ರೈತರ ಹೋರಾಟದಲ್ಲಿ ರೈತರೊಂದಿಗೆ ನಿಂತ ವಾಷಿಂಗ್ ಮಷಿನ್ಗಳು..!

ಟ್ರ್ಯಾಕ್ಟರ್‌ ಪರೇಡ್ ಗೆ ಪೊಲೀಸರಿಂದ ಅನುಮತಿ ಸಿಕ್ಕಿದೆ ಶಾಂತಿಯುತವಾಗಿ ನೆರವೇರುತ್ತೆ : ಕೋಡಿ ಹಳ್ಳಿ ಚಂದ್ರಶೇಖರ್

ಬೆಂಗಳೂರು (ಜ.25): ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸ್ತಿರುವ ರೈತರಿಗೆ ಬೆಂಬಲ ನೀಡಲು ನಾಳೆ ರಾಜ್ಯ ರಾಜ್ಯಧಾನಿಯಲ್ಲಿ ಬೃಹತ್‌ ಮಟ್ಟದಲ್ಲಿ ಟ್ರ್ಯಾಕ್ಟರ್‌ ರ್ಯಾಲಿ ನಡೆಸಲು ರೈತ ಸಂಘಟನೆಗಳು...

ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ಮಾನಸಿಕ ರೋಗಿಯ, ವಿಶು ಶೆಟ್ಟಿ ಅವರಿಂದ ರಕ್ಷಣೆ; ಮಾನವೀಯತೆ ಮೆರೆದ ಆದರ್ಶ್, ಬಾಳಿಗ ಆಸ್ಪತ್ರೆಗಳು

ಉಡುಪಿ,ಜ.22; ಮಾನಸಿಕ ರೋಗದ ಜೊತೆಯಲ್ಲಿ ದೈಹಿಕ ರೋಗದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅಪರಿಚಿತ ರೋಗಿಯನ್ನು ಗುಣಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಿರುವ ಮಾನವೀಯ ಸೇವಾಕಾರ್ಯವು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ನಡೆದಿದೆ. ಆದರ್ಶ್ ಆಸ್ಪತ್ರೆ...

ಮತ್ತೆ ಸಚಿವರ ಖಾತೆ ಅದಲು ಬದಲು : ಆನಂದ್ ಸಿಂಗ್ ಗೆ ಮೂಲಸೌಕರ್ಯ, ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ

ಬೆಂಗಳೂರು (ಜ.25) : ಈಗಾಗಲೇ ಎರಡು ಬಾರಿ ಖಾತೆ ಅದಲು-ಬದಲು ಮಾಡಿದ್ದಂತ ಸಿಎಂ ಯಡಿಯೂರಪ್ಪ, ಈಗ ಮತ್ತೆ ಖಾತೆ ಅದಲು-ಬದಲು ಮಾಡಿದ್ದಾರೆ. ಕೋವಿಡ್ ನಿಯಂತ್ರಣದ ಸಲುವಾಗಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು, ಸಚಿವ ಮಾಧುಸ್ವಾಮಿಗೆ...

ಮಾಸ್ಕ್ ಹಾಕಲು ನಿರಾಕರಿಸಿದ್ದ ಮೆಕ್ಸಿಕೊ ಅಧ್ಯಕ್ಷರಿಗೆ ಕೊರೊನ

ಮೆಕ್ಸಿಕೊ (ಜ.25) : ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಕೊರೊನಾದಿಂದ ಬಳಲುತ್ತಿದ್ದಾರೆ. ಕೊರೊನಾದಿಂದ ಹೊರ ಬರಲು ಆಂಡ್ರೆಸ್ ಅನುಸರಿಸಲಾಗ್ತಿರುವ ನಿಯಮಗಳ ಬಗ್ಗೆ ತೀವ್ರ ಟೀಕೆಗೊಳಗಾಗಿದ್ದರು. ಹಾಗೆ ಕೊರೊನಾ ಸಂದರ್ಭದಲ್ಲಿ ಮಾಸ್ಕ್...

