ಮಂಗಳೂರು: ಯುವಕರು ಯಾವುದೇ ಕೋಮಿನ ಪ್ರಚೋದನೆಗೆ ಒಳಗಾಗಬಾರದು. ಕೋಮುವಾದ ಯಾವುದೇ ಇರಲಿ ಅದು ಈ ದೇಶಕ್ಕೆ ಮಾರಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. ಅವರು ಮಂಗಳೂರಿನ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಅಲ್ಪ ಸಂಖ್ಯಾತ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನೂತನ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನು ಅಭಿನಂದಿಸಿದ ಸಲೀಂ ಅಹ್ಮದ್, ಯುವಕರು ಕೋಮುವಾದದ ಕಡೆ ವಾಲದಂತೆ ತಡೆಯುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದು ಕಿವಿ ಮಾತು ಹೇಳಿದರು.
ಜಾತ್ಯಾತೀತ, ಸೌಹಾರ್ದ ಯುತ ಸಮಾಜದಿಂದ ಮಾತ್ರ ಭಾರತ ತನ್ನ ಹಿಂದಿನ ಗತವೈಭವಕ್ಕೆ ಮರಳಲಿದೆ ಎಂದವರು ಹೇಳಿದರು.