ಶ್ರೀಲಂಕಾ ಪ್ರಜೆ ಉಡುಪಿಯಲ್ಲಿ ಮೃತ್ಯು; ಉಡುಪಿಯಲ್ಲಿ ಅಂತ್ಯಸಂಸ್ಕಾರ

ಉಡುಪಿ,ಫೆ.26; ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಶ್ರೀಲಂಕಾ ದೇಶದ ಪ್ರಜೆಯ ಅಂತ್ಯಸಂಸ್ಕಾರವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಮೃತರ ಸಂಬಂಧಿ ಮುರಳಧರನ್ ಹಾಗೂ ಮಗಳು ಸಿಲ್ವಿನ್ ಅವರು, ಉಡುಪಿಯ ಸಾಮಾಜಿಕ ಕಾರ್ಯಕರ್ತರ ಸಹಕಾರದಿಂದ ಶುಕ್ರವಾರ ನಡೆಸಿದರು. ಧಾರ್ಮಿಕ ಪ್ರಕ್ರಿಯೆಗಳು ಅರ್ಚಕ ಕೆ.ಜೆ. ವಿಠಲ ತಂತ್ರಿಗಳ ಪೌರೋಹಿತ್ಯದಲ್ಲಿ ನಡೆದವು. ಮೃತರ ಕುಟುಂಬಕ್ಕೆ ಸಾಮಾಜಿಕ ಕಾರ್ಯಕರ್ತರಾದ ಹರ್ಷವರ್ಧನ್ ಬ್ರಹ್ಮಾವರ, ಸುದರ್ಶನ್ ಬ್ರಹ್ಮಗಿರಿ, ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಅಣ್ಣಪ್ಪ ಸಂಪಿಗೆನಗರ ಅವರು, ನೆರೆಯ ದೇಶದ ಬಂಧುಗಳ ಅಸಹಾಯಕತೆಗೆ ಸಹಕರಿಸಿ ಮಾನವಿಯತೆ ಮೆರೆದರು. ಶವಸಾಗಿಸಲು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಉಚಿತ ಅಂಬುಲೇನ್ಸ್ ಸೇವೆಯನ್ನು ಒದಗಿಸಿತು.

ಮೃತರು ಕಬಿಲನ್ ನಟರಾಜನ್ (58ವ), ಶ್ರೀಲಂಕಾದ ಬಾಲನಗೊಚ್ಚ ನಗರದವರು. ಕಳೆದ ನವಂಬರ್ ತಿಂಗಳಲ್ಲಿ ಇವರು ಭಾರತಕ್ಕೆ ಆಗಮಿಸಿದ್ದು. ಮಲ್ಪೆಯಿಂದ ಮೀನು ರಪ್ತುಗೊಳಿಸುವ ವ್ಯಾಪಾರ ನಡೆಸುತ್ತಿದ್ದರು. ಉಡುಪಿಯ ಖಾಸಗಿ ವಸತಿಗ್ರಹದಲ್ಲಿ ವಾಸ್ತವ್ಯಹೂಡಿದ್ದರು. ಫೆ.16 ರಂದು, ಕಬಿಲನ್ ರಾತ್ರಿ ಮಲಗಿಕೊಂಡಾಗ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿದೆ. ತಕ್ಷಣ ಅವರು ಮೊಬೈಲ್ ಕರೆಮಾಡಿ ಮಿತ್ರ ಸುದರ್ಶನ್ ಅವರಲ್ಲಿ ವಿಷಯ ಹೇಳಿಕೊಂಡಿದ್ದರು. ತಕ್ಷಣ ಸ್ನೇಹಿತ ಅವರನ್ನು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು. ಮರುದಿನ ಕಬಿಲನ್ ನಟರಾಜನ್ ಅವರು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಯಿತು.

