ದೆಹಲಿ ಕಿಸಾನ್ ಪೆರೇಡ್ ಗೆ ಮಸಿ ಬಳಿದವರು ಯಾರು?

ಒಂದು ರೈತ ಹೋರಾಟವನ್ನು ನ್ಯಾಯವಾದ ರೀತಿಯಲ್ಲಿ ಎದುರಿಸಲಾಗದ ಹೇಡಿ ಸರ್ಕಾರ ಕೊನೆಗೆ ಎಂತಹ ನೀಚತನಕ್ಕೆ ಇಳಿಯಬಹುದು ಎಂಬುದು ಇಂದು ದೆಹಲಿಯಲ್ಲಿ ಸಾಬೀತಾಗಿದೆ.

ರೈತರ ಹೋರಾಟಕ್ಕೆ ಮಸಿ ಬಳಿಯಲು ಒಂದು ಅರಾಜಕತಾವಾದಿ ಗುಂಪನ್ನು ತಾನೇ ಹಿಂದಿನಿಂದ ಛೂ ಬಿಟ್ಟು ಅದು ನಡೆಸಿರುವ ಕಿಡಿಗೇಡಿ ಕೃತ್ಯಕ್ಕೆ ಇಡೀ ರೈತ ಸಮುದಾಯವನ್ನು ಹೊಣೆ ಮಾಡಲು ಪ್ರಯತ್ನ ಮಾಡಿದೆ. ಸುಮಾರು ಎರಡು ಲಕ್ಷ ಟ್ರಾಕ್ಟರುಗಳಲ್ಲಿ ಬಂದ ರೈತರು ದೆಹಲಿಯಲ್ಲಿ ಅತ್ಯಂತ ಶಿಸ್ತು ಶಾಂತಿಯಿಂದ ಕಿಸಾನ್ ಪಥಸಂಚಲನೆ ನಡೆಸಿದ್ದಾರೆ. ಆದರೆ ಒಂದು ಕಿಡಿಗೇಡಿ ಗುಂಪು ಮಾತ್ರ ಉದ್ಧಟನತದಿಂದ ವರ್ತಿಸಿ, ರೈತ ಸಂಘಟನೆಗಳ ಒಕ್ಕೂಟ ತಿಳಿಸಿದ್ದ ನಿಯಮಗಳನ್ನು ಪಾಲಿಸದೇ ಕೆಂಪು ಕೋಟೆ ಕಡೆ ನುಗ್ಗಿ ದಾಂದಲೆ ನಡೆಸಿದೆ. ಇದರ ಮುಂಚೂಣಿಯಲ್ಲಿರುವ ವ್ಯಕ್ತಿ ಬಿಜೆಪಿ ಜೊತೆ ನೇರ ಸಂಬಂಧ ಇರುವ ದೀಪ್ ಸಿಧು ಎಂಬಾತ.

