ಕೋಲ್ಕತ್ತ (ಜ.26): ಭಾರತ ಫುಟ್ಬಾಲ್ ತಂಡದ ಮಾಜಿ ಗೋಲ್ಕೀಪರ್ ಪ್ರಶಾಂತ್ ಡೋರಾ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ
ಅವರಿಗೆ (44) ವರ್ಷ ವಯಸ್ಸಾಗಿತ್ತು.ಕೋಲ್ಕತ್ತ ಮೈದಾನದ ಮೂರು ಪ್ರಮುಖ ಕ್ಲಬ್ಗಳ ಪರ ಆಡಿದ ಹಿರಿಮೆ ಹೊಂದಿದ್ದ ಪ್ರಶಾಂತ್, ಹಿಮೊಪ್ಯಾಗೊಸಿಟಿಕ್ ಲಿಂಫೊಹಿಟ್ಟಿಯೊಸಿಟೊಸಿಸ್ (ಎಚ್ಎಲ್ಎಚ್) ಎಂಬ ಅಪರೂಪದ ಕಾಯಿಲೆಯಿಂದ ಬಳುತ್ತಿದ್ದರು ಎಂದು ಅವರ ಹಿರಿಯ ಸಹೋದರ ಹೇಮಂತ್ ಹೇಳಿದ್ದಾರೆ
1999ರಲ್ಲಿ ಥಾಯ್ಲೆಂಡ್ ವಿರುದ್ಧ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಭಾರತ ತಂಡದ ಪರ ಪ್ರಶಾಂತ್ ಪದಾರ್ಪಣೆ ಮಾಡಿದ್ದರು. ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ (ಸ್ಯಾಫ್) ಕಪ್ ಹಾಗೂ ಸ್ಯಾಫ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಅವರು ಪ್ರತಿನಿಧಿಸಿದ್ದರು.ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.