ಮಂಗಳೂರು: ಎಟಿಎಂ ಮೆಶಿನ್ಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಹಣ ಎಗರಿಸುತ್ತಿದ್ದವರನ್ನು ಸ್ಥಳೀಯರೇ ರೆಡ್ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ನಗರದ ಮಂಗಳದೇವಿ ದೇವಸ್ಥಾನದ ಬಳಿಯ ಎಸ್ಬಿಐ ಬ್ಯಾಂಕಿನ ಎಟಿಎಂ ಮೆಶಿನ್ ಗೆ ಇಬ್ಬರು ಸ್ಕಿಮ್ಮಿಂಗ್ ಯಂತ್ರ ಅಳವಡಿಸುತ್ತಿದ್ದಾರೆಂಬ ಶಂಕೆಯ ಮೇರೆಗೆ ಅವರನ್ನು ಸೆರೆ ಹಿಡಿಯಲು ಯತ್ನಿಸಿದ್ದು, ಈ ವೇಳೆ ಅವರು ಪರಾರಿಯಾಗಲು ಯತ್ನಿಸಿದ್ದರು. ಆದರೆ ಸ್ಥಳೀಯರು ಇಬ್ಬರನ್ನೂ ಸೆರೆ ಹಿಡಿದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ವೈರಲ್ ಆಗಿದೆ.
ಏನಿದು ಸ್ಕಿಮ್ಮಿಂಗ್ ಯಂತ್ರ: ಸ್ಕಿಮ್ಮಿಂಗ್ ಯಂತ್ರವನ್ನು ಎಟಿಎಂ ಮೆಶಿನ್ಗೆ ಅಳವಡಿಸಿದರೆ, ಇದು ಅಲ್ಲಿ ಬಳಕೆ ಮಾಡುವ ಎಲ್ಲಾ ಎಟಿಎಂ ಕಾರ್ಡ್ನ್ನು ರೀಡ್ ಮಾಡಿ ಡಾಟಾವನ್ನು ಸಂಗ್ರಹಿಸುತ್ತದೆ. ಇದರ ಜೊತೆಗೆ ಕ್ಯಾಮಾರಾವೊಂದನ್ನು ಅಳವಡಿಸುತ್ತಿದ್ದು, ಇದರಲ್ಲಿ ಬಳಕೆದಾರರು ಒತ್ತುವ ಪಿನ್ ನಂಬರ್ ಸೆರೆಯಾಗುತ್ತದೆ. ಸ್ಕಿಮ್ಮಿಂಗ್ ಯಂತ್ರ ರೀಡ್ ಮಾಡಿದ ಡಾಟಾ ಮೂಲಕ ಹೊಸ ಎಟಿಎಂ ಕಾರ್ಡ್ ರಚಿಸಿ, ಕ್ಯಾಮರಾದಲ್ಲಿ ಸೆರೆಯಾದ ಪಿನ್ ನಂಬರ್ನ್ನು ಅದಕ್ಕೆ ಬಳಸಿ ಹಣ ಡ್ರಾ ಮಾಡಲಾಗುತ್ತದೆ
ಕೆಲ ತಿಂಗಳಿನಿಂದ ಮಂಗಳೂರಿನಲ್ಲಿ ಗ್ರಾಹರ ಗಮನಕ್ಕೆ ಬಾರದೇ ಹಲವರ ಅಕೌಂಟ್ ಗಳಿಂದ ಹಣ ಕಡಿಮೆಯಾಗುತ್ತಿತ್ತು. ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಇದೀಗ ಇವರಿಬ್ಬರ ಬಂಧನದಿಂದ ಈ ಬಗ್ಗೆ ಸಂಪೂರ್ಣ ಮಾಹಿತಿ ಸಿಗಬಹುದೆಂಬ ನಂಬಿಕೆಯಲ್ಲಿದ್ದಾರೆ ಮೋಸ ಹೋದ ಗ್ರಾಹಕರು.