ್ವನಿ ಪಾದಯಾತ್ರೆಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಿದ್ದರಾಮಯ್ಯನವರ ಟಾರ್ಗೆಟ್ ಸುಳ್ಳು
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಯ್ಕೆ ಪ್ರಕ್ರಿಯೆ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಆರೋಪ ಸುಳ್ಳು, ಯಾರು ಕೂಡಾ ಯಾರನ್ನೂ ಟಾರ್ಗೆಟ್ ಮಾಡಿಲ್ಲ, ಇದು ಸ್ಥಳೀಯ ನಾಯಕರು ಸೇರಿಕೊಂಡು ತೆಗೆದುಕೊಂಡ ತೀರ್ಮಾನವಾಗಿದೆ.
ಜೆಡಿಎಸ್ನವರು ಈ ಬಾರಿ ನಮಗೆ ಮೇಯರ್ ಸ್ಥಾನ ನೀಡಬೇಕಾಗಿತ್ತು, ಕೊಡುವ ಭರವಸೆಯನ್ನು ನೀಡಿದ್ದರೂ, ಕೊನೆಗಳಿಗೆಯಲ್ಲಿ ಅವರೇ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು, ಬಿಜೆಪಿಯರು ಕೂಡಾ ನಾಮ ಪತ್ರ ಸಲ್ಲಿಸಿದ್ದರು, ಆಡಳಿತದಲ್ಲಿ ನಮ್ಮ ಪಕ್ಷವನ್ನು ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಕೊನೆಯಲ್ಲಿ ಸ್ಥಳೀಯ ನಾಯಕರೇ ಸೇರಿಕೊಂಡು ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ನಾಯಕರನ್ನು ಮಾತುಕತೆಗೆ ಕರೆಯಲಾಗಿದೆ. ಇಲ್ಲಿ ಯಾರನ್ನೂ ಕಟ್ಟಿ ಹಾಕುವುದಾಗಿ, ಯಾವ ನಮ್ಮ ನಾಯಕರ ಗೌರವಕ್ಕೆ ಧಕ್ಕೆ ತರುವುವಂತಹ, ಅವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಲು ಅವಕಾಶ ಮಾಡಿಕೊಡುವುದಿಲ್ಲ ಎಂದರು.
ಮೀಸಲಾತಿ:
ಪಂಚಮಸಾಲಿ 2ಎ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು ಜಾತಿ ಮತ್ತು ಮಠದ ವಿಚಾರದ ಬಗ್ಗೆ ಈಗ ಮಾತನಾಡುವುದಿಲ್ಲ, ಈ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕಾಂಗ್ರೇಸ್ ಬ್ಯಾಂಕಿಂಗ್ ಬೆಳೆಸಿದ್ರೆ ಬಿಜೆಪಿ ಬ್ಯಾಂಕ್ ಮುಚ್ಚಿತು.ಕರಾವಳಿಯ ಸಂಸದರು ಎಲ್ಲಾ ಎಲ್ಲಿಗೆ ಹೋಗಿದ್ರು? ಎಂದು ಪ್ರಶ್ನಿಸಿದರು.
ನಿಮ್ಮ ಧ್ವನಿ ಎಲ್ಲಿ ಅಡಗಿತ್ತು?.ಮನೆಕಟ್ಟಲು ಶ್ರಮ ಜಾಸ್ತಿ, ನೀವು ಬ್ಯಾಂಕ್ ಗಳ ಮೇಲೆ ಜೆಸಿಬಿ ಹಾಕಿದ್ರಲ್ವಾ? ದೇಶಕ್ಕೆ ಆರ್ಥಿಕ ಶಕ್ತಿ ಕೊಟ್ಟ ಅವಿಭಜಿತ ದ.ಕ ಜಿಲ್ಲೆಗೆ ಅವಮಾನ ಮಾಡಿದ್ರಿ.ಶೋಭಾ, ಕಟೀಲ್ ಎಲ್ಲಿಗೆ ಹೋಗಿದ್ರು ಎಂದು ಡಿಕೆ ಶಿವ ಕುಮಾರ್ ಪ್ರಶ್ನಿಸಿದರು.
ಮೀನುಗಾರಿಕೆ ಗೆ ಡೀಸೆಲ್ ಸಬ್ಸಿಡಿ ಇಲ್ಲ:
ನಮ್ಮ ಮನೆ ಕಾರ್ಯಕ್ರಮ ಕ್ಕೆ ಮೀನು ತರೋಕೆ ಹೋದ್ರೆ ದರ ಡಬ್ಬಲ್ ಆಗಿದೆ.ಕೊರೋನಾ ಬಂದ ನಂತ್ರ ಈ ಸರ್ಕಾರ ಜನರಿಗೆ ಕಿರುಕುಳ ನೀಡ್ತಿದೆ.ಮುಂಬೈ ಕರಾವಳಿಗರಿಗೆ ಕೊರೋನಾ ಬಂದಾ ಊರಿಗೆ ಬರಬೇಡಿ ಅಂದ್ರು.ಜನರ ರಕ್ಷಣೆ ಮಾಡದ ಮೇಲೆ ಯಡಿಯೂರಪ್ಪ ಸರ್ಕಾರ ಯಾಕೆ ಬೇಕು? ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಕನಕಪುರ ಬಂಡೆ ಅಲ್ಲ:
ನಾನು ಕನಕಪುರದ ಬಂಡೆ ಅಲ್ಲ, ಅದು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ.ಬಿಜೆಪಿಯವರು ನಾವು ಹಿಂದೂ ಮುಂದೂ ಅಂತಾರೆ.ನಾವು ಹಾಗೇನಿಲ್ಲ, ಎಲ್ಲಾ ಧರ್ಮಗಳು ಸೇರಿ ಒಂದು.ರಕ್ತ, ಉಸಿರು, ಬೆವರಿನಲ್ಲಿ ಯಾವುದೇ ಬೇಧ ಇಲ್ಲ ಎಂದು ಹೇಳಿದರು.