ಸುಮಾರು 40 ರೈತ ಸಂಘಟನೆಗಳ ಒಕ್ಕೂಟವಾಗಿರುವ *ಸಂಯುಕ್ತ ಕಿಸಾನ್ ಮೋರ್ಚಾ* ಕಳೆದ 60 ದಿನಗಳಿಂದ ರೈತರಿಗೆ ಮಾರಕವಾದ ಕಾಯ್ದೆಗಳ ವಿರುದ್ಧ ಪಂಜಾಬ್-ದೆಹಲಿ ಸಿಂಘು ಗಡಿಯಲ್ಲಿ ಲಕ್ಷಾಂತರ ರೈತರ ಪ್ರತಿಭಟನೆಯನ್ನು ಸಂಯೋಜಿಸುತ್ತಾ, ಸರ್ಕಾರದ ಜೊತೆ ಮಾತುಕತೆ ನಡೆಸುತ್ತಾ ಬರುತ್ತಿದೆ. ಇಂದು ದೆಹಲಿಯಲ್ಲಿ ರೈತರ ಪರೇಡ್ ನಡೆಸಬೇಕು ಎಂದು ತೀರ್ಮನಿಸಿದ ಮೇಲೆ ದೆಹಲಿ ಪೊಲೀಸರಿಗೂ ಮೋರ್ಚಾದ ನಾಯಕರಿಗೂ ಅಂತಿಮ ಮಾತುಕತೆಯಲ್ಲಿ ನಿರ್ದಿಷ್ಟ ಮಾರ್ಗವನ್ನು ಸೂಚಿಸಲಾಗಿತ್ತು. ಅದರಂತೆ ಇಂದು 11 ಗಂಟೆಗೆ ಸರಿಯಾಗಿ ಟ್ರಾಕ್ಟರ್ ಪರೇಡ್ ಶುರುವಾಗುತ್ತದೆ ಎಂದು ನಿಗದಿಯಾಗಿತ್ತು. ಇಂದು ರೈತರು ಅನುಸರಿಸಬೇಕಾದ ಮಾರ್ಗ ಮತ್ತು ನಿಯಮಗಳ ಕುರಿತು ಎಲ್ಲಾ ರೈತರಿಗೆ ನೆನ್ನೆಯೇ ತಿಳಿಸಿ ಹೇಳಲಾಗಿತ್ತು. ಇಂದು ಲಕ್ಷಾಂತರ ರೈತರು ಅದೇ ರೀತಿ ನಡೆದುಕೊಂಡರು. ಒಂದು ಗುಂಪನ್ನು ಹೊರತುಪಡಿಸಿ.

ಈ ಗುಂಪು ನೆನ್ನೆ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಕ್ಯಾತೆ ತೆಗೆದು ನಾವು ನಿಮ್ಮ ಜೊತೆ ಬರದೇ ನಮ್ಮದೇ ಮಾರ್ಗದಲ್ಲಿ ಹೋಗುತ್ತೇವೆ ಎಂದಿತ್ತು. ಬಿಜೆಪಿ ಜೊತೆ ಸಂಬಂಧ‌ ಹೊಂದಿರುವ, ನರೇಂದ್ರ ಮೋದಿ ಜೊತೆ ನಿಂತುಕೊಂಡು ಅಮಿತ್ ಷಾ ಜೊತೆ ಕುಳಿತುಕೊಂಡು ಫೋಟೋ ತೆಗೆಸಿಕೊಂಡಿದ್ದ ದೀಪ್ ಸಧು (ಬಿಜೆಪಿ ಸಂಸದ ಸನ್ನಿ ಡಿಯೋಲ್ ಸಂಬಂಧಿ ಈತ) ನೆನ್ನೆ ಕೆಲವು ರೈತರೊಂದಿಗೆ ಆವೇಶದಿಂದ ಮಾತಾಡಿದ್ದನ್ನು ಹಲವರು ಗಮನಿಸಿದ್ದಾರೆ. ಈತನೇ ನೆನ್ನೆ ಕೆಂಪು ಕೋಟೆಯ ಬಳಿ ಖಾಲ್ಸಾ ಬಾವುಟ ಹಿಡಿದಿರುವ ವಿಡಿಯೋ ವೈರಲ್ ಆಗಿದೆ. ಈ ಗುಂಪು ಸಂಯುಕ್ತ ಕಿಸಾನ್ ಮೊರ್ಚಾದ ತೀರ್ಮಾನಕ್ಕೆ ವಿರುದ್ಧವಾಗಿ ಇಂದು ಬೆಳಿಗ್ಗೆ ಎಂಟು ಗಂಟೆಗೇ ಬೇರೊಂದು ಮಾರ್ಗದಲ್ಲಿ ಒಳನುಗ್ಗಲು ಪ್ರಯತ್ನಿಸಿದೆ. ಆ ಮಾರ್ಗದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಅವುಗಳನ್ನು ತಳ್ಳಿ,‌ ಟ್ರಾಕ್ಟರುಗಳಿಂದ ಅಡ್ಡ ನಿಲ್ಲಿಸಿದ್ದ ಬಸ್ ಗಳ ಮೇಲೆ ಹರಿಸಿದಾಗ ಲಾಟಿಚಾರ್ಜ್ ಅಗಿ ಹಲವರು ಗಾಯಗೊಂಡಿದ್ದಾರೆ. ಅಂತಿಮವಾಗಿ ಆ ಗುಂಪು ಕೆಂಪು ಕೋಟೆ ತಲುಪಿ ಅಲ್ಲಿ ರಾಷ್ಟ್ರಧ್ವಜರ ಪಕ್ಕದಲ್ಲಿ ಸಿಖ್ ಧಾರ್ಮಿಕ ಧ್ವಜ ಹಾರಿಸಿದೆ.