‘ತಾಂಟ್ ರೇ ಬಾ ತಾಂಟ್’ ಎಂದು ಹೇಳಿದ, ಬಳಿಕ ಗುಂಪುಕಟ್ಟಿ ಹಲ್ಲೆ ನಡೆಸಿದ: ತಾಂಟಿದವರ ಪೈಕಿ ಆರು ಮಂದಿ ಪೊಲೀಸರ ಬಲೆಗೆ

ಬೆಳ್ತಂಗಡಿ: ಹೊಟೇಲ್‍ಗೆ ಬಂದ ಗಿರಾಕಿಗಳು ಅಲ್ಲಿನ ಜ್ಯೂಸ್ ಮೇಕರ್‍ನನ್ನು ಗುರಾಯಿಸಿ ನೋಡಿದ್ದು, ಯಾಕೆ ಹಾಗೆ ನೋಡುತ್ತೀ ಎಂದು ಕೇಳಿದ್ದಕ್ಕೆ ‘ತಾಂಟ್‍ರೇ ಬಾ ತಾಂಟ್’ ಎಂದು ಹೇಳಿ ಹೋಗಿದ್ದ ಕೆಲ ಯುವಕರು ಬಳಿಕ 25ರಿಂದ...

ದೇಶದ ಐತಿಹಾಸಿಕ ಹೋರಾಟದಲ್ಲಿ ನಿರತರಾಗಿರುವ ರೈತರ ಜೊತೆಗೆ ಇಡೀ ದೇಶವೇ ನಿಂತಿದೆ. ಇಂತಹ ಒಂದು ಹೋರಾಟದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದಾರೆ. ಕಳೆದ 50 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಠಿಕಾಣಿ ಹೂಡಿರುವ ರೈತರ ಬಟ್ಟೆ ಸ್ವಚ್ಛಗೊಳಿಸಲು ಸುಮಾರು 500ಕ್ಕೂ ಹೆಚ್ಚು ವಾಷಿಂಗ್ ಮಷಿನ್ಗಳು ಕಾರ್ಯನಿರ್ವಹಿಸುತ್ತಿವೆ.

ಪ್ರತಿಭಟನಾ ಸ್ಥಳದಲ್ಲಿ ಖಾಲ್ಸಾ ಏಡ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ರೈತರು ಮತ್ತು ಬೆಂಬಲಿಗರು ಇಲ್ಲಿ ವಾಷಿಂಗ್ ಮಷಿನ್ಗಳನ್ನು ಹಾಕಿದ್ದಾರೆ. ತಮ್ಮ ಕೈಯಲ್ಲಿ ಆದಷ್ಟು, ತಮ್ಮ ಶಕ್ತಿಗೆ ಮೀರಿದಷ್ಟು ಮಷಿನ್ಗಳನ್ನು ಇಲ್ಲಿಡುವ ಪ್ರಯತ್ನ ಮಾಡಿದ್ದಾರೆ.

ಖಾಲ್ಸಾ ಏಡ್ ಟಿಕ್ರಿ ಗಡಿಯೊಂದರಲ್ಲೇ 10 ಮಷಿನ್ಗಳನ್ನು ಬಳಕೆಯಲ್ಲಿವೆ. ಬೇರೆ ಬೇರೆ ಗಡಿಗಳಲ್ಲಿ ಕನಿಷ್ಠ ಆರು ವಾಷಿಂಗ್ ಮಷಿನ್ಗಳನ್ನು ಇದೊಂದೇ ಸಂಸ್ಥೆ ನೀಡಿದೆ. ಇದೆ ರೀತಿ ಪಂಜಾಬ್ನಿಂದ ಬಂದ ಇಬ್ಬರು ಯುವಕರ ತಂಡ ಸಿಂಘು ಗಡಿಯ ಆರಂಭದಲ್ಲೇ ಎರಡು ಮಷಿನ್ಗಳ ಮೂಲಕ ರೈತರ ಬಟ್ಟೆ ಒಗೆದು, ಒಣಗಿಸಿ ಕೊಡುವ ಕೆಲಸ ಮಾಡುತ್ತಿದ್ದಾರೆ.

