ಗೋವಾ (ಜ.24): ಗೋವಾ ಮೂಲದ ವ್ಯಕ್ತಿಯೊಬ್ಬ ವಿಐಪಿ ಎಂದು ಹೇಳಿಕೊಂಡು ಹೋಟೆಲ್ವೊಂದನ್ನ ವಂಚಿಸಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಹೋಟೆಲ್ ನಲ್ಲಿ ವಿಐಪಿ ಎಂದು ಕೊಂಡು ಉಳಿದುಕೊಂಡ ದಂಪತಿಗಳು ಬಿಲ್ ಪಾವತಿ ಮಾಡುವ ಸಮಯ ಬಂದಾಗ ಹೋಟೆಲ್ನಿಂದ ಪರಾರಿಯಾಗಿದ್ದಾರೆ.
ಆರೋಪಿಯನ್ನ ಸ್ವಪ್ನಿಲ್ ನಾಯಕ್ ಎಂದು ಗುರುತಿಸಲಾಗಿದೆ.
ಈತ ವಿಐಪಿ ಎಂದು ಹೇಳಿಕೊಂಡು ತನ್ನ ಅಂಗರಕ್ಷಕರಿಗೂ ಮೋಸ ಮಾಡಿದ್ದ ಎನ್ನಲಾಗಿದೆ. ಪೊಲೀಸರ ವರದಿ ಪ್ರಕಾರ ನಾಯಕ್ ಜನವರಿ 2ರಂದು ಗಾಂಧಿನಗರದ ಜಿಯಾನ್ ಹೋಟೆಲ್ಗೆ ಆಗಮಿಸಿ ಕೊಠಡಿ ಕಾಯ್ದಿರಿಸಿದ್ದ.
ಆರು ದಿನಗಳ ಬಳಿಕ ನಾಯಕ್ ಪತ್ನಿ ಜನವರಿ 8ನೇ ತಾರೀಖಿನಂದು ತನ್ನ ಅಂಗರಕ್ಷಕರಿಗೆ ಇನ್ನೂ ಎರಡು ಕೊಠಡಿಗಳನ್ನ ಬುಕ್ ಮಾಡಿದ್ದರು ಎನ್ನಲಾಗಿದೆ. ಒಂದು ದಿನದ ಬಳಿಕ ಅವರು ಮಿನಿ ಬಸ್ ಒಂದನ್ನ ತೆಗೆದುಕೊಂಡು ರಾಮನಗರ ಕಡೆ ಪ್ರವಾಸಕ್ಕೆ ಹೋದವರು ಮತ್ತೆ ಹೋಟೆಲ್ಗೆ ವಾಪಸ್ಸಾಗಿಲ್ಲ.
ಬಸ್ ಮಾಲೀಕನಿಗೂ ಹಣ ನೀಡದೇ ವಂಚಿಸಿದ್ದಾರೆ ಎನ್ನಲಾಗಿದೆ. ಹೋಟೆಲ್ ಸಿಬ್ಬಂದಿ ನೀಡಿದ ದೂರಿನ ಪ್ರಕಾರ ಆಹಾರ ಹಾಗೂ ವಸತಿ ಸೇರಿಸಿ ಹೋಟೆಲ್ನಲ್ಲಿ 1,43,243 ರೂಪಾಯಿ ಬಿಲ್ ಪಾವತಿ ಮಾಡಬೇಕಿದೆ. ಆರೋಪಿ ದಂಪತಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