ರೈತರ ಹಿತ ಕಾಯಲು ಸರ್ಕಾರ ಮಧ್ಯ ಪ್ರವೇಶಿಸುವ ಅಗತ್ಯವಿದೆ – ಸಂವಾದ

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಸರ್ಕಾರದ ಸಮರ್ಥ ಮಧ್ಯ ಪ್ರವೇಶವೂ ಅಗತ್ಯ. ಇದನ್ನು ರಾಜ್ಯದ ವಿವಿಧ ಭಾಗಗಳ ರೈತರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಇಂದು ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಒಂದು ದಿನದ ತಾಂತ್ರಿಕ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

ಪೃತ್ವಿ ಪ್ರತಿಷ್ಠಾನ, ಮಳೆ ಆಶ್ರಿತ ಕೃಷಿ ಪುನರುಜ್ಜೀವನ ಜಾಲ ಹಾಗೂ ಪರ್ಯಾಯ ಕಾನೂನು ವೇದಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ “ರೈತರ ಹಿತ ರಕ್ಷಣೆಗೆ ಸರ್ಕಾರದ ಮಧ್ಯ ಪ್ರವೇಶ ಅತ್ಯಗತ್ಯ” ಕಾರ್ಯಗಾರದಲ್ಲಿ ಕೃಷಿ ಆರ್ಥಿಕ ತಜ್ಞರಾದ ಡಾ. ಪ್ರಕಾಶ್ ಕಮ್ಮರಡಿ, ಕಾನೂನು ತಜ್ಞ ವಿನಯ್ ಶ್ರೀನಿವಾಸ್, ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ಗ್ರೇಸಿ ಸಿ.ಪಿ ಹಾಗೂ ರೈತ ಮುಖಂಡರಾದ ಕುರಬೂರು ಶಾಂತಕುಮಾರ್ ಮುಂತಾದವರು ಕಳೆದ ದಶಕಗಳಲ್ಲಿ ಕೃಷಿ ಕ್ಷೇತ್ರದಲ್ಲಾದ ಏರಿಳಿತಗಳು ಹಾಗೂ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಿದರು.

ಮೊದಲಿಗೆ ಕಾರ್ಯಗಾರದ ಪ್ರಸ್ತಾವನೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಟಿ. ಎನ್ ಪ್ರಕಾಶ್ ಕಮ್ಮರಡಿ. ಬೆಳೆಗೆ ಬೆಂಬಲ ಬೆಲೆಯನ್ನು ಕಾನೂನಿನ ಮೂಲಕ ಖಾತ್ರಿಗೊಳಿಸಬೇಕು. ಅವತ್ತಿನ ಕಾಲಕ್ಕೆ ಬೆಳೆ ಬೆಳಡಯುವುದು ಮಾತ್ರ ರೈತನ ಕೆಲಸವಾಗಿತ್ತು. ಮಾರುಕಟ್ಟೆಯ ಜವಾಬ್ದಾರಿಯನ್ನು ಸರ್ಕಾರ ನೋಡಿಕೊಳ್ಳುತ್ತಿತ್ತು. ಆಗ ಕಾಫಿ ಬೋರ್ಡ್, ಟೀ ಬೋರ್ಡ್ ಗಳು ಸಮೃದ್ಧವಾಗಿ, ಸಮರ್ಥವಾಗಿದ್ದವು. ಆದರೆ ಈಗ ಕೃಷಿಯಲ್ಲಿ ಸರ್ಕಾರದ ಮಧ್ಯ ಪ್ರವೇಶವಿಲ್ಲದೆ ಈ ಎಲ್ಲ ನಿಗಮಗಳು ದುರ್ಬಲವಾಗಿವೆ. ರೈತರ ವಿಚಾರದಲ್ಲಿ ತನ್ನ ಜವಾಬ್ದಾರಿಗಳಿಂದ ಜಾರಿಕೊಳ್ಳುವ ಸಲುವಾಗಿ ಸರ್ಕಾರ ಈ ಕಾಯ್ದೆಗಳನ್ನು ತರಲು ಹೊರಟಿದೆ ಎಂದರು.

