ಮೀನುಗಾರರ ಸಂಘ(ರಿ.) ಮಲ್ಪೆ ಇಲ್ಲಿ ಇಂದು ದಿನಾಂಕ 23-02-2021 ರಂದು ನಡೆದ ಮಲ್ಪೆ ಮೀನುಗಾರರ ಸಂಘ (ರಿ.), ಮಲ್ಪೆ ಮತ್ತು ಇನ್ಸೂರೆನ್ಸ್ ಕಂಪನಿಯವರ ಸಭೆ ನಡೆಯಿತು.
ಶಾಸಕ ಶ್ರೀ ಕೆ. ರಘುಪತಿ ಭಟ್ ಭಾಗವಹಿಸಿ ಮಾತನಾಡಿ ಮುಳುಗಡೆಯಾದ ಬೋಟ್ ಗಳ ವಿಮೆ ಪಾವತಿ (ಇನ್ಸೂರೆನ್ಸ್ ಕ್ಲೈಂ) ಆಗದಿರುವ ಬಗ್ಗೆ ಸಂಬಂಧಿಸಿದ ಇನ್ಸುರೆನ್ಸ್ ಕಂಪನಿಯರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಇನ್ಸೂರೆನ್ಸ್ ಹಣ ಮಂಜೂರು ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಕೃಷ್ಣ ಎಸ್. ಸುವರ್ಣ, ಉಪಾಧ್ಯಕ್ಷರಾದ ರಮೇಶ್ ಕೋಟ್ಯಾನ್, ವಿಠಲ್ ಕರ್ಕೇರ, ಕಾರ್ಯದರ್ಶಿಗಳಾದ ಸುಭಾಷ್ ಎಸ್. ಮೆಂಡನ್, ಕೋಶಾಧಿಕಾರಿ ಶಿವಾನಂದ, ಹಾಗೂ ಆಳ ಸಮುದ್ರ ಟ್ರಾಲ್ ಬೋಟ್ ಮೀನುಗಾರ ಸಂಘದ ಅಧ್ಯಕ್ಷರಾದ ಕಿಶೋರ್ ಡಿ ಸುವರ್ಣ, ಮೀನುಗಾರಿಕಾ ಪ್ರಕೋಷ್ಠದ ಜಿಲ್ಲಾ ಸಂಚಾಲಕ ರವಿರಾಜ್ ಸುವರ್ಣ ಮತ್ತು ಮೀನುಗಾರಿಕಾ ಇಲಾಖೆ ಉಪನಿರ್ದೇಶಕರಾದ ಗಣೇಶ್ ಹಾಗೂ ವಿವಿಧ ಇನ್ಸುರೆನ್ಸ್ ಕಂಪನಿಯ ವ್ಯವಸ್ಥಾಪಕರು, ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.