ನವದೆಹಲಿ (ಫೆ.23): ದೇಶದಲ್ಲಿ ಆರೋಗ್ಯ ರಕ್ಷಣೆ ಬಗ್ಗೆ ಸಮಗ್ರ ಚಿಂತನೆಯನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಕೇಂದ್ರ ಬಜೆಟ್ ನ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ವೆಬ್ ಬಿನಾರ್ ನಲ್ಲಿ ಮಾತನಾಡಿದ ಮೋದಿ, ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಬಜೆಟ್ ಅಸಾಧಾರಣವಾಗಿದ್ದು, ಈ ಕ್ಷೇತ್ರದ ಬಗ್ಗೆ ಸರ್ಕಾರ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಭಾರತವನ್ನು ಆರೋಗ್ಯವಾಗಿಡಲು, ಸರ್ಕಾರವು ನಾಲ್ಕು ರಂಗಗಳಲ್ಲಿ ಕೆಲಸ ಮಾಡುತ್ತಿದೆ – ಅನಾರೋಗ್ಯ ಮತ್ತು ಯೋಗಕ್ಷೇಮದ ಉತ್ತೇಜನ, ಎಲ್ಲರಿಗೂ ಆರೋಗ್ಯ ಆರೈಕೆ ಪ್ರವೇಶ, ಆರೋಗ್ಯ ಆರೈಕೆ ಮೂಲಸೌಕರ್ಯ ಮತ್ತು ವೃತ್ತಿಪರರ ಗುಣಮಟ್ಟ ಮತ್ತು ಪ್ರಮಾಣಗಳಲ್ಲಿ ಹೆಚ್ಚಳ, ಸಮಸ್ಯೆಗಳನ್ನು ನಿವಾರಿಸಲು ಮಿಷನ್ ಮೋಡ್ ನಲ್ಲಿ ಕೆಲಸ ಮಾಡಲು ಕಾರ್ಯೋನ್ಮುಖವಾಗಿದೆ ಎಂದು ಮೋದಿ ಹೇಳಿದರು.
ಮುಂದಿನ ದಿನಗಳಲ್ಲಿ ಭಾರತೀಯ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಲಿದೆ ಎಂದು ಅವರು ಹೇಳಿದರು.ಮೇಡ್ ಇನ್ ಇಂಡಿಯಾ ಲಸಿಕೆಗಳಿಗೆ ಹೆಚ್ಚಿನ ಬೇಡಿಕೆ ಯನ್ನು ಪೂರೈಸಲು ದೇಶವು ಸನ್ನದ್ಧವಾಗಿರಬೇಕು ಎಂದು ಅವರು ಹೇಳಿದರು