ಶ್ರೀಲಂಕಾದಲ್ಲಿರುವ ಮೃತರ ಸಂಬಂಧಿಕರ ವಿಳಾಸವನ್ನು ಪತ್ತೆಗೊಳಿಸಿ, ವಿಷಯ ಮುಟ್ಟಿಸಲಾಯಿತು. ಮೃತ ವ್ಯಕ್ತಿ ವಿದೇಶದ ಪ್ರಜೆಯಾದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಛೇರಿಯಲ್ಲಿ ಕಾನೂನು ಪ್ರಕ್ರಿಯೆಗಳು ನಡೆದವು. ನಗರ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರು ಶವಪರೀಕ್ಷೆ ನಡೆದ ಬಳಿಕ ಶ್ರೀಲಂಕಾದಿಂದ ಆಗಮಿಸಿರುವ ವಾರಸುದಾರರಿಗೆ ಶವವನ್ನು ಹಸ್ತಾಂತರಿಸಿದರು. ಮಾತೃದೇಶಕ್ಕೆ ಶವಕೊಂಡೈಯಲು ಅಸಹಾಯಕತೆ ಎದುರಾದಗ, ಕುಟುಂಬಿಕರು ಭಾರತದಲ್ಲಿ ಶವಸಂಸ್ಕಾರ ನಡೆಸಲು ನಿಶ್ಚಯಿಸಿದರು. ಮೃತರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾದರಿಂದ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲು ಪುರೋಹಿತರನ್ನು ಬಯಸಿದರು. ಅವರ ಬಯಕೆಯಂತೆ ಸಾಮಾಜಿಕ ಕಾರ್ಯಕರ್ತರು ಪುರೋಹಿತರ ಮೂಲಕ ಅಂತ್ಯಸಂಸ್ಕಾರ ನಡೆಸಲು ಸಹಕರಿಸಿದರು. ಅಂತ್ಯಸಂಸ್ಕಾರದ ನೇರದೃಶ್ಯಗಳ ವಿಕ್ಷಣೆಯನ್ನು ಶ್ರೀಲಂಕಾದಲ್ಲಿದ್ದ ಮೃತರ ಪತ್ನಿ ಮಕ್ಕಳು, ಕುಟುಂಬಿಕರು ವಿಡಿಯೋ ಕರೆಯ ಮೂಲಕ ವಿಕ್ಷಿಸಿ ಕಂಬನಿ ಮಿಡಿದರು.

Hot Topics

ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್’ಡೌನ್

ಬೆಂಗಳೂರು: ಕರ್ನಾಟಕದಲ್ಲಿ ಮೇ 10 ರಿಂದ ಮೇ 24 ವರೆಗೆ ಲಾಕ್'ಡೌನ್ ವಿಧಿಸಲಾಗಿದೆ.ಲಾಕ್'ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶವಿದೆ. ನಂತರ ಯಾರು ಕೂಡ ರಸ್ತೆಗೆ ಇಳಿಯುವಂತಿಲ್ಲವೆಂದು ಹೇಳಿದ್ದಾರೆ.ಸೋಮವಾರದಿಂದ...

ಉಡುಪಿಯಲ್ಲಿ ಇಂದು 1526 ಮಂದಿಗೆ ಕೋರೊನಾ ಪಾಸಿಟಿವ್, ಐದು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಒಟ್ಟು 1526 ಮಂದಿಗೆ ಕೋರೊನಾ ಪಾಸಿಟಿವ್ ಆಗಿದೆ. ಇಂದಿನ ವರದಿಯಂತೆ ಐದು ಮಂದಿ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಪ್ರಸ್ತುತ 5063 ಸಕ್ರಿಯ ಪ್ರಕರಣಗಳಿವೆ. 384 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ‌. ಜಿಲ್ಲೆಯಲ್ಲಿ...

ಉಡುಪಿಯಲ್ಲಿ ಸಂಪೂರ್ಣ ಲಾಕ್’ಡೌನ್ ಮಾಡಿ – ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನತಾ ಲಾಕ್‌ಡೌನ್ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಕಳೆದ ವರ್ಷದಂತೆ ಸಂಪೂರ್ಣ ಲಾಕ್‌ಡೌನ್‌ ಮಾಡಿ, ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ...

Related Articles

Translate »
error: Content is protected !!