ಪಿಲ್ಲರ್‌ ನಂಬರ್‌… ಎಂದು ಶುರುವಾಗುವ ರೈತರ ಹೊಸ ಪಿಲ್ಲರ್‌ ವಿಳಾಸಗಳು!

ಅಕ್ರಮವಾಗಿ ದನದ ಮಾಂಸ ಸಾಗಾಟಕ್ಕೆ ಯತ್ನದ ಆರೋಪ ;ಹಾಸನದಲ್ಲಿ ವಾಹನ ಸೇರಿ ಇಬ್ಬರ ಬಂಧನ

ಹಾಸನ: ಜನವರಿ 24ರ ಭಾನುವಾರ ಪೊಲೀಸರು ಏಳು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಮೀನು ಸಾಗಣೆಗೆ ಬಳಸುವ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ನಾಲ್ಕು ಟನ್ ಗೋಮಾಂಸವನ್ನು ತುಂಬಿ ಮಂಗಳೂರಿಗೆ ಸಾಗಿಸಲು ಯತ್ನಿಸುತ್ತಿರುವ...

ಟ್ರ್ಯಾಕ್ಟರ್‌ ಪರೇಡ್ ಗೆ ಪೊಲೀಸರಿಂದ ಅನುಮತಿ ಸಿಕ್ಕಿದೆ ಶಾಂತಿಯುತವಾಗಿ ನೆರವೇರುತ್ತೆ : ಕೋಡಿ ಹಳ್ಳಿ ಚಂದ್ರಶೇಖರ್

ಬೆಂಗಳೂರು (ಜ.25): ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸ್ತಿರುವ ರೈತರಿಗೆ ಬೆಂಬಲ ನೀಡಲು ನಾಳೆ ರಾಜ್ಯ ರಾಜ್ಯಧಾನಿಯಲ್ಲಿ ಬೃಹತ್‌ ಮಟ್ಟದಲ್ಲಿ ಟ್ರ್ಯಾಕ್ಟರ್‌ ರ್ಯಾಲಿ ನಡೆಸಲು ರೈತ ಸಂಘಟನೆಗಳು...

ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ಮಾನಸಿಕ ರೋಗಿಯ, ವಿಶು ಶೆಟ್ಟಿ ಅವರಿಂದ ರಕ್ಷಣೆ; ಮಾನವೀಯತೆ ಮೆರೆದ ಆದರ್ಶ್, ಬಾಳಿಗ ಆಸ್ಪತ್ರೆಗಳು

ಉಡುಪಿ,ಜ.22; ಮಾನಸಿಕ ರೋಗದ ಜೊತೆಯಲ್ಲಿ ದೈಹಿಕ ರೋಗದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅಪರಿಚಿತ ರೋಗಿಯನ್ನು ಗುಣಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಿರುವ ಮಾನವೀಯ ಸೇವಾಕಾರ್ಯವು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ನಡೆದಿದೆ. ಆದರ್ಶ್ ಆಸ್ಪತ್ರೆ...

ಮತ್ತೆ ಸಚಿವರ ಖಾತೆ ಅದಲು ಬದಲು : ಆನಂದ್ ಸಿಂಗ್ ಗೆ ಮೂಲಸೌಕರ್ಯ, ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ

ಬೆಂಗಳೂರು (ಜ.25) : ಈಗಾಗಲೇ ಎರಡು ಬಾರಿ ಖಾತೆ ಅದಲು-ಬದಲು ಮಾಡಿದ್ದಂತ ಸಿಎಂ ಯಡಿಯೂರಪ್ಪ, ಈಗ ಮತ್ತೆ ಖಾತೆ ಅದಲು-ಬದಲು ಮಾಡಿದ್ದಾರೆ. ಕೋವಿಡ್ ನಿಯಂತ್ರಣದ ಸಲುವಾಗಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು, ಸಚಿವ ಮಾಧುಸ್ವಾಮಿಗೆ...

ಮಾಸ್ಕ್ ಹಾಕಲು ನಿರಾಕರಿಸಿದ್ದ ಮೆಕ್ಸಿಕೊ ಅಧ್ಯಕ್ಷರಿಗೆ ಕೊರೊನ

ಮೆಕ್ಸಿಕೊ (ಜ.25) : ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಕೊರೊನಾದಿಂದ ಬಳಲುತ್ತಿದ್ದಾರೆ. ಕೊರೊನಾದಿಂದ ಹೊರ ಬರಲು ಆಂಡ್ರೆಸ್ ಅನುಸರಿಸಲಾಗ್ತಿರುವ ನಿಯಮಗಳ ಬಗ್ಗೆ ತೀವ್ರ ಟೀಕೆಗೊಳಗಾಗಿದ್ದರು. ಹಾಗೆ ಕೊರೊನಾ ಸಂದರ್ಭದಲ್ಲಿ ಮಾಸ್ಕ್...

