ದೇಹದ ರೋಗಕ್ಕೆ ಚಿಕಿತ್ಸೆ ಕೊಡುವ ವೈದ್ಯ ಸಮಾಜದ ರೋಗಗಳಿಗೆ ಮದ್ದುಕೊಡುತ್ತಿದ್ದಾರೆ ದರ್ಶನ್ ಪಾಲ್!

ಇದು ರೈತ ಹೋರಾಟದ ಸಂಘಟನೆ, ಸರ್ಕಾರದೊಂದಿಗೆ ಮಾತುಕತೆ, ಮಾಧ್ಯಮ ಹಾಗೂ ನಾಗರಿಕರಿಗೆ ಕೃಷಿ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ರೈತ ನಾಯಕರನ್ನು ಪರಿಚಯಿಸುವ ಸರಣಿ

ಹೋರಾಟದ ಮುಖಗಳು -1

ಎಪ್ಪತ್ತು ವರ್ಷದ ಈ ವ್ಯಕ್ತಿ ಒಂದು ಕಾಲದಲ್ಲಿ ವೈದ್ಯರು. ಅರಿವಳಿಕೆಯ ತಜ್ಞರಾಗಿ ರೋಗ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದರು. ಈಗಲೂ ಅರಿವಳಿಕೆ ಪಡೆದ ಸ್ಥಿತಿಯಲ್ಲಿರುವ ವ್ಯವಸ್ಥೆಗೆ ಮದ್ದು ನೀಡುವ ಹೋರಾಟಕ್ಕೆ ಮುಂಚೂಣಿಯಲ್ಲಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ದೆಹಲಿಯ ನಾಲ್ಕು ದಿಕ್ಕುಗಳಲ್ಲಿ ನಡೆಯುತ್ತಿರುವ ರೈತ ಹೋರಾಟದ ನೇತೃತ್ವವಹಿಸಿರುವ ಇವರ ಹೆಸರು ದರ್ಶನ್‌ ಪಾಲ್. ಕ್ರಾಂತಿಕಾರಿ ಕಿಸಾನ್‌ ಯೂನಿಯನ್‌ ಪಂಜಾಬ್‌ನ ಅಧ್ಯಕ್ಷರಾದ ಇವರು ಕಳೆದ ಜೂನ್‌ ತಿಂಗಳಿಂದ ರೈತರನ್ನು ಸಂಘಟಿಸುತ್ತಿದ್ದಾರೆ.

ಮೂಲತಃ ಪಟಿಯಾಲದವರಾದ ಪಾಲ್‌, ವೈದ್ಯರಾಗಿ ಸೇವೆ ಸಲ್ಲಿಸುತ್ತಲೇ ಹಲವು ರೈತ-ಕಾರ್ಮಿಕ ಸಮಸ್ಯೆಗಳ ಪರವಾಗಿ ಹೋರಾಡಿದವರು. ರೈತ ಸಾಲ ಮನ್ನಾಕ್ಕಾಗಿ ಹಲವು ವರ್ಷಗಳ ಕಾಲ ಹೋರಾಡಿದ್ದರು.

2002ರಲ್ಲಿ ತಮ್ಮ ಪಂಜಾಬ್‌ ನಾಗರಿಕ ವೈದ್ಯ ಸೇವೆ ತೊರೆದ ಪಾಲ್‌ ತಮ್ಮ ಕುಟುಂಬಕ್ಕೆ ಸೇರಿದ 15 ಎಕರೆ ಭೂಮಿಯಲ್ಲಿ ಕೃಷಿ ಆರಂಭಿಸಿದರು. ಹಾಗೆಯೇ ಭಾರತೀಯ ಕಿಸಾನ್‌ ಯೂನಿಯನ್‌ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. 2016ರಲ್ಲಿ ಕ್ರಾಂತಿಕಾರಿ ಕಿಸಾನ್‌ ಯೂನಿಯನ್‌ ಸೇರಿದ ಪಾಲ್‌ ಕಳೆದ ವರ್ಷ ಯೂನಿಯನ್‌ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು.