ಇನ್ನು ತೋಟಗಾರಿಕಾ ಬೆಳೆಗಳು ಸೇರಿದಂತೆ ಇತರ ಪ್ರಮುಖ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂಬುದರ ಬಗ್ಗೆ ಮಾತನಾಡಿದ ತಜ್ಞರು. ಕನಿಷ್ಟ ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ನೀಡಿ ಲಾಭದಾಯಕ ಧಾರಣೆ ಖಾತರಿಗೊಳಿಸುವುದು ಕೂಡ ಅಗತ್ಯ ಎಂದು ಅಭಿಪ್ರಾಯ ಪಟ್ಟರು.

ಬೆಂಬಲ ಬೆಲೆಯನ್ನು ಕಾನೂನಿನ ವ್ಯಾಪ್ತಿಗೆ ತರುವಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯತೆ ಏರ್ಪಡಬೇಕು ಎಂಬ ಬಗ್ಗೆಯೂ ಚರ್ಚಿಸಲಾಯಿತು.

Hot Topics

ಕೆ.ಎಮ್.ಸಿ ಆಸ್ಪತ್ರೆಯ ಪ್ರಮುಖ ಪ್ರಕಟಣೆ

ಮಣಿಪಾಲ 14 ಏಪ್ರಿಲ್2021: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ದಿನದಿಂದ ದಿನಕ್ಕೆ ಐಸಿಯು ಅವಶ್ಯವಿರುವ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸದ್ಯದ ಮಟ್ಟಿಗೆ ತೀವ್ರ ನಿಘಾ ಘಟಕ (ಐಸಿಯು) ಹಾಸಿಗೆಗಳು ಮತ್ತು ವೆಂಟಿಲೇಟರ್...

ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ವತಿಯಿಂದ ಭೀಮ ಹಬ್ಬ

ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) , ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಇಂದು ಉಡುಪಿಯ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 130 ನೇ ಜನ್ಮ ದಿನಾಚರಣೆ...

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ 130ನೇ ಜನ್ಮದಿನಾಚರಣೆ ಸಮಾರಂಭ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪ.ಜಾತಿ/ಪ.ಪಂಗಡಗಳ ಸಂಘಟನೆಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾದ "ಸಂವಿಧಾನ ಶಿಲ್ಪಿ,...

Related Articles

ರಾಜ್ಯದಲ್ಲಿ ಕೊರೋನಾ ಹೆಚ್ಚಳ : ಇನ್ನಷ್ಟು ರಾಜ್ಯಗಳಿಗೆ ವಿಸ್ತರಣೆಯಾಗಲಿದೆ ಕರ್ಫ್ಯೂ,

ಬೆಂಗಳೂರು (ಏ.14): ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟುವ ಹಿನ್ನಲೆಯಲ್ಲಿ ಮತ್ತೆ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆ ಬಗ್ಗೆ ಜನರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈ ಬಗ್ಗೆ...

ಬಸವಕಲ್ಯಾಣ ಉಪಚುನಾವಣೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ

ಬಸವಕಲ್ಯಾಣ:ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ, ದಿನಾಂಕ 17 ಏಪ್ರಿಲ್ 2021 ರಂದು ನಡೆಯುವ ಬಸವಕಲ್ಯಾಣ ಉಪಚುನಾವಣೆಯಲ್ಲಿ ಜನತಾದಳ ಜಾತ್ಯತೀತ ಅಭ್ಯರ್ಥಿ ಎಸ್ರಬ್ ಅಲಿ ಕಾದ್ರಿ ಇವರನ್ನು ಬೆಂಬಲಿಸಲು ನಿರ್ಧರಿಸಿದೆ.ನಗರದ ಖಾಸಗಿ...

ಯುಗಾದಿ ಹಬ್ಬ; ಗಣ್ಯರ ಶುಭಾಶಯ

ನವದೆಹಲಿ/ಬೆಂಗಳೂರು: ಪ್ಲವನಾಮ ಸಂವತ್ಸರ ಪ್ರಾರಂಭವಾಗಿರುವ ಇಂದಿನ ಯುಗಾದಿ ಹಬ್ಬವನ್ನು ದೇಶಾದ್ಯಂತ ಜನತೆ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸಿಎಂ ಬಿ,ಎಸ್, ಯಡಿಯೂರಪ್ಪ ಸೇರಿ...
Translate »
error: Content is protected !!