ಚುನಾವಣಾ ಆಯೋಗದಿಂದ ತಮಿಳುನಾಡು, ಕೇರಳ, ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಚುನಾವಣೆ ದಿನಾಂಕ ಘೋಷಣೆ

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ತಮಿಳುನಾಡು, ಕೇರಳ, ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದ್ದು ಮೇ 2ರಂದು ಫಲಿತಾಂಶ ಹೊರಬೀಳಲಿದೆ.

ತಮಿಳುನಾಡು(234 ಕ್ಷೇತ್ರ), ಕೇರಳ(140 ಕ್ಷೇತ್ರ), ಪುದುಚೇರಿ(30 ಕ್ಷೇತ್ರ)ಯಲ್ಲಿ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಇನ್ನು ಪಶ್ಚಿಮ ಬಂಗಾಳ(294 ಕ್ಷೇತ್ರ)ದಲ್ಲಿ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಇದೇ ವೇಳೆ ಅಸ್ಸಾಂ(126 ಕ್ಷೇತ್ರ)ನಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ.

ಒಟ್ಟಾರೆ 824 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು 18.68 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿ ಮತ್ತು ನಾಲ್ಕು ರಾಜ್ಯಗಳ ಚುನಾವಣೆಗಾಗಿ 2.7 ಲಕ್ಷ ಮತ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಚುನಾವಣಾ ಆಯೋಗ ಮುಖ್ಯಸ್ಥ ಸುನೀಲ್ ಅರೋರಾ ಹೇಳಿದ್ದಾರೆ.

ವೇಳಾಪಟ್ಟಿ ಹೀಗಿದೆ.

ರಾಜ್ಯ/ಕೇಂದ್ರಾಡಳಿತ ಪ್ರದೇಶ (ಕ್ಷೇತ್ರಗಳ ಸಂಖ್ಯೆ)

ಹಂತಗಳ ಸಂಖ್ಯೆ ಚುನಾವಣೆ ದಿನಾಂಕ ಮತ ಎಣಿಕೆ ದಿನಾಂಕ
ತಮಿಳು ನಾಡು (234 ಕ್ಷೇತ್ರ) ಒಂದು-ಹಂತ ಏಪ್ರಿಲ್ 6 ಮೇ 2
ಕೇರಳ (140 ಕ್ಷೇತ್ರ)
ಮಲ್ಲಪುರಂ ಉಪ-ಚುನಾವಣೆ ಒಂದು-ಹಂತ ಏಪ್ರಿಲ್ 6 ಮೇ 2
ಪಶ್ಚಿಮ ಬಂಗಾಳ (294 ಕ್ಷೇತ್ರ) ಎಂಟು-ಹಂತ ಹಂತ 1- ಮಾರ್ಚ್ 27
ಹಂತ 2- ಏಪ್ರಿಲ್ 1
ಹಂತ 3- ಏಪ್ರಿಲ್ 6
ಹಂತ 4- ಏಪ್ರಿಲ್ 10
ಹಂತ 5- ಏಪ್ರಿಲ್ 17
ಹಂತ 6- ಏಪ್ರಿಲ್ 22
ಹಂತ 7- ಏಪ್ರಿಲ್ 26
ಹಂತ 8- ಏಪ್ರಿಲ್ 29 ಮೇ 2
ಅಸ್ಸಾಂ (126 ಕ್ಷೇತ್ರ) ಮೂರು-ಹಂತ ಹಂತ 1- ಮಾರ್ಚ್ 27
ಹಂತ 2- ಏಪ್ರಿಲ್ 1
ಹಂತ 3- ಏಪ್ರಿಲ್ 6 ಮೇ 2
ಪುದುಚೇರಿ (30 ಕ್ಷೇತ್ರ) ಒಂದು-ಹಂತ ಏಪ್ರಿಲ್ 6 ಮೇ 2
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ, ಏಪ್ರಿಲ್ 6ರಂದು ಮೂರನೇ ಹಂತ, ಏಪ್ರಿಲ್ 10ರಂದು ನಾಲ್ಕನೇ ಹಂತ, ಏಪ್ರಿಲ್ 17ರಂದು ಐದನೇ ಹಂತ, ಏಪ್ರಿಲ್ 22 ಆರನೇ ಹಂತ, ಏಪ್ರಿಲ್ 26ರಂದು ಏಳನೇ ಹಂತ, ಏಪ್ರಿಲ್ 29ರಂದು ಎಂಟನೇ ಹಂತದ ಮತದಾನ ನಡೆಯಲಿದೆ.

ಅಸ್ಸಾಂನಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ, ಏಪ್ರಿಲ್ 6ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ.