ಗುರು ಕಾ ಲಂಗರ್ಗಳಲ್ಲಿ ಎರಡೆರಡು ವಾಷಿಂಗ್ ಮಷಿನ್ಗಳನ್ನು ಇಟ್ಟಿದ್ದಾಎಡ. ಈ ಮೂಲಕ ಲಂಗರ್ ಸೇವೆ ಮತ್ತು ಬಟ್ಟೆ ತೊಳೆದುಕೊಡುವ ಸೇವೆಯನ್ನು ಮಾಡಲಾಗುತ್ತಿದೆ.

ಪಂಜಾಬ್ನ ಲೂದಿಯಾನ ಮೂಲದ ಪ್ರಿನ್ಸ್ ಪಾಲ್ ಸಿಂಗ್ ಎಂಬುವರು ನಾಲ್ಕು ವಾಷಿಂಗ್ ಮಷಿನ್ಗಳನ್ನು ಸಿಂಘು ಗಡಿಯಲ್ಲಿ ಇಟ್ಟಿದ್ದು, ರೈತರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ದೆಹಲಿ ಚಲೋಗೆ ಸಾಥ್ ನೀಡಲು ಬಂದಿದ್ದ ಪ್ರಿನ್ಸ್ ಪಾಲ್ ಸಿಂಗ್ ಕೆಲ ದಿನಗಳು ಇಲ್ಲಿಯೇ ಟೆಂಟ್ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದಾರೆ.

ನಾವು ಇಲ್ಲಿಂದ 350 ಕಿಲೊಮೀಟರ್ ದೂರದಲ್ಲಿರುವ ಲೂದಿಯಾನದಿಂದ ಬಂದಿದ್ದೇವೆ. ಮೊದಲು ಇಲ್ಲಿಗೆ ಬಂದು ಟೆಂಟ್ ಹಾಕಿಕೊಂಡಿದ್ದ ಸಂದರ್ಭದಲ್ಲಿ ಬಟ್ಟೆ ಕೊಳೆಯಾಗಿತ್ತು. ಅವುಗಳನ್ನು ವಾಶ್ ಮಾಡಿಸಲು 350 ಕಿಲೋಮೀಟರ್ ದೂರ ಮತ್ತೆ ಪ್ರಯಾಣಿಸಬೇಕಾಯಿತು. ಸ್ವಂತ ಕಷ್ಟಕ್ಕೆ ಒಳಗಾದ ಮೇಲೆ ನನಗೆ ರೈತರ ಕಷ್ಟ ಅನುಭವಕ್ಕೆ ಬಂತು. ನಾನು ಮತ್ತೆ ಊರಿಗೆ ಹೋಗಿ ಅಲ್ಲಿಂದ ನಾಲ್ಕು ವಾಷಿಂಗ್ ಮಷಿನ್ಗಳನ್ನು ಕೊಂಡು ತಂದು ಇಲ್ಲಿ ಇಟ್ಟಿದ್ದೇನೆʼ ಎನ್ನುತ್ತಾರೆ.

