ಮೆಕ್ಸಿಕೊ (ಜ.25) : ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಕೊರೊನಾದಿಂದ ಬಳಲುತ್ತಿದ್ದಾರೆ. ಕೊರೊನಾದಿಂದ ಹೊರ ಬರಲು ಆಂಡ್ರೆಸ್ ಅನುಸರಿಸಲಾಗ್ತಿರುವ ನಿಯಮಗಳ ಬಗ್ಗೆ ತೀವ್ರ ಟೀಕೆಗೊಳಗಾಗಿದ್ದರು. ಹಾಗೆ ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ್ದರು.
ಈಗ ಆಂಡ್ರೆಸ್ ಕೊರೊನಾಗೆ ತುತ್ತಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.ಈ ಬಗ್ಗೆ ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿರುವ ಆಂಡ್ರೆಸ್ ನನಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ ಎನ್ನಲು ದುಃಖವಾಗ್ತಿದೆ. ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದು, ವೈದ್ಯರ ನಿಗಾದಲ್ಲಿದ್ದೇನೆ. ವೈದ್ಯರ ತಂಡದಿಂದ ಚಿಕಿತ್ಸೆ ಸಿಗ್ತಿದೆ ಎಂದು ಆಂಡ್ರೆಸ್ ಹೇಳಿದ್ದಾರೆ.
ಆಂಡ್ರೆಸ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಚರ್ಚೆ ನಡೆಸಬೇಕಿತ್ತು.ರಷ್ಯಾದ ಕೊರೊನಾ ಲಸಿಕೆ ಖರೀದಿ ಬಗ್ಗೆ ಮಾತುಕತೆ ನಡೆಬೇಕಿತ್ತು. ಮೆಕ್ಸಿಕೊದಲ್ಲಿ ಕೊರೊನಾ ಲಸಿಕೆಯನ್ನು ಇನ್ನೂ ಅನುಮೋದಿಸಲಾಗಿಲ್ಲ. ಮೆಕ್ಸಿಕೊದಲ್ಲಿ 1.50 ಲಕ್ಷ ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.