Hot Topics

ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ನವೀಕೃತ ಮನೆಯ ಹಸ್ತಾಂತರ

ಉಡುಪಿ : ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯು ಕಾರ್ಕಳ ತಾಲೂಕಿನ ಅಜೆಕಾರ್ ನ ವಿದ್ಯಾಪೋಷಕ್ ಫಲಾನುಭವಿ ಅಂತಿಮ ಪದವಿ ವಿದ್ಯಾರ್ಥಿನಿ ನಿರೀಕ್ಷಾಳಿಗೆ ನವೀಕೃತ ಮನೆ ‘ಶ್ರೀಗುರು’ ಹಸ್ತಾಂತರ ಕಾರ್ಯಕ್ರಮ ದಿನಾಂಕ 13-04-2021ರಂದು ಜರಗಿತು....

ಮೀನುಗಾರಿಕಾ ಬೋಟ್‌ಗೆ ಹಡಗು ಢಿಕ್ಕಿ: ಮೂವರು ಮೃತ್ಯು

ಮಂಗಳೂರು: ಮೀನುಗಾರಿಕೆಯಲ್ಲಿ ನಿರತವಾಗಿದ್ದ ಬೋಟ್‌ಗೆ ಹಡಗು ಢಿಕ್ಕಿ ಹೊಡೆದು ಅದರಲ್ಲಿದ್ದ 14 ಮಂದಿ ಮೀನುಗಾರರ ಪೈಕಿ ಮೂವರು ಮೃತಪಟ್ಟ ಘಟನೆ ಮಂಗಳೂರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ನಡೆದಿದೆ.ನಿನ್ನೆ ರಾತ್ರಿ ರಬ್ಹಾ ಎಂಬ...

ಸೆಲ್ಫಿಗೆ ಬಲಿಯಾಯಿತು ಎರಡು ಜೀವ – ಕಾಳಿ ನದಿಯಲ್ಲಿ ಜೀವ ಕಳೆದುಕೊಂಡ ಜೋಡಿ!

ಕಾರವಾರ: ಸೆಲ್ಫಿ ಪಡೆಯುವ ಸಲುವಾಗಿ ಪ್ರಯತ್ನದಲ್ಲಿದ್ದಾಗ ಸ್ನೇಹಿತರಿಬ್ಬರು ಕಾಳಿ ನದಿ ಸೇತುವೆ ಮೇಲಿಂದ ಬಿದ್ದು ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯಲ್ಲಿ ನಡೆದಿದೆ. ಗಣೇಶಗುಡಿಯ...

Related Articles

ಕುಂಭಮೇಳದಲ್ಲಿ ಕೋವಿಡ್ ರೂಲ್ ಬ್ರೇಕ್: 110 ಕ್ಕಿಂತ ಅಧಿಕ ಯಾತ್ರಾರ್ಥಿಗಳಿಗೆ ಕೋವಿಡ್ ಸೋಂಕು!

ಹರಿದ್ವಾರ: ಹರಿದ್ವಾರದ ಮಹಾ ಕುಂಭಮೇಳದಲ್ಲಿ 100ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಕೊರೋನಾ ಸೋಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ.ಈ ಹಿಂದೆ ಸಾಕಷ್ಟು ಮಾಧ್ಯಮಗಳು ಹರಿದ್ವಾರದ ಮಹಾ ಕುಂಭಮೇಳದಲ್ಲಿ ಕೋವಿಡ್ ನಿಯಮಗಳ ಕಡ್ಡಾಯ ಪಾಲನೆಯಾಗದ ಕುರಿತು ಬೆಳಕು...

ಮಮತಾ ಬ್ಯಾನರ್ಜಿ ಸ್ಥಿತಿ ಸೋತ ಆಟಗಾರನಂತಾಗಿದೆ – ಜೆಪಿ ನಡ್ದಾ

ಕೋಲ್ಕತ್ತಾ, (ಏ.13): ಮಮತಾ ಬ್ಯಾನರ್ಜಿ ಸ್ಥಿತಿ ಈಗ ಸೋತ ಆಟಗಾರನಂತೆ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಚುನಾವಣಾ ಆಯೋಗದತ್ತ...

ಲಾರಿ ಹಾಗೂ ಕಾರು ಗಳ ನಡುವೆ ಭೀಕರ ಅಪಘಾತ, ಇಬ್ಬರು ಮೃತ್ಯು, ನಾಲ್ವರಿಗೆ ಗಾಯ

ಉತ್ತರ ಕನ್ನಡ (ಏ.13): ಲಾರಿ ಹಾಗೂ ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಈ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಹೆಬ್ಬುಳ ಬಳಿ ರಾಷ್ಟ್ರೀಯ...
Translate »
error: Content is protected !!