ಉಡುಪಿ ಜಿಲ್ಲಾಮಟ್ಟದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಮಾರ್ಚ್ 2ಕ್ಕೆ ರಾಜ್ಯ ಸಾರಿಗೆ ನೌಕರ ಧರಣಿ ಸತ್ಯಾಗ್ರಹ!

ಬೆಂಗಳೂರು: ವಿವಿಧ ಬೇಡಿಕೆಗೆ ಆಗ್ರಹಿಸಿ ಮತ್ತೆ ಸರ್ಕಾರ ವಿರುದ್ಧದ ಹೋರಾಟಕ್ಕೆ ರಾಜ್ಯ ಸಾರಿಗೆ ನೌಕರರ ಒಕ್ಕೂಟ ಮುಂದಾಗಿದ್ದು, ಮಾರ್ಚ್​ 2ರಂದು ಧರಣಿ ಸತ್ಯಾಗ್ರಹಕ್ಕೆ ಕರೆ ಕೊಟ್ಟಿದೆ. ಈ ಹಿಂದೆ ನಡೆಸಿದ ಧರಣಿ ವೇಳೆ...

ಟಿಕ್ ಟಾಕ್ ಸ್ಟಾರ್ ಆತ್ಮಹತ್ಯೆ: ಸಚಿವ ಸ್ಥಾನಕ್ಕೆ ಸಂಜಯ್ ರಾಥೋಡ್ ರಾಜೀನಾಮೆ – ಏನಿದು ಪ್ರಕರಣ !

ಮುಂಬೈ: ಟಿಕ್ ಟಾಕ್ ಸ್ಟಾರ್ ಪೂಜಾ ಚವಣ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಹಿನ್ನೆಲೆ ಮಹಾರಾಷ್ಟ್ರ ಅರಣ್ಯ ಸಚಿವ ಸಂಜಯ್ ರಾಥೋಡ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಂಜಾರ ಸಮುದಾಯದ ಸಂಜಯ್...

ದೆಹಲಿ ಕೆಂಪು ಕೋಟೆ ಹಿಂಸಚಾರದ ಹಿಂದೆ ಬಿಜೆಪಿ ಇದೆ, ರೈತರು ಅಲ್ಲ : ಕೇಜ್ರಿವಾಲ್ ಗಂಭೀರ ಆರೋಪ

ನವದೆಹಲಿ (ಫೆ.28): ದೆಹಲಿ ಮುಖ್ಯ ಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಮೀರತ್ ನಲ್ಲಿ 'ಕಿಸಾನ್ ಮಹಾಪಂಚಾಯತ್' ಉದ್ದೇಶಿಸಿ ಮಾತನಾಡಿ, ಮೂರು ಕೃಷಿ ಕಾನೂನುಗಳ...

ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಮೂವರ ರಕ್ಷಣೆ

ಕಾರವಾರ (ಫೆ.28): ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತಿದ್ದ ಒಂದೇ ಕುಟುಂಬದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.ರಕ್ಷಣೆಗೋಳಗಾದವರನ್ನು ಸಂಜನ (15), ಸಂಜಯ್ (18),ಕಮಲಮ್ಮ (40) ಎಂದು ಗುರುತಿಸಲಾಗಿದೆ. ಇವರು ಮೂಲತಃ ಬೆಂಗಳೂರಿನ ಕತ್ರಗುಪ್ಪೆಯ ನಿವಾಸಿಗಳಾಗಿದ್ದು ಮುರುಡೇಶ್ವರಕ್ಕೆ...

ಬಿಎಸ್ ವೈ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಹಾರೈಕೆ

ಬೆಂಗಳೂರು (ಫೆ.28):ಇಂದು ಸಿಎಂ ಯಡಿಯೂರಪ್ಪ ಅವರಿಗೆ 79ನೇ ಸಂಭ್ರಮ ಅವರಿಗೆ ಸಚಿವರು, ಶಾಸಕರು, ಆಪ್ತರು, ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಶುಭ ಹಾರೈಕೆಯ ಮಾಹಪೂರವೇ ಹರಿದು ಬರುತ್ತಿದೆ.ಕರ್ನಾಟಕ ಸಿಎಂ ಅವರಿಗೆ ಶುಭಾಶಯಗಳು. ಯಡಿಯುರಪ್ಪ ಜಿ...