ʼಮೊದಲಿಗೆ ನಾನೊಬ್ಬನೇ ಇದ್ದೆ. ಈಗ ಇಲ್ಲಿನ ಸ್ಥಳೀಯ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುವ ಯುವಕರು ಸಹಾಯಕ್ಕೆ ಬಂದಿದ್ದಾರೆ. ಜೊತೆಗೆ ಪ್ರತಿಭಟನೆಯಲ್ಲಿ ಇರುವ ಯುವಕರು ಸಾಥ್ ನೀಡುತ್ತಿದ್ದಾರೆ. ಪಕ್ಕದಲ್ಲಿರುವ ಮನೆ ಮಾಲೀಕ ಬಟ್ಟೆ ಒಗೆಯಲು ಬೇಕಾದ ನೀರು ಮತ್ತು ವಿದ್ಯುತ್ ಶಕ್ತಿ ವ್ಯವಸ್ಥೆಯನ್ನು ಉಚಿತವಾಗಿ ನೀಡಿದ್ದಾರೆʼ ಎಂದು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ʼನಮ್ಮಗಳ ಜೊತೆಗೆ ಇಲ್ಲಿ ಹಲವು ಸಂಘಟನೆಗಳು ವಾಷಿಂಗ್ ಮಷಿನ್ ಹಾಕಿಕೊಂಡಿವೆ. ಅವರುಗಳನ್ನು ಹೊರತುಪಡಿಸಿ ನಮಗೆ ಪ್ರತಿದಿನ ಕನಿಷ್ಟ 300 ಜನ ರೈತರು ಬಟ್ಟೆ ನೀಡುತ್ತಾರೆ. ಬಟ್ಟೆ ವಾಶ್ ಮಾಡಿಕೊಡಲು 20 ನಿಮಿಷ ಸಮಯ ಕೇಳುತ್ತೇವೆ. ನಂತರ ಬಂದು ಕಲೆಕ್ಟ್ ಮಾಡಿಕೊಳ್ಳಲು ತಿಳಿಸಲಾಗುತ್ತದೆʼ. ಇದೊಂದು ಸೇವೆ ಎಂದು ನಾವು ಪರಿಗಣಿಸಿದ್ದೇವೆ. ನಮ್ಮ ರೈತರ ಕಷ್ಟಕ್ಕೆ ನಾವು ನಿಲ್ಲಬೇಕು. ಇದು ದೇಶದ ಎಲ್ಲಾ ರೈತರ ಸಮಸ್ಯೆ ಇದು. ಕೇಂದ್ರ ಸರ್ಕಾರ ಮೂರು ಕಪ್ಪು ಕಾನೂನುಗಳನ್ನು ಪಾವಸ್ ಪಡೆಯುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ನಾನು ಇಲ್ಲಿ ಸೇವೆ ಸಲ್ಲಿಸುತ್ತಲೇ ಇರುತ್ತೇನೆʼ ಎಂದಿದ್ದಾರೆ ಪ್ರಿನ್ಸ್ ಪಾಲ್ ಸಿಂಗ್.

ಇದೇ ರೀತಿ ಹಲವು ವಾಷಿಂಗ್ ಮಷಿನ್ ಟೆಂಟ್ಗಳನ್ನು ಹಾಕಿರುವ ಜನ ಕೂಡ ಪ್ರತಿಭಟನೆ ಅಂತ್ಯವಾಗುವವರೆಗೂ ನಾವು ಸೇವೆ ಸಲ್ಲಿಸುತ್ತೇವೆ ಎನ್ನುತ್ತಾರೆ.

LEAVE A REPLY

Please enter your comment!
Please enter your name here

Hot Topics

ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ಮಾನಸಿಕ ರೋಗಿಯ, ವಿಶು ಶೆಟ್ಟಿ ಅವರಿಂದ ರಕ್ಷಣೆ; ಮಾನವೀಯತೆ ಮೆರೆದ ಆದರ್ಶ್, ಬಾಳಿಗ ಆಸ್ಪತ್ರೆಗಳು

ಉಡುಪಿ,ಜ.22; ಮಾನಸಿಕ ರೋಗದ ಜೊತೆಯಲ್ಲಿ ದೈಹಿಕ ರೋಗದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅಪರಿಚಿತ ರೋಗಿಯನ್ನು ಗುಣಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಿರುವ ಮಾನವೀಯ ಸೇವಾಕಾರ್ಯವು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ನಡೆದಿದೆ. ಆದರ್ಶ್ ಆಸ್ಪತ್ರೆ...

