ಕಾರ್ಕಳ : ಆಗಲೋ ಈಗಲೂ ಬೀಳುವಂತಿರುವ ಗುಡಿಸಲಿನಲ್ಲಿ ವಾಸಿಸುತ್ತಿರುವ ವೃದ್ಧ ದಂಪತಿ

ಕಾರ್ಕಳ (ಫೆ.25): ಆಗಲೋ ಈಗಲೋ ಬೀಳುವಂತಿರುವ ಗುಡಿಸಲಿನಲ್ಲಿ ವಾಸಿಸುತ್ತಿರುವ ವೃದ್ಧ ದಂಪತಿಗಳು ವಸತಿಗಾಗಿ, ಅಧಿಕಾರಿ, ಜನಪ್ರತಿನಿಧಿಗಳನ್ನು ಅಂಗಲಾಚಿ ಬೇಡುತ್ತಿದ್ದರೂ, ನಿರ್ಲಕ್ಷ್ಯ ತೋರಿದ ಪರಿಣಾಮ ಶಿಥಿಲ ಗುಡಿಸಲಿನಲ್ಲೇ ಬದುಕು ಮುಗಿಯುವ ಮುನ್ನ ನಮಗೊಂದು ಸೂರು ಕಲ್ಪಿಸಿಕೊಡಿ ಎಂದು ಅಸಹಾಯಕತೆಯಿಂದ ಬೇಡಿಕೊಳ್ಳುತ್ತಿದ್ದಾರೆ.

ಕಾರ್ಕಳ ತಾ| ಪೇರಳ್ಕಟ್ಟೆ ದರ್ಖಾಸು ನಿವಾಸಿ ಬಾಬು ಶೆಟ್ಟಿಗಾರ್‌ (70) ಹಾಗೂ ಅವರ ಪತ್ನಿ ಸುಶೀಲಾ (60) ಇವರು ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ. ಇವರಿಗೆ ಮಕ್ಕಳಿಲ್ಲ. ವಯಸ್ಸಾಗಿದ್ದು ಕೆಲಸ ಮಾಡಲು ಶಕ್ತಿ ಇಲ್ಲ.

ಟಾರ್ಪಲ್‌ ಹೊದಿಕೆಯ, ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ಇವರ ವಾಸ. ಮನೆ ಛಾವಣಿ ಹಾನಿಗೊಳಗಾಗಿದೆ. ಇದಕ್ಕೆ ಟಾರ್ಪಾಲು ಹಾಕಿದ್ದಾರೆ. ಕಳೆದ ನಲ್ವತ್ತು ವರ್ಷಗಳಿಂದ ಇವರು ಇಲ್ಲಿದ್ದು ಐದು ವರ್ಷಗಳಿಂದ ಟಾರ್ಪಾಲು ಹೊದಿಕೆಯಡಿ ಇದ್ದಾರೆ.

ಪಡಿತರ, ಆಧಾರ್‌, ಗುರುತಿನ ಚೀಟಿ ದಾಖಲೆ ಪತ್ರಗಳಿದ್ದರೂ ಹಕ್ಕುಪತ್ರವಿಲ್ಲದ ಕಾರಣಕ್ಕೆ ಇವರಿಗೆ ನಿವೇಶನ ಭಾಗ್ಯ ದೊರಕಿಲ್ಲ. ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸಿ 2 ವರ್ಷ ಕಳೆದಿವೆ. ಯಾವುದೇ ಪ್ರಯೋಜನ ವಾಗಿಲ್ಲ ಅರ್ಜಿ ಬಗ್ಗೆ ಹಲವು ಬಾರಿ ಕಚೇರಿಗೆ ತೆರಳಿದ್ದಾರೆ. ಅಲ್ಲಿನ ಅಧಿಕಾರಿಗಳು ಸಹಾನುಭೂತಿ ವ್ಯಕ್ತಪಡಿಸಿದ್ದು ಬಿಟ್ಟರೆ, ಸ್ವಂತ ಸೂರು ಕಲ್ಪಿಸುವ ಇಚ್ಛೆ ಹೊಂದಿರಲಿಲ್ಲ ಎನ್ನುತ್ತಾರೆ ದಂಪತಿ.