ಉಡುಪಿ, ಜ.24: ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಶಕ್ತಿ ಕೇಂದ್ರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಅಂಗವಾಗಿ ಜಿಲ್ಲಾಮಟ್ಟದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಇಂದು ನಿಟ್ಟೂರು ಬಾಲಕಿಯರ ಬಾಲಮಂದಿರದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಪುಟಾಣಿ ಮಕ್ಕಳೊಂದಿಗೆ ಗಿಡಕ್ಕೆ ನೀರು ಸುರಿಯುವ ಮೂಲಕ ಉದ್ಘಾಟಿಸಿದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ, ಮಕ್ಕಳ ಬಾಯಿಗೆ ಜೇನು ತುಪ್ಪಹಾಕಿ ಮಕ್ಕಳ ಭವಿಷ್ಯ ಸಿಹಿ ಯಾಗಿರಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಆರ್.ಶೇಷಪ್ಪ ಮಾತನಾಡಿ, ಮಕ್ಕಳ ರಕ್ಷಣೆ, ಪೋಷಣೆ ಹಾಗೂ ಸರಕಾರದ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಹೆಣ್ಣು ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗುವುದು ಎಂದು ತಿಳಿಸಿದರು.ಮುಖ್ಯ ಅಥಿತಿಯಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್ ಮಕ್ಕಳ ಆರೋಗ್ಯ, ಶಿಕ್ಷಣ, ಪೌಷ್ಟಿಕತೆ, ಬಾಲ್ಯವಿವಾಹ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು.

ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಸುಮತಿ, ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ ಉಪಾಧ್ಯ, ಮಹಿಳಾ ಶಕ್ತಿ ಕೇಂದ್ರದ ಮಹಿಳಾ ಕಲ್ಯಾಣಾಧಿಕಾರಿ ದೀಪಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಉಪಸ್ಥಿತರಿದ್ದರು.ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಚಂದ್ರಿಕಾ ಎಸ್.ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಶಕ್ತಿ ಕೇಂದ್ರದ ಸಂಯೋಜಕಿ ಶಾರದಾ ಸ್ವಾಗತಿಸಿದರು. ಅನುಷಾ ವಂದಿಸಿದರು

LEAVE A REPLY

Please enter your comment!
Please enter your name here

Hot Topics

ಉಳ್ಳಾಲ: ಮಾರುವೇಷದಲ್ಲಿ ಫೀಲ್ಡ್‌ಗೆ ಇಳಿದ ಕಮಿಷನರ್, ಡಿಸಿಪಿ: ಅಕ್ರಮ‌ ಮರಳು ಸಾಗಿಸುತ್ತಿದ್ದ ಲಾರಿ ವಶಕ್ಕೆ

ಉಳ್ಳಾಲ: ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಕುರಿತಂತೆ ನಿರಂತರ ದೂರಿನ ಹಿನ್ನೆಲೆಯಲ್ಲಿ ಸ್ವತಃ ಕಮಿನರೇ ಫೀಲ್ಡ್ ಗೆ ಇಳಿದಿದ್ದಾರೆ. ಈ ನಿಟ್ಟಿನಲ್ಲಿ ಫೆಬ್ರವರಿ 27ರಂದು ಬೆಳಗ್ಗಿನ ಜಾವ ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು...