ವಾಸ್ತವವಾಗಿ ಇಡೀ ಕಿಸಾನ್ ಪಥಸಂಚಲನದ ರೂವಾರಿಯಾದ ಸಂಯುಕ್ತ ಕಿಸಾನ್ ಮೋರ್ಚಾದ ಯೋಜನೆಯಲ್ಲಿ ಕೆಂಪು ಕೋಟೆ ಸಮೀಪಿಸುವ ಯಾವುದೇ ಪ್ಲಾನ್ ಇರಲಿಲ್ಲ. ಅದು ತನ್ನ ಯೋಜನೆಯ ಪ್ರಕಾರವೇ ಯಶಸ್ವೀ ಕಿಸಾನ್ ಪೆರೇಡ್ ನಡೆಸಿದೆ. ಆದರೆ ಅರಾಜಕ ಗುಂಪೊಂದನ್ನು ಛೂ ಬಿಟ್ಟು ಶಾಂತಿಯುತ ಚಳವಳಿಯ ಹೆಸರು ಕೆಡಿಸಲು ಪ್ರಯತ್ನ ಮಾಡಿರುವುದು ಮಾತ್ರ ಖಂಡನೀಯ.
ನಿಸ್ಸಂಶಯವಾಗಿ ಇದೊಂದು ಷಡ್ಯಂತ್ರವಾಗಿದೆ. ಇದರ ಹಿಂದೆ ಇರುವ ಶಕ್ತಿಗಳು ಕೇಂದ್ರ ಸರ್ಕಾರದ ಜೊತೆ ಶಾಮೀಲಾಗಿವೆ. ಇಡೀ ರೈತ ಹೋರಾಟಕ್ಕೆ ಮಸಿ ಬಳಿಯುವ ಉದ್ದೇಶ ಇದರಲ್ಲಿದೆ.

ಗೋದಿ ಮಿಡಿಯಾ ಮಾತ್ರ ಎಂದಿನ ಬುದ್ದಿ ತೋರಿಸಿದೆ. ಇಷ್ಟೆಲ್ಲ ನಡೆದಿದ್ದರೂ ಸಂಯುಕ್ತ ಮೊರ್ಚಾದ ಒಬ್ಬನೇ ನಾಯಕನ ಅಭಿಪ್ರಾಯ ಕೇಳಲಿಲ್ಲ. ಪೂರ್ವನಿಯೋಜಿತ ರೀತಿಯಲ್ಲಿ ರೈತಚಳವಳಿಯ ತೇಜೋವಧೆಯಲ್ಲಿ ತೊಡಗಿದೆ. ಕಿಸಾನ್ ಸಂಯುಕ್ತ ಮೋರ್ಚಾದ ಸೋಷಲ್ ಮೀಡಿಯಾ ಚಾನೆಲ್‌ಗಳನ್ನು ಸ್ಥಗಿತಗೊಳಿಸಿ ಸತ್ಯಾಂಶ ಜಗತ್ತಿಗೆ ತಿಳಿಯದ ರೀತಿ ಸರ್ಕಾರ ಮತ್ತು ಗೋಡಿ ಮೀಡಿಯಾಗಳು ಪಿತೂರಿ ನಡೆಸಿವೆ.