ಆಲ್‌ ಇಂಡಿಯಾ ಕಿಸಾನ್‌ ಸಂಘರ್ಷ ಸಮಿತಿ ಸದಸ್ಯರೂ ಆಗಿರುವ ಪಾಲ್‌, ರೈತರ ಹೋರಾಟವನ್ನು ಪಂಜಾಬಿಗಷ್ಟೇ ಸೀಮಿತವಾಗಿಸದೆ, ಉತ್ತರ ಪ್ರದೇಶ, ರಾಜಸ್ಥಾನ, ಕರ್ನಾಟಕ, ಮಹಾರಾಷ್ಟ್ರದಲ್ಲೂ ಸಂಘಟಿಸಿದ್ದಾರೆ.

ಈಗ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಟ ಸಂಘಟಿಸಲಾರಂಭಿಸಿದ ಪಾಲ್‌ 31 ಸಂಘಟನೆಗಳನ್ನು ಒಗ್ಗೂಡಿಸಿ, ಸಮನ್ವಯಕಾರರಾಗಿ ಹೋರಾಟ ಮುನ್ನಡೆಸುತ್ತಿದ್ದಾರೆ.

ವರದಿ: ಮಾಸ್ ಮೀಡಿಯಾ ಫೌಂಡೇಶನ್

Hot Topics

ಇಂದಿನಿಂದ ಕರಾವಳಿಯಲ್ಲಿ ಮುಸ್ಲಿಮ್ ಸಮುದಾಯದ ಪವಿತ್ರ ಮಾಸ ರಂಝಾನ್ ಆರಂಭ!

ಉಡುಪಿ/ಮಂಗಳೂರು: ಇಂದಿನಿಂದ ಮುಸ್ಲಿಮ್ ಸಮುದಾಯದ ಪವಿತ್ರ ಮಾಸ ರಂಝಾನ್ ಆರಂಭಗೊಂಡಿದೆ. ಇಸ್ಲಾಮಿಕ್ ಕ್ಯಾಲೆಂಡರ್ ರಂಝಾನಿನಲ್ಲಿ ಪವಿತ್ರ ಗ್ರಂಥ ಕುರ್'ಆನ್ ಅವತೀರ್ಣವಾದ ತಿಂಗಳು ಎಂಬ ನೆಲೆಯಲ್ಲಿ ಮುಸ್ಲಿಮರು ಮೂವತ್ತು ದಿನ ಉಪವಾಸ ಆಚರಿಸುತ್ತಾರೆ.ಕೇರಳದಲ್ಲಿ...

ಬ್ರಹ್ಮಾವರ: ಸಿಡಿಲು ಬಡಿದು ಮನೆಗೆ ಹಾನಿ; ಲಕ್ಷಾಂತರ ರೂಪಾಯಿ ನಷ್ಟ!

ಬ್ರಹ್ಮಾವರ: ಸೋಮವಾರ ರಾತ್ರಿ ಸಿಡಿಲು ಬಡಿದ ಪರಿಣಾಮ ಮನೆಯೊಂದಕ್ಕೆ ಲಕ್ಷಾಂತರ ರೂಪಾಯಿ ಹಾನಿಯುಂಟಾಗಿದೆ.ನೈಲಾಡಿ ಬೂದಾಡಿಯ ನಾಗರತ್ನ ಭುಜಂಗಶೆಟ್ಟಿಯವರ ಮನೆಗೆ ಸಿಡಿಲು ಬಡಿದು ಮನೆಯ ಮಾಡು, ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಇದರಿಂದಾಗಿ ಅವರಿಗೆ ಲಕ್ಷಾಂತರ...

