ಜ. (26) :ಕೆಲವು ದಿನಗಳ ಹಿಂದೆ 16 ವರ್ಷದ ಹುಡುಗಿ ಬ್ಯಾಂಕ್ ಖಾತೆಗೆ ಬರೋಬ್ಬರಿ 10 ಕೋಟಿ ರೂಪಾಯಿ ಜಮೆಯಾಗಿದ್ದನ್ನು ನೋಡಿ ಶಾಕ್ ಆದ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.
ಸರೋಜಾ ಎಂಬಾಕೆಯ ಅಕೌಂಟ್ ಗೆ ಬರೋಬ್ಬರಿ 10 ಕೋಟಿ ರೂಪಾಯಿ ಹಣ ಜಮೆಯಾಗಿದೆ. ಸದ್ಯಕ್ಕೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಸರೋಜಾ ಅನಕ್ಷರಸ್ಥಳಾಗಿದ್ದು, 2018 ರಿಂದ ಅಲಹಾಬಾದ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದಾಳೆ. ಆದರೆ ಸರೋಜಾ ಸೋಮವಾರ ಬ್ಯಾಂಕಿಗೆ ಹಣ ಡ್ರಾ ಮಾಡಲು ಹೋಗಿದ್ದಾಳೆ. ಆಗ ಅಲ್ಲಿನ ಅಧಿಕಾರಿಗಳು ಆಕೆಯ ಖಾತೆಯಲ್ಲಿ 9.99 ಕೋಟಿ ರೂಪಾಯಿ ಇರುವುದನ್ನು ತಿಳಿಸಿದ್ದಾಳೆ. ಇದರಿಂದ ಗಾಬರಿಯಾದ ಸರೋಜಾ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದಾಳೆ.
ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ತನಗೆ ತಿಳಿದಿಲ್ಲ ಎಂದು ಸರೋಜ್ ಹೇಳಿದ್ದಾಳೆ. ನಂತರ ನೀಲೇಶ್ ಕುಮಾರ್ನ ನಂಬರನ್ನು ನೀಡಿದ್ದಾಳೆ. ಆದರೆ ಆ ನಂಬರಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿದೆ. ಸದ್ಯಕ್ಕೆ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.