40 ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚಾ ಅತ್ಯಂತ ಶಿಸ್ತುಬದ್ಧವಾಗಿ, ಅತ್ಯಂತ ಸಂಯಮದಿಂದ ಕಳೆದ 60 ದಿನಗಳಿಂದ ಈ ದೇಶ ಕಂಡ ಬೃಹತ್ ರೈತ ಚಳವಳಿಗೆ ನಾಯಕತ್ವ ನೀಡುತ್ತಿದೆ. ಸರ್ಕಾರ ಈ ಹೋರಾಟವನ್ನು ದಮನಿಸಲು ಯತ್ನಿಸಿತು, ಸಾಮ,ದಾನ,ದಂಡ,ಭೇಧ ಎಲ್ಲ ತಂತ್ರ ಕುತಂತ್ರಗಳನ್ನೂ ಸೋತಿತು. ರೈತರ ಒಗ್ಗಟ್ಡಿನ ಮುಂದೆ ಯಾವ ಚಾಣಕ್ಯನ ತಂತ್ರ ಫಲಿಸಲಿಲ್ಲ.
ಇದೀಗ ಹತಾಶೆಯ ಉತ್ತುಂಗದಲ್ಲಿರುವ ಇವರು ಇಂತಹ ನೀಚ ಪಿತೂರಿ ಮಾಡಿದ್ದಾರೆ. ಇದು ಇಡೀ ದೇಶದ ರೈತ ಸಮುದಾಯದ ವಿರುದ್ಧ ನೀಚರು ನಡೆಸುತ್ತಿರುವ ಪಿತೂರಿ. ಇದು ದೇಶದ್ರೋಹದ ಕೆಲಸ.

ಧಿಕ್ಕಾರವಿರಲಿ!

ಲೇಖಕರು – ಹರ್ಷಕುಮಾರ್ ಕುಗ್ವೆ

Hot Topics

ಜೂನ್ 14 ರ ನಂತರ ಉಡುಪಿಯಲ್ಲಿ ಹೊಸ ರೂಲ್ಸ್: ಮದುವೆಗೆ 40 ಮಂದಿಗೆ ಅವಕಾಶ!

ಉಡುಪಿ: ಜಿಲ್ಲೆಯಲ್ಲಿ ಜೂನ್ 14 ರ ನಂತರ ಆನ್'ಲಾಕ್ ಪ್ರಕ್ರಿಯೆ ಆರಂಭವಾಗಲಿದ್ದು ಈಗಾಗಲೇ ಸರ್ಕಾರ ತಿಳಿಸಿರುವಂತೆ 6-2 ಗಂಟೆಯವರೆಗೆ ಅಂಗಡಿ ತೆರೆಯಲು ಅವಕಾಶವಿದೆ.ಆದರೆ ಬಹಳಷ್ಟು ಜನರಲ್ಲಿ ಯಾವ ಅಂಗಡಿ ತೆರೆಯಬೇಕೆಂಬ ಕುರಿತು ಗೊಂದಲವಿದ್ದು...

ಉದಯ ಗಾಣಿಗಾ ಕೊಲೆಯಿಂದಾಗಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದೆ – ಕಠಿಣ ಕಾನೂನು ಕ್ರಮಕ್ಕೆ ಎಡ್ವಕೇಟ್ ಸಂಕಪ್ಪ ಆಗ್ರಹ

ಉಡುಪಿ: ಗಾಣಿಗ ಸಮಾಜದ ಉದಯ ಎನ್ನುವ ಸಾಮಾಜಿಕ ಕಾರ್ಯಕರ್ತನನ್ನು ಹೀನಾಯವಾಗಿ ಹತ್ಯೆ ಮಾಡಿರುವುದು ಜಿಲ್ಲೆಯ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಈ ಹೀನ ಕೃತ್ಯದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ ಸಹಿತ ಪ್ರಮುಖ...