ವೃದ್ಧಾಪ್ಯ ವೇತನ ಹೊರತುಪಡಿಸಿದರೆ ಯಾವ ಸೌಲಭ್ಯಗಳೂ ಇಲ್ಲ. ಪಡಿತರ ಅಂಗಡಿಯಿಂದ 10 ಕೆಜಿ ಅಕ್ಕಿ, 1 ಕೆ.ಜಿ. ಕಡಲೆ ಬಿಟ್ಟರೆ ಬೇರೇನಿಲ್ಲ. ಅಕ್ಕಿ ಮೊದಲು ಹೆಚ್ಚು ಸಿಗುತ್ತಿತ್ತು. ಈಗ ಅದನ್ನು ಕಡಿತಗೊಳಿಸಲಾಗಿದೆ ಎನ್ನುತ್ತಾರವರು. ಆಹಾರ ಸಾಮಗ್ರಿ ಅಂಗಡಿ, ರೇಶನ್‌ ಅಂಗಡಿಯಿಂದ ತರಬೇಕಿದ್ದರೆ, 5 ಕಿ.ಮೀ.ಗೆ ಆಟೋ ಮಾಡಬೇಕು. ಅದಕ್ಕೆ 100 ರೂ. ಖರ್ಚಾಗುತ್ತದೆ. ಇದೆಲ್ಲ ಇವರಿಗೆ ತ್ರಾಸ ದಾಯಕವಾಗಿದೆ.

ಪತ್ನಿ ಸುಶೀಲಾ ಅವರ ಆರೋಗ್ಯ ಕೆಲವು ದಿನ ಗಳಿಂದ ಕ್ಷೀಣಿಸಿದ್ದು, ಹಾಸಿಗೆ ಹಿಡಿದಿದ್ದಾರೆ. ಕೈಕಾಲುಗಳಲ್ಲಿ ನೀರು ತುಂಬಿಕೊಂಡು ದಪ್ಪವಾಗಿದೆ. ಮುಖ ದಪ್ಪವಾಗಿದ್ದು, ಕಿಡ್ನಿ ಸಮಸ್ಯೆ ಇದೆ ಎಂದು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ ಎಂಬುದಾಗಿ ಹೇಳುತ್ತಿದ್ದಾರೆ. ಕಣ್ಣು ಕಾಣಿಸುತ್ತಿಲ್ಲ.

Hot Topics

ದಕ್ಷಿಣ ಕನ್ನಡ : ವಾಹನ ಸವಾರರನ್ನು ಅಡ್ಡಗಟ್ಟಿ ಲೂಟುತ್ತಿದ್ದ ಆರು ಮಂದಿ ಆರೋಪಿಗಳ ಬಂಧನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಹನ ಸವಾರರನ್ನುಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮತ್ತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಜಿಲ್ಲೆಯ ಮೂಡಬಿದಿರೆ, ಮೂಲ್ಕಿ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ...

ಉಡುಪಿ: 40 ಮಂದಿ ಬಡ ಪತ್ರಿಕಾ ವಿತರಕರಿಗೆ ಆಹಾರ ಕಿಟ್ ವಿತರಣೆ

ಉಡುಪಿ, ಎ.15: ಉಡುಪಿ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ ಸಹಯೋಗದಲ್ಲಿ ಪ್ರತಿದಿನ ಮನೆಮನೆಗೆ ಪತ್ರಿಕೆಯನ್ನು ಹಂಚುವ ಬಡ ಪತ್ರಿಕಾ ವಿತರಕರಿಗೆ ಆಹಾರ ಕಿಟ್...

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಕೆಮ್ಮಣ್ಣು: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ವತಿಯಿಂದ ಅರ್ಥಿಕವಾಗಿ ಹಿಂದುಳಿದಿದ್ದ ಬಡ ಕುಟುಂಬಕ್ಕೆ ಮನೆ ಹಸ್ತಾಂತರಿಸಲಾಯಿತು.ಜಮಾಅತೆ ಇಸ್ಲಾಮಿ ಹಿಂದ್'ನ ರಾಜ್ಯ ಕಾರ್ಯಕರ್ತರಾದ ರವೂಫ್ ಕಿದೆವರ್ ಫಲನುಭವಿ ಇಲ್ಯಾಸ್ ಅವರಿಗೆ...

Related Articles

Translate »
error: Content is protected !!