ಕೋಲಾರ,(ಜ.26) : ರೈತರ ಟ್ರಾಕ್ಟರ್ ಪರೇಡ್ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿನತ್ತ ಹೊರಟಿದ್ದ ಟ್ರಾಕ್ಟರ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೇರೆ-ಬೇರೆ ವಾಹನಗಳಲ್ಲಿ ರೈತರು ಬೆಂಗಳೂರಿನತ್ತ ತೆರಳುತ್ತಿದ್ದಾರೆ.
ಮಂಗಳವಾರ ಕೋಲಾರದಲ್ಲಿ 72ನೇ ಗಣರಾಜೋತ್ಸವ ಆಚರಣೆ ಮಾಡಲಾಯಿತು. ಸಚಿವ ಸಿ. ಪಿ. ಯೋಗೇಶ್ವರ್ ಅವರು ಧ್ವಜಾರೋಹಣ ಮಾಡಿ, ಪೊಲೀಸರಿಂದ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗೌರವವಂದನೆ ಸ್ವೀಕರಿಸಿದರು.
ಟ್ರಾಕ್ಟರ್ಗಳ ಮೂಲಕ ರೈತರು ಬೆಂಗಳೂರಿನತ್ತ ಹೊರಟಿದ್ದರು. ಆದರೆ, ಟ್ರಾಕ್ಟರ್ ಜಾಥಾಕ್ಕೆ ಅನುಮತಿ ಇಲ್ಲದ ಕಾರಣ ಬಂಗಾರಪೇಟೆ ಪಟ್ಟಣದಲ್ಲಿ ಟ್ರಾಕ್ಟರ್ಗಳನ್ನು ಪೊಲೀಸರು ವಶಕ್ಕೆ ಪಡೆದರು.
ಪೊಲೀಸರ ಕಣ್ಣುತಪ್ಪಿಸಿ ಬೆಂಗಳೂರಿನತ್ತ 20 ಟ್ರಾಕ್ಟರ್ ಪ್ರಯಾಣ ಬೆಳೆಸಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ರೈತರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಂಗಾರಪೇಟೆ ಪಟ್ಟಣದ ಆಸ್ಪತ್ರೆ ವೃತ್ತದಲ್ಲಿ ರೈತನ ಅಣಕು ಶವದ ಯಾತ್ರೆಯನ್ನು ಮಾಡುತ್ತಾ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಟ್ರಾಕ್ಟರ್ನಲ್ಲಿ ಅವರು ಬೆಂಗಳೂರಿನತ್ತ ಹೊರಟಾಗ ಪೊಲೀಸರು ತಡೆದರು.
ಆಗ ರೈತ ಮುಖಂಡರು ಅಲ್ಲೇ ಪ್ರತಿಭಟನೆ ಆರಂಭಿಸಿದರು. ಬಂಗಾರಪೇಟೆ ಪಟ್ಟಣದಿಂದ ಬೆಂಗಳೂರಿನ ತನಕ ಟ್ರಾಕ್ಟರ್ನಲ್ಲಿ ಹೋಗಲು ರೈತರು ಯೋಜನೆ ರೂಪಿಸಿದ್ದರು.