‘ತಾಂಟ್ ರೇ ಬಾ ತಾಂಟ್’ ಎಂದು ಹೇಳಿದ, ಬಳಿಕ ಗುಂಪುಕಟ್ಟಿ ಹಲ್ಲೆ ನಡೆಸಿದ: ತಾಂಟಿದವರ ಪೈಕಿ ಆರು ಮಂದಿ ಪೊಲೀಸರ ಬಲೆಗೆ

ಬೆಳ್ತಂಗಡಿ: ಹೊಟೇಲ್‍ಗೆ ಬಂದ ಗಿರಾಕಿಗಳು ಅಲ್ಲಿನ ಜ್ಯೂಸ್ ಮೇಕರ್‍ನನ್ನು ಗುರಾಯಿಸಿ ನೋಡಿದ್ದು, ಯಾಕೆ ಹಾಗೆ ನೋಡುತ್ತೀ ಎಂದು ಕೇಳಿದ್ದಕ್ಕೆ ‘ತಾಂಟ್‍ರೇ ಬಾ ತಾಂಟ್’ ಎಂದು ಹೇಳಿ ಹೋಗಿದ್ದ ಕೆಲ ಯುವಕರು ಬಳಿಕ 25ರಿಂದ...

ಭಟ್ಕಳ ದಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ

ಭಟ್ಕಳ(ಜ.25):ಭಟ್ಕಳದಲ್ಲಿ ಮಹಿಳೆಯೊಬ್ಬಳಿಗೆ ತಲೆ ಮೇಲೆ ಹೊಡೆದಿದ್ದಲ್ಲದೆ ಅವರ ಸೀರೆಯನ್ನೇ ಕೊರಳಿಗೆ ಬಿಗಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಕೊಪ್ಪದ ಕೊಂಕಣತಿಬೈಲ್‌ನಲ್ಲಿ ನಡೆದಿದೆ. ಕೊಲೆಯಾದವರನ್ನು ಉತ್ತರಕೊಪ್ಪದ ಕೊಂಕಣತಿಬೈಲ್‌ ನಿವಾಸಿ ಲಕ್ಷ್ಮೀ ಕೃಷ್ಣಾ ನಾಯ್ಕ(45) ಎಂದು...

Related Articles

ಮೂಢನಂಬಿಕೆ: ಇಬ್ಬರು‌ ಪತ್ರಿಯರನ್ನು ಹೊಡೆದು ಕೊಂದ ಪೋಷಕರು!

ಮದನಪಲ್ಲಿ: ಆಘಾತಕಾರಿ ಘಟನೆಯೊಂದರಲ್ಲಿ, ದಂಪತಿಗಳು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಡಂಬಲ್ಸ್ ಎಂದು ಶಂಕಿಸಲಾಗಿರುವ ಮೊಂಡಾದ ಆಯುಧದಿಂದ ಹೊಡೆದು ಹತ್ಯೆ ಮಾಡಿದ್ದಾರೆ. ನಗರದ ಹೊರವಲಯದಲ್ಲಿರುವ ಶಿವ ನಗರದ ಶ್ರೀ ಶಿರಡಿ ಸಾಯಿಬಾಬಾ ಅಪಾರ್ಟ್ ಮೆಂಟ್...

ಮುಡಾ ಅಧಿಕಾರಿ ದಿನೇಶ್ ಕುಮಾರ್ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ

ಮಂಗಳೂರು, ಜನವರಿ 25: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತ ದಿನೇಶ್ ಕುಮಾರ್ ಅವರ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಮಾಡಲಾಗಿದೆ. ದಿನೇಶ್ ಕುಮಾರ್ ವಿರುದ್ಧ ಕೊಲೆ ಯತ್ನ ಮತ್ತು ವರದಕ್ಷಿಣೆ ಕಿರುಕುಳ...

ಎರಡು ಬೈಕ್ ಗೆ ಕಾರು ಡಿಕ್ಕಿ : ನಾಲ್ವರ ಸಾವು

ಬಾಗಲಕೋಟೆ (ಜ.25) :ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಎರಡು ಬೈಕ್ ಮತ್ತು ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ....
Translate »
error: Content is protected !!