ಕುಂದಾಪುರ : ದಿನಾಂಕ 22 ಫೆಬ್ರವರಿ 2021, ಸೋಮವಾರ ಸಂಜೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ನೂತನ ಜಿಲ್ಲಾಧ್ಯಕ್ಷರಾದ ಜನಾಬ್ ಇಬ್ರಾಹಿಮ್ ಸಾಹೇಬ್ ಕೋಟ ಇವರ ಅಧ್ಯಕ್ಷತೆಯಲ್ಲಿ ಕುಂದಾಪುರದ BSF ರಫೀಕ್ ಸಾಹೇಬರ ನಿವಾಸದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕುಂದಾಪುರ ತಾಲೂಕು ಘಟಕದ ಪಧಾಧಿಕಾರಿಗಳ ಆಯ್ಕೆಗಾಗಿ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು.
ಈ ಸಭೆಯಲ್ಲಿ ಸರ್ವಾನುಮತದಿಂದ ಜನಾಬ್ ಬಿ. ಎಸ್. ಎಫ್. ಮುಹಮ್ಮದ್ ರಫೀಕ್ ಅವರನ್ನು ದ್ವಿತೀಯ ಬಾರಿ 2021-2022ರ ಅವಧಿಗೆ ಅಧ್ಯಕ್ಷರನ್ನಾಗಿ ಆರಿಸಲಾಯಿತು. ಸಮೀತಿಯ ಉಪಾಧ್ಯಕ್ಷ ರನ್ನಾಗಿ ಜನಾಬ್ ಎಸ್. ದಸ್ತಗೀರ್ ಸಾಹೇಬ್ ಕಂಡ್ಲೂರು, ಕಾರ್ಯದರ್ಶಿಯಾಗಿ ಮೌಲಾನಾ ಝಮೀರ್ ಅಹ್ಮದ್ ರಶಾದಿ, ಜೊತೆ ಕಾರ್ಯದರ್ಶಿಯಾಗಿ ಜನಾಬ್ ಎಸ್. ಎಸ್. ಹನೀಫ್ ಗುಲ್ವಾಡಿ, ಕೋಶಾಧಿಕಾರಿಯಾಗಿ ಜನಾಬ್ ಮುಹಮ್ಮದ್ ರಿಯಾಝ್ ಕೋಡಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಚುನಾವಣಾ ವೀಕ್ಷಕರಾಗಿ ಜಿಲ್ಲಾ ಜೊತೆ ಕಾರ್ಯದರ್ಶಿ ಜನಾಬ್ ಸಲಾಹುದ್ದೀನ್ ಉಡುಪಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜನಾಬ್ ಅಝೀಝ್ ಉದ್ಯಾವರ, ಜಿಲ್ಲಾ ಕೋಶಾಧಿಕಾರಿ ಜನಾಬ್ ಶಾಬಾನ್ ಹಂಗಳೂರು, ಜಿಲ್ಲಾ ಸಮಿತಿ ಸದಸ್ಯ ಜನಾಬ್ ಮನ್ಸೂರ್ ಮರವಂತೆ ಉಪಸ್ಥಿತರಿದ್ದರು.