ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಚೆನ್ನೈ ಸಜ್ಜಾಗಿದೆ. ಎಂ. ಚಿದಂಬರಂ ಸ್ಟೇಡಿಯಂ ನಲ್ಲಿ ಉಭಯ ತಂಡಗಳು ಸರಣಿಯ ಎರಡನೇ ಪಂದ್ಯವಾಡುತ್ತಿದೆ. ಇಂಗ್ಲೆಂಡ್ ತಂಡ ಮೊದಲ ಪಂದ್ಯ ಗೆದ್ದ ಹುಮ್ಮಸ್ಸಿನಲ್ಲಿದ್ದರೆ, ಟೀಂ ಇಂಡಿಯಾ ತಿರುಗೇಟು ನೀಡಲು ಕಾಯುತ್ತಿದೆ.
ಚಿಪಾಕ್ ಅಂಗಳದಲ್ಲಿ ಟಾಸ್ ಗೆದ್ದ ವಿರಾಟ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆಯಾಗಿದ್ದು, ಟೀಂ ಇಂಡಿಯಾದಲ್ಲೂ ಬದಲವಾಣೆ ಮಾಡಲಾಗಿದೆ. ಭಾರತದ ಪರ ಅಕ್ಷರ್ ಪಟೇಲ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರೆ, ಬಹಳ ಸಮಯದ ಬಳಿಕ ಕುಲದೀಪ್ ಯಾದವ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ವೇಗಿ ಮೊಹಮದ್ ಸಿರಾಜ್ ಇಂದು ಇಶಾಂತ್ ಗೆ ಸಾಥ್ ನೀಡಲಿದ್ದಾರೆ. ವೇಗಿ ಬುಮ್ರಾಗೆ ವಿಶ್ರಾಂತಿ ನೀಡಲಾಗದೆ. ನದೀಂ ಮತ್ತು ವಾಷಿಂಗ್ಟನ್ ಸುಂದರ್ ಕೈಬಿಡಲಾಗಿದೆ