ಬೈಂದೂರು : ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ ಹಾಗೂ ಮಾದಕ ವ್ಯಸನಿ ವಿರುದ್ಧ ಜಾಗೃತಿ

ಉಡುಪಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧ ಸಾಬೀತು

ಉಡುಪಿ: 2014ರಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪೋಕ್ಸೋ ಪ್ರಕರಣದಲ್ಲಿ ಆರೋಪಿ ದೋಷಿಯೆಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ್ ವನಮಾಲಾ...

ಮಹಿಳೆಯರು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಯಶಸ್ವಿಯಾಗಬೇಕು : ಸುಮಿತ್ರಾ ನಾಯಕ್

ಉಡುಪಿ ಮಾರ್ಚ್ 8 : ಮಹಿಳೆಯರಿಗೆ ಇಂದು ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಕ್ಕಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ದಿಟ್ಟ ಹೆಜ್ಜೆಯನ್ನಿಟ್ಟು ಮುನ್ನುಗ್ಗಿದರೆ ಮಾತ್ರ ಗುರಿಯನ್ನು ಯಶ್ವಸಿಯಾಗಿ ಮುಟ್ಟಲು ಸಾಧ್ಯ...

ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ : ಬಿಜೆಪಿ ಜನರ ಕೂಗನ್ನು ಹತ್ತಿಕ್ಕುತ್ತಿದೆ : ಆರ್. ಧ್ರುವನಾರಾಯಣ

ಬಿಜೆಪಿ ಸುಳ್ಳುಗಳನ್ನೇ ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಬದಲಾವಣೆ, ಅಭಿವೃದ್ಧಿ ಬಗ್ಗೆ ಮಾತನಾಡುವ ಪ್ರಧಾನಿ ಗಗನಕ್ಕೇರುತ್ತಿರುವ ಬೆಲೆಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ...

ಇದು ಗೊತ್ತು ಗುರಿಯಿಲ್ಲದ ಬಜೆಟ್ – ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು (ಮಾ.8): 2021/22 ಸಾಲಿನ ಮುಂಗಡಪತ್ರ ಮಂಡಿಸಿದ್ದಾರೆ. ನಾವು ಬಜೆಟ್ ಮಂಡನೆಗೆ ವಿರೋಧಿಸಿದ್ದೆವು. ಬಜೆಟ್ ವೇಳೆ ಬಾಯ್ಕಾಟ್ ಮಾಡಿದ್ದೆವು.ಅನೈತಿಕ ಸರ್ಕಾರದ ಬಜೆಟ್ ಕೇಳಬಾರದೆಂದು ವಾಕ್​ಔಟ್ ಮಾಡಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ...

ವೆನ್ಲಾಕ್ ಆಸ್ಪತ್ರೆಯಲ್ಲಿ ವಿದ್ಯುತ್ ಶಾಕ್ : ಯುವಕ ಸಾವು

ಮಂಗಳೂರು (ಮಾ.8): ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ವಿದ್ಯುತ್ ಶಾಕ್ ತಗುಲಿದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತ ಪಟ್ಟವನನ್ನು ಅನೀಶ್ (20) ಎಂದು ಗುರುತಿಸಲಾಗಿದೆ.ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ...

ಬೈಂದೂರು : ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ಹಾಗೂ ಸ್ಥಳೀಯ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬೈಂದೂರಿನ ಹೋಟೆಲ್ ಅಂಬಿಕಾ ಇಂಟರ್ನ್ಯಾಷನಲ್ ನ ಹಾಲ್ ನಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ ಹಾಗೂ ಮಾದಕ ವ್ಯಸನಿ ವಿರುದ್ಧ ಜಾಗ್ರತಿ ಕಾರ್ಯಕ್ರಮ ನಡೆಯಿತು.

ನಮ್ಮ ನಾಡ ಒಕ್ಕೂಟ ಬೈಂದೂರು ಘಟಕದ ಅಧ್ಯಕ್ಷರಾದ ಅಬ್ದುಲ್ ಸಮಿ ಪ್ರಾಸ್ತಾವಿಕ ಭಾಷಣ ನುಡಿದು ಅತಿಥಿಗಳನ್ನು ಸ್ವಾಗತಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗದ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಬೇಕೆಂದು , ನಮ್ಮ ನಾಡ ಒಕ್ಕೂಟದ ಸಂಘಟನಾ ಕಾರ್ಯದರ್ಶಿಯಾದ ಹುಸೇನ್ ಹೈಕಾಡಿ  ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾರಂಭದಿಂದಲೇ ಸರಕಾರಿ ಉದ್ಯೋಗದ ಬಗ್ಗೆ ಆಸಕ್ತಿ ವಹಿಸಿದರೆ ಹಾಗೂ ಪೂರ್ವಾತಯಾರಿಯಂತೆ ಕಲಿತರೆ, ತಮ್ಮ-ತಮ್ಮ ವಿದ್ಯಾಭ್ಯಾಸ ಮುಗಿಯುವ ಹಂತದಲ್ಲಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲು ಸಮಯಾವಕಾಶ ಸಿಗುತ್ತದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೈಂದೂರು ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಕೆ.ಇ.ಎಸ್ ಅವರು ಹಿತನುಡಿದರು.

ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟದ (ಎನ್.ಎನ್.ಓ) ಟ್ರಸ್ಟೀ ಝಮೀರ್ ಅಹ್ಮದ್ ರಶಾದಿ, ಎನ್.ಎನ್. ಓ. ಹೆಬ್ರಿ ಘಟಕದ ಅಧ್ಯಕ್ಷ ಮುಹಮ್ಮದ್ ರಫೀಕ್ ಅಜೆಕಾರು, ಎನ್.ಎನ್. ಓ. ಬೈಂದೂರು ಘಟಕದ ಉಪಾಧ್ಯಕ್ಷರಾದ ಮಮ್ಡು ಇಬ್ರಾಹೀಂ ಮಾಸ್ಟರ್, ಎನ್.ಎನ್. ಓ. ಬೈಂದೂರು ಘಟಕದ ಸಲಹೆಗಾರ ಉಸ್ಮಾನ್ ಜಾಫರ್, ಬೈಂದೂರು ಜುಮಾ ಮಸೀದಿಯ ಖತೀಬ್ ಫೈಝುಲ್ ಬಾರಿ ಮೌಲಾನ ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಸರಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಬ್ದುಲ್ ರವೂಫ್, ಸರಕಾರಿ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಹಮ್ಮದ್ ಅಶ್ಫಾಕ್, ಎನ್.ಎನ್. ಓ. ಬೈಂದೂರು ಘಟಕದ ಉಪಾಧ್ಯಕ್ಷರಾದ ಸಯ್ಯದ್ ಅಜ್ಮಲ್ ಸಹಬ್ (ರಿಟೈರ್ಡ್ ಚಾರ್ಟರ್ಡ್ ಅಕೌಂಟಂಟ್) ಮತ್ತು ಝಹೀರ್ ಅಬ್ಬಾಸ್ ಮುಖ್ರಿ (ಅರಣ್ಯ ಸಿಬ್ಬಂದಿ) ಇವರೆಲ್ಲರಿಗೂ ಸನ್ಮಾನಿಸಲಾಯಿತು.

ಹಮ್ಜತ್ ಹೆಜಮಾಡಿ (ವಕೀಲರು ಮತ್ತು ಸಾಮಾಜಿಕ ಚಿಂತಕರು), ಅಬ್ದುಲ್ ರಝಾಕ್ ಮತ್ತು ಅಹ್ಮದ್ ನೌಝಲ್ ಮುಲ್ಕಿ ಒಳಗೊಂಡ ತಂಡ ಈ ಕಾರ್ಯಕ್ರಮಕ್ಕೆ ಬಂದ ಸುಮಾರು 80 ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಜಾಗೃತಿ ಹಾಗೂ ಸರಕಾರಿ ಉದ್ಯೋಗಗಳ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.

ನೂರುಲ್ ಇಸ್ಲಾಂ ಸಹಬ್ ಕಾರ್ಯಕ್ರಮವನ್ನು ನಡೆಸಿಕೊಟ್ಟರೆ, ಎನ್.ಎನ್. ಓ. ಬೈಂದೂರು ಘಟಕದ ಕಾರ್ಯದರ್ಶಿಗಳಾದ ಅಲ್ತಾಫ್ ಮುಖ್ರಿ ಮತ್ತು ಕಾವಾ ಸಯೀದ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಸಹಾಯವಾದರು.

ಈ ಕಾರ್ಯಕ್ರಮಕ್ಕೆ ಸೋಚ್ ಚಾರಿಟೇಬಲ್ ಟ್ರಸ್ಟ್ (R) ಶಿರೂರು, ನಾಖುದಾ ವೆಲ್ಫೇರ್ ಅಸೋಸಿಯೇಷನ್ (R) ಶಿರೂರು ಹಾಗೂ ಹಳಗೇರಿ ಓವರ್ಸೀಸ್ ಕಮಿಟಿ ಸೌಜನ್ಯ ಬೆಂಬಲ ನೀಡಿ ಪ್ರೋತ್ಸಾಹಿಸಿದರು. ಎನ್.ಎನ್. ಓ. ಬೈಂದೂರು ಘಟಕದ ಕಾರ್ಯದರ್ಶಿ ಫಹೀಮ್ ಮುಗ್ಡಿ ವಂದಿಸಿದರು.