೧. ಪಿಲ್ಲರ್ ನಂ‌, 803
 ದಿಲ್ಜಿತ್‌ ಸರ್‌ಪಂಚ್‌ ಸಿಂಗ್
ಟಿಕ್ರಿ ಬಾರ್ಡರ್‌,
ದೆಹಲಿ

೨. ಪಿಲ್ಲರ್‌ ನಂ. ೭೮೦,
ವಿರೇಂದರ್‌ ಸಿಂಗ್
ಟಿಕ್ರಿ ಬಾರ್ಡರ್‌
ದೆಹಲಿ

ಈ ವಿಳಾಸಗಳು ದೆಹಲಿಯಲ್ಲಿ ಹಲವಾರು ವರ್ಷಗಳಿಂದ ವಾಸ ಮಾಡುತ್ತಿರುವ ಯಾರದ್ದೋ ಶಾಶ್ವತ ವಿಳಾಸಗಳಲ್ಲ. ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಜಗ್ಗದೆ ಇದ್ದರೇ ಶಾಶ್ವತ ವಿಳಾಸಗಳಾಗಿ ಮಾರ್ಪಡುವ ಜಾಗಗಳಿವು ಎನ್ನುವ ದಿಟ್ಟ ಎಚ್ಚರಿಕೆ ನೀಡಿರುವ ರೈತ ಹೋರಾಟಗಾರರದ್ದು. 
ಹೌದು, ಈಗಾಗಲೇ ರೈತ ಹೋರಾಟ ಶುರಾವಾಗಿ 45ನೇ ದಿನಕ್ಕೆ ಕಾಲಿಟ್ಟಿದೆ. ತಮ್ಮ ಮನೆ, ಊರು, ಜಿಲ್ಲೆಗಳನ್ನು ತೊರೆದು ಇಲ್ಲಿ ನೆಲೆಸಿರುವ ರೈತರು ಇಲ್ಲಿಯೇ ಹೊಸ ವಿಳಾಸಗಳನ್ನು ನೀಡುವುದನ್ನು ಆರಂಭಿಸಿದ್ದಾರೆ. ತಮ್ಮ ಹಳ್ಳಿಗಳಿಂದ ಪ್ರತಿಭಟನಾ ಸ್ಥಳಕ್ಕೆ ಬರುವ ಗ್ರಾಮದ ಜನರಿಗೆ, ಪ್ರತಿಭಟನೆ ಬೆಂಬಲಿಸಲು ಬರುವ ಜನರಿಗೆ ತಮ್ಮ ಇರುವಿಕೆಯನ್ನು ತಿಳಿಸಲು ಈ ಪಿಲ್ಲರ್‌ಗಳನ್ನು ವಿಳಾಸವಾಗಿ ನೀಡುತ್ತಾರೆ.
ಈ ಪಿಲ್ಲರ್‌ ನಂಬರ್‌ಗಳು ಯಾವುವು ಎಂದು ಅನುಮಾನ ಮೂಡುತ್ತಿದ್ದರೇ, ಇವು ದೆಹಲಿಯ ಟಿಕ್ರಿ ಬಾರ್ಡರ್‌ನಲ್ಲಿರುವ ಮೆಟ್ರೊ ಪಿಲ್ಲರ್‌ಗಳು. ಟಿಕ್ರಿ ಬಾರ್ಡರ್ ಮೆಟ್ರೋ ನಿಲ್ದಾಣದ ೭೫೦ನೇ ಮೆಟ್ರೋ ಪಿಲ್ಲರ್‌ನಿಂದ ಶುರುವಾಗುವ ಪಿಲ್ಲರ್‌ ವಿಳಾಸಗಳು, ಮೂರು ಮೆಟ್ರೋ ಸ್ಟೇಷನ್‌ಗಳನ್ನು ಸೇರಿಸುವ ೮೨೦ನೇ ಪಿಲ್ಲರ್‌ವರೆಗೂ ಮುಂದುವರೆಯುತ್ತದೆ.
ಪಿಲ್ಲರ್‌ಗಳ ಕೆಳಗೆ ಟ್ರ್ಯಾಲಿಯಲ್ಲಿ ಜೀವನ ನಡೆಸುತ್ತಿರುವವರು,‌ ಊಟ, ಚಹಾದ ಲಂಗರ್‌ಗಳನ್ನು ಹಾಕಿಕೊಂಡಿರುವವರು, ಮೆಡಿಕಲ್‌ ಕ್ಯಾಂಪ್‌ಗಳ ವಿಳಾಸ ದೊರೆಯುವುದು ಇದೇ ರೀತಿಯಲ್ಲಿ. ಇದಲ್ಲದೇ ರೈತ ಹೋರಾಟದ ಸುದ್ದಿ ಪತ್ರಿಕೆ ಟ್ರ್ಯಾಲಿ ಟೈಮ್ಸ್‌ ಇರುವುದು ಪಿಲ್ಲರ್‌ ನಂಬರ್‌ ೭೮೩ನಲ್ಲೆ. ಅವರು ನಮಗೆ ಬರ ಹೇಳಿದ್ದು ಪಿಲ್ಲರ್‌ ವಿಳಾಸ ನೀಡಿಯೇ.
ಇದು ಮೇಟ್ರೋ ಕೆಳಗಿನ ಪಿಲ್ಲರ್‌ಗಳ ಟ್ರ್ಯಾಲಿ ವಿಳಾಸಗಳ ಕಥೆಯಾದರೇ,  ಇನ್ನು ಬಹುದುರ್‌ಪುರ್ ಹೈವ್‌ ಕಡೆಯಲ್ಲಿ ಸುಮಾರು ೧೦ ಕಿಲೋ ಮಿಟರ್‌ ಉದ್ದ ಟ್ರ್ಯಾಲಿಗಳನ್ನು ನಿಲ್ಲಿಸಿಕೊಂಡಿರುವ ರೈತ ಹೋರಾಟಗರರು ವಿಳಾಸ ನೀಡಲು ತಾವು ಕಂಡುಕೊಂಡಿರುವ ಮಾಗ ಮತ್ತಷ್ಟು ಕುತೂಹಲ ಮುಟ್ಟಿಸುತ್ತವೆ. 
ರೈತ ಹೋರಾಟಗಾರರು ಪಂಜಾಬ್‌ನಿಂದ ಬಂದಿದ್ದರೇ ಅವರಿಗೆ, ಅವರ ಜಿಲ್ಲೆ, ಗ್ರಾಮದ ಹೆಸರುಗಳಲ್ಲಿ ಬೋರ್ಡ್‌ಗಳನ್ನು ನೀಡಲಾಗಿದೆ. ತಾವು ತಂಗಿರುವ ಟ್ರ್ಯಾಲಿ ಪಕ್ಕದ ರಸ್ತೆಯ ಬದಿಯಲ್ಲಿ ಇದನ್ನು ನೆಡಲಾಗಿದೆ. ತಾವು ಯಾವ ಜಿಲ್ಲೆಯ, ಎಷ್ಟು ದೂರದ ಗ್ರಾಮದಿಂದ ಬಂದಿದ್ದೇವೆ ಎಂಬುದನ್ನು ನಾಮ ಫಲಕದಲ್ಲಿ ಬರೆದಿರುತ್ತಾರೆ. ಇದನ್ನೂ ಕೂಡ ವಿಳಾಸ ರೀತಿ ಬಳಸಲಾಗುತ್ತಿದೆ.