ದಕ್ಷಿಣ ಕನ್ನಡ: ಸೋಂಕು ಹೆಚ್ಚಿರುವ ನಲ್ವತ್ತು ಗ್ರಾಮಗಳು ಸಿಲ್’ಡೌನ್

ಮಂಗಳೂರು (ಕೋಸ್ಟಲ್ ಮಿರರ್): ಸೋಂಕಿತ ಜನರ ಸಂಖ್ಯೆ ಹೆಚ್ಚಿರುವ ಹಳ್ಳಿಗಳು ಮತ್ತು ಪ್ರದೇಶಗಳನ್ನು ಸಂಪೂರ್ಣವಾಗಿ ಲಾಕ್'ಡೌನ್ ಮಾಡುವ ಮೂಲಕ ಮತ್ತು ಸೋಂಕಿತ ಜನರ ಮನೆಗಳನ್ನು ಸಿಲ್'ಡೌನ್ ಹಾಕುವ ಮೂಲಕ ಕೋವಿಡ್ನ ಪಾಸಿಟಿವಿಟಿ ದರವನ್ನು...

Related Articles

ಪ್ರವಾದಿ ಮುಹಮ್ಮದ್(ಸ): ಮಹಿಳಾ ಪರ ಧ್ವನಿ

ಲೋಕ ಕಂಡ ಮಹಾನ್ ನಾಯಕರಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸುವ ಪ್ರಭಾವಪೂರ್ಣ ವ್ಯಕ್ತಿತ್ವ ಬೆರಳೆಣಿಕೆಯಷ್ಟು ಮಂದಿಯದ್ದು ಮಾತ್ರ. ಅಂತಹ ಪ್ರಭಾವಪೂರ್ಣ ವ್ಯಕ್ತಿತ್ವಗಳ ಸಾಲಿನಲ್ಲಿ ಸೇರುತ್ತಾರೆ ಪ್ರವಾದಿ ಮುಹಮ್ಮದ್ (ಸ). ಇವರ ಕಾರ್ಯವೈಖರಿ...

ಪ್ರವಾದಿ ಮುಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ

✍️ಶಮೀರ ಜಹಾನ್,ಮಂಗಳೂರುಜಗತ್ತಿನ ಎಲ್ಲ ಮಸೀದಿಯ ಮಿನಾರಗಳಲ್ಲಿ,ಪ್ರತೀ ಆಝಾನ್ ನಲ್ಲಿ,ಪ್ರತೀ ನಮಾಝಿನಲ್ಲಿ ದಿನದ ಇಪ್ಪತ್ತನ್ನಾಲ್ಕು ಗಂಟೆಗಳಲ್ಲಿ ಮುಸಲ್ಮಾನರು ಅತ್ಯಧಿಕ ಸ್ಮರಿಸುವ ಏಕೈಕ ವ್ಯಕ್ತಿತ್ವ ಮುಹಮ್ಮದ್ (ಸ)ರಾಗಿದ್ದಾರೆ.ಮುಹಮ್ಮದ್(ಸ)ರು ಇಸ್ಲಾಮ್ ಧರ್ಮದ ಸ್ಥಾಪಕರು ಎಂಬ ತಪ್ಪುಕಲ್ಪನೆಯಿದೆ.ಮುಹಮ್ಮದ್(ಸ)ರು ಇಸ್ಲಾಮ್...

ಹೆಸರು ಬದಲಿಸಿದರೆ ದಲಿತ ದೌರ್ಜನ್ಯ ನಿಲ್ಲುವುದೇ?

ಅಭಿಪ್ರಾಯ: ಟಿ ಐ ಬೆಂಗ್ರೆ''Karnataka is the worst state for Dalit's safety - NCRB Data; How can Dalits feel still safe under this congress ruling state...
Translate »
error: Content is protected !!