ಸಾಸ್ತಾನ: ಕಾರು-ಬೈಕ್ ಅಪಘಾತ ; ಬೈಕ್ ಸವಾರ ಮೃತ್ಯು

ಕುಂದಾಪುರ, ಫೆ .28: ಭಾನುವಾರ ಬೆಳಿಗ್ಗೆ ಸಾಸ್ತಾನದ ಗುಂಡ್ಮಿ ಅಂಬಾಗಿಲು ಎಂಬಲ್ಲಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಪ್ರಾಣ ಕಳೆದುಕೊಂಡಿದ್ದಾನೆ.ಮೃತನನ್ನು ಕೋಟಾ ಬನ್ನಾಡಿ ನಿವಾಸಿ ಸುಭಾಷ್ ಅಮೀನ್ (45)...

ಸಮಾಜದ ಅಭಿವೃದ್ಧಿಗೆ ಸಂಘಟನೆ ಅವಶ್ಯಕ – ಶಾಸಕ ರಘುಪತಿ ಭಟ್

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಬ್ರಾಹ್ಮಿ ಸಭಾಭವನ ಸಮರ್ಪಣಾ ಹಾಗೂ ಅಭಿನಂದನಾ ಕಾರ್ಯಕ್ರಮಒಂದು ಸಮಾಜದ ಅಭಿವೃದ್ಧಿಯಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿ ಸಮಾಜದ ಆಸಕ್ತ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಹಸ್ತ ನೀಡಿದಲ್ಲಿ ಸಮಾಜದ ಸರ್ವಾಂಗೀಣ...

Related Articles

ಮಾರ್ಚ್ 2ಕ್ಕೆ ರಾಜ್ಯ ಸಾರಿಗೆ ನೌಕರ ಧರಣಿ ಸತ್ಯಾಗ್ರಹ!

ಬೆಂಗಳೂರು: ವಿವಿಧ ಬೇಡಿಕೆಗೆ ಆಗ್ರಹಿಸಿ ಮತ್ತೆ ಸರ್ಕಾರ ವಿರುದ್ಧದ ಹೋರಾಟಕ್ಕೆ ರಾಜ್ಯ ಸಾರಿಗೆ ನೌಕರರ ಒಕ್ಕೂಟ ಮುಂದಾಗಿದ್ದು, ಮಾರ್ಚ್​ 2ರಂದು ಧರಣಿ ಸತ್ಯಾಗ್ರಹಕ್ಕೆ ಕರೆ ಕೊಟ್ಟಿದೆ. ಈ ಹಿಂದೆ ನಡೆಸಿದ ಧರಣಿ ವೇಳೆ...

ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಮೂವರ ರಕ್ಷಣೆ

ಕಾರವಾರ (ಫೆ.28): ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತಿದ್ದ ಒಂದೇ ಕುಟುಂಬದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.ರಕ್ಷಣೆಗೋಳಗಾದವರನ್ನು ಸಂಜನ (15), ಸಂಜಯ್ (18),ಕಮಲಮ್ಮ (40) ಎಂದು ಗುರುತಿಸಲಾಗಿದೆ. ಇವರು ಮೂಲತಃ ಬೆಂಗಳೂರಿನ ಕತ್ರಗುಪ್ಪೆಯ ನಿವಾಸಿಗಳಾಗಿದ್ದು ಮುರುಡೇಶ್ವರಕ್ಕೆ...

ಬಿಎಸ್ ವೈ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಹಾರೈಕೆ

ಬೆಂಗಳೂರು (ಫೆ.28):ಇಂದು ಸಿಎಂ ಯಡಿಯೂರಪ್ಪ ಅವರಿಗೆ 79ನೇ ಸಂಭ್ರಮ ಅವರಿಗೆ ಸಚಿವರು, ಶಾಸಕರು, ಆಪ್ತರು, ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಶುಭ ಹಾರೈಕೆಯ ಮಾಹಪೂರವೇ ಹರಿದು ಬರುತ್ತಿದೆ.ಕರ್ನಾಟಕ ಸಿಎಂ ಅವರಿಗೆ ಶುಭಾಶಯಗಳು. ಯಡಿಯುರಪ್ಪ ಜಿ...
Translate »
error: Content is protected !!