ಒಂದೊಂದು ಟ್ರ್ಯಾಲಿಗೂ ಟ್ರ್ಯಾಲಿ ಸಂಖ್ಯೆ ನೀಡಲಾಗಿದೆ. ಇದನ್ನೂ ಜಿಲ್ಲೆಗಳ ಆಧಾರದಲ್ಲಿ ನೀಡಲಾಗಿದ್ದು, ಅದರಲ್ಲಿಯೂ ಹಲವು ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಉದಾಹರಣೆಗೆ ಪ್ಲಾಟ್‌ ನಂಬರ್‌ ೨೦೧ ಎಂದಿದ್ದರೇ, ಮತ್ತೊಂದು ಟ್ರ್ಯಾಲಿಗೆ ೨೦೧ಎ ಎಂದು ನೀಡಲಾಗಿದೆ.

ರೈತ ಹೋರಾಟಕ್ಕೆ ಪಾಳಿಗಳ ರೀತಿಯಲ್ಲಿ ಪ್ರತಿಭಟನಾಕಾರರು ತಮ್ಮ ತಮ್ಮ ಗ್ರಾಮಗಳಿಂದ ಬರುತ್ತಿರುವುದರಿಂದ ಅವರಿಗೆ ತಾವಿರುವ ಸ್ಥಳ ಹೇಗೆ ಸುಲಭವಾಗಿ ದೊರೆಯಬಹುದು ಎಂಬುದನ್ನು ಗಮನದಲ್ಲಿ ಇರಿಸಿಕೊಂಡು ಇಂತಹ ವ್ಯವಸ್ಥೆ ಮಾಡಲಾಗಿದೆ.

ನಮ್ಮ ತಂಡ ಕೂಡ ಟಿಕ್ರಿ ಬಾರ್ಡರ್‌ನಲ್ಲಿ ಇಳಿದು ರೈತ ಹೋರಾಟಗಾರರ ಸಭೆಗೆ ಹೋಗಲು ಕರೆ ಮಾಡಿದಾಗ ಅವರಿಂದ ನಮಗೆ ಸಿಕ್ಕ ವಿಳಾಸವು ಇದೆ ರೀತಿಯದ್ದು. ಪಿಲ್ಲರ್‌ ೮೦೫ ರ ಬಳಿ ಬನ್ನಿ ಅಲ್ಲಿ ನಾವು ನಿಮಗೆ ಸಿಗುತ್ತೇವೆ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡರಾದ ಸುರೀಂಧರ್‌ ಸಿಂಗ್‌ ಹೇಳಿದಾಗ ನಮಗೂ ಒಮ್ಮೆ ಅದ್ಯಾವ ಪಿಲ್ಲರ್‌ ಎಂಬ