ಮುಸ್ಲಿಂ ಓಟ್ ಬ್ಯಾಂಕ್ ತಯಾರಿ ಮಾಡಿ;ಮೀಸಲಾತಿ ಸೆಮಿನಾರ್ ನಲ್ಲಿ ಶಶಿಧರ ಹೆಮ್ಮಾಡಿ

ಉಡುಪಿ : ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ನಿರ್ದೇಶನ ಮೇರೆಗೆ ಉಡುಪಿ ಜಿಲ್ಲಾ ಸಮಿತಿಯು ಹಮ್ಮಿಕೊಂಡ ಮುಸ್ಲಿಂ ಮೀಸಲಾತಿ ಪ್ರಾಯೋಗಿಕವೇ ಎಂಬ ವಿಚಾರಗೋಷ್ಠಿಯು ಬ್ರಹ್ಮಾವರ ಸಿಟಿ ಸೆಂಟರ್ ಹಾಲ್ ನಲ್ಲಿ ಜಿಲ್ಲಾ...

Related Articles

ಹಳ್ಳಿಯನ್ನು ಚಂಡಮಾರುತದಿಂದ ರಕ್ಷಿಸಲು 25 ಎಕರೆ ಪ್ರದೇಶದಲ್ಲಿ ಮ್ಯಾಂಗ್ರೋವ್ ಕಾಡು ಬೆಳೆಸಿದ ಒರಿಸ್ಸಾದ ಈ ವ್ಯಕ್ತಿ – ಕರಾವಳಿಯ ಜನ ಓದಲೇ ಬೇಕಾದ ಸ್ಟೋರಿ!

ಭಾರತ ದೇಶ ಅತ್ಯಂತ ವೈಪರೀತ್ಯ ಹವಾಮಾನ ತಾಣಗಳಲ್ಲಿ ಒಂದಾದ ಒಡಿಶಾ ರಾಜ್ಉದ ಇತರ ನೈಸರ್ಗಿಕ ವಿಕೋಪಗಳೊಂದಿಗೆ ಪ್ರವಾಹ, ಚಂಡಮಾರುತಗಳು, ಬಿರುಗಾಳಿಗಳು, ಬರಗಳನ್ನು ಅನುಭವಿಸುತ್ತಿರುತ್ತದೆ. ಹವಾಮಾನ ವೈಪರೀತ್ಯದ ಕಾರಣಕ್ಕೆ ಈ ರಾಜ್ಯದ ಆರು ಕರಾವಳಿ...

69 ವರ್ಷಗಳ ಹಿಂದೆ ನಡೆದ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್‌ ಪರೇಡ್‌ ನಡೆದಿತ್ತು!

ನವದೆಹಲಿ, ಜ. 21: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಹೋರಾಟ ನಡೆಸುತ್ತಿರುವ ರೈತರು ಜ. 26ರಂದು ಟ್ರ್ಯಾಕ್ಟರ್‌ ಪರೇಡ್‌ ನಡೆಸುತ್ತಿರುವುದು ತಿಳಿದೇ ಇದೆ. ಆದರೆ 69 ವರ್ಷಗಳ ಹಿಂದೆ ನಡೆದ ಗಣರಾಜ್ಯೋತ್ಸವಂದು ನಡೆದ...

ರೈತ ಹೋರಾಟದ ಕಿಡಿ ಸಿಡಿಸಿದ ಜಗಮೋಹನ್‌ ಸಿಂಗ್‌ ಪಟಿಯಾಲ

ಹೋರಾಟದ ಮುಖಗಳು -2ಪಟಿಯಾಲದ ಮೂಲದ ಇವರಿಗೆ 64 ವರ್ಷ. ಕೆಲ ಕಾಲ ಸರ್ಕಾರಿ ಸೇವೆಯಲ್ಲಿದ್ದು, ಕೃಷಿಯತ್ತ ಹೊರಳಿದರು. ದೀರ್ಘ ಕಾಲ ರೈತ ಸಮಸ್ಯೆಗಳ ಪರ ದನಿಯಾಗಿ ದುಡಿದ ಈ ವ್ಯಕ್ತಿ ಇಂದು ವಿಶ್ವದೆಲ್ಲೆಡೆಯಿಂದ...
Translate »
error: Content is protected !!