ರಾಯಚೂರು (ಫೆ.23): ಪತಿ ಮನೆಯವರ ಕಿರುಕುಳ ತಾಳದೆ ಮಹಿಳೆ ಒಬ್ಬಳು ತನ್ನ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾನ್ವಿ ತಾಲೂಕಿನ ಆರೋಲಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಹನುಮಂತಿ ಹುಲಿಗೇಯ್ಯ (26), ಮಗು ಉದಯ (14 ತಿಂಗಳು)ಎಂದು ಗುರುತಿಸಲಾಗಿದೆ. ಮಟಮಾರಿ ಮೂಲದ ಹನುಮಂತಿಯನ್ನು ಆರೋಲಿಯ ಹುಲಿಗೇಯ್ಯನೊಂದಿಗೆ 7 ವರ್ಷದ ಹಿಂದೆ ಮದುವೆ ಮಾಡಲಾಗಿತ್ತು. ಇತ್ತೀಚೆಗೆ ಗಂಡನ ಮನೆಯವರಿಂದ ಕಿರುಕುಳ ಹೆಚ್ಚಾಗಿತ್ತು ಎನ್ನಲಾಗುತ್ತಿದೆ.
ಶುಕ್ರವಾರದಿಂದ ತಾಯಿ ಮಗು ಕಾಣೆಯಾಗಿದ್ದರು. ನಿನ್ನೆ ಮಾನವಿ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಾಗಿತ್ತು. ತನಿಖೆ ವೇಳೆ ಗ್ರಾಮದ ಭಾವಿಯಲ್ಲಿ ಇಬ್ಬರ ಶವ ಪತ್ತೆಯಾಗಿವೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ಅತ್ತೆ ಮಾವನನ್ನು ವಶಕ್ಕೆ ಪಡೆದಿದ್ದಾರೆ.