ಬೆಂಗಳೂರು (ಜ.26): ದೇಶದ ಹಲವಾರು ಸಮಸ್ಯೆಗಳನ್ನು ಒಟ್ಟಾಗಿ ಬಗೆಹರಿಸಿಕೊಳ್ಳಬೇಕು. ಆದರೆ ದೇಶದಲ್ಲಿ ಅಂತಹ ವಾತಾವರಣ ಇಲ್ಲ. ಅಂತಾ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಅಧಿಕಾರದಲ್ಲಿದ್ದಾಗ ನಿಯತ್ತಾಗಿ ಅಧಿಕಾರ ಮಾಡುತ್ತಿದೆವು. ಯಾವುದೇ ಸಂಘರ್ಷಕ್ಕೆ ಅವಕಾಶ ಕೊಡಲಿಲ್ಲ. ರಾಜ್ಯಸಭೆಯಲ್ಲಿ ಭಾಗವಹಿಸಲು ಸಂಕಲ್ಪ ಮಾಡಿದ್ದೇನೆ. ರೈತರ ಕಾಯಿದೆ ರಾಜ್ಯಸಭೆಯಲ್ಲಿ ಮಂಡನೆ ಮಾಡಿದ ಸಂದರ್ಭದಲ್ಲಿ ನಾನೂ ಇದ್ದೆ. ಅಂದೇ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ.
ಎರಡ್ಮೂರು ತಿಂಗಳು ಮಸೂದೆಯನ್ನು ಮುಂದೂಡಿ ಜಂಟಿ ಸಮಿತಿ ಮಾಡಿ ಆ ನಂತರ ಬಿಲ್ ಪಾಸ್ ಮಾಡಿಕೊಳ್ಳಬಹುದಿತ್ತು. ನಾನೂ ಇದೇ ಸಲಹೆ ಕೊಟ್ಟಿದ್ದೆ. ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ರೈತ ಸಮುದಾಯ ಹಾಗೂ ಸರ್ಕಾರಕ್ಕೆ ಸಂಘರ್ಷ ಏರ್ಪಟ್ಟಿದೆ. ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಮಾಡಿದ್ದರೂ ಇದನ್ನು ಬಗೆ ಹರಿಸಲು ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.