Hot Topics

ಉಡುಪಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧ ಸಾಬೀತು

ಉಡುಪಿ: 2014ರಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪೋಕ್ಸೋ ಪ್ರಕರಣದಲ್ಲಿ ಆರೋಪಿ ದೋಷಿಯೆಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ್ ವನಮಾಲಾ...

ಮಹಿಳೆಯರು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಯಶಸ್ವಿಯಾಗಬೇಕು : ಸುಮಿತ್ರಾ ನಾಯಕ್

ಉಡುಪಿ ಮಾರ್ಚ್ 8 : ಮಹಿಳೆಯರಿಗೆ ಇಂದು ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಕ್ಕಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ದಿಟ್ಟ ಹೆಜ್ಜೆಯನ್ನಿಟ್ಟು ಮುನ್ನುಗ್ಗಿದರೆ ಮಾತ್ರ ಗುರಿಯನ್ನು ಯಶ್ವಸಿಯಾಗಿ ಮುಟ್ಟಲು ಸಾಧ್ಯ...

ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ : ಬಿಜೆಪಿ ಜನರ ಕೂಗನ್ನು ಹತ್ತಿಕ್ಕುತ್ತಿದೆ : ಆರ್. ಧ್ರುವನಾರಾಯಣ

ಬಿಜೆಪಿ ಸುಳ್ಳುಗಳನ್ನೇ ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಬದಲಾವಣೆ, ಅಭಿವೃದ್ಧಿ ಬಗ್ಗೆ ಮಾತನಾಡುವ ಪ್ರಧಾನಿ ಗಗನಕ್ಕೇರುತ್ತಿರುವ ಬೆಲೆಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ...

Related Articles

ಬೀದಿ ಬದಿ ವ್ಯಾಪಾರಿಗಳ ತೆರವು ಮಂಗಳೂರು ಮಹಾನಗರ ಪಾಲಿಕೆಯ ದ್ವಿಮುಖ ಧೋರಣೆ: ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಪ್ರಮುಖ ಪ್ರದೇಶಗಳಿಂದ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಬಡಪಾಯಿಗಳನ್ನು ಎತ್ತಂಗಡಿ ಮಾಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧತೆ ನಡೆಸುತ್ತಿರುವ ಸರಕಾರದ ಕ್ರಮಕ್ಕೆ ಯಾರೂ ಅಡೆತಡೆ...

ಮಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್ ರವರಿಗೆ ಅಭಿನಂದಿಸಿದ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿರುವ, ಪ್ರೇಮಾನಂದ ಶೆಟ್ಟಿಯವರಿಗೆ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ತಮ್ಮ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸುವುದರೊಂದಿಗೆ ಅವರ ಅವಧಿಯಲ್ಲಿ ನಗರ ಪಾಲಿಕೆಯಲ್ಲಿನ...

ಉಡುಪಿ : ಕ್ಯಾಂಪಸ್ ಫ್ರಂಟ್ ವತಿಯಿಂದ ನೀಟ್ ಪ್ರವೇಶ ಪರೀಕ್ಷೆಯ ಶುಲ್ಕ ಹೆಚ್ಚಳ ಖಂಡಿಸಿ 3 ತಾಲೂಕಿನ ತಹಶೀಲ್ದಾರಗಳಿಗೆ ಮನವಿ

ಉಡುಪಿ : ಕ್ಯಾಂಪಸ್ ಫ್ರಂಟ್ ಉಡುಪಿ ವತಿಯಿಂದ ನೀಟ್ ಪ್ರವೇಶ ಪರೀಕ್ಷೆಯ ಶುಲ್ಕ ಹೆಚ್ಚಳದ ವಿರುದ್ಧ ಕಾರ್ಕಳ, ಉಡುಪಿ ಮತ್ತು ಬ್ರಹ್ಮಾವರ ತಾಲೂಕಿನ ತಹಶೀಲ್ದಾರಗಳಿಗೆ ಮನವಿ ಸಲ್ಲಿಸಲಾಯಿತು.ಸಿಎಫ್ಐ ಉಡುಪಿ ಜಿಲ್ಲಾ ಸಮಿತಿ ಸದಸ್ಯ...
Translate »
error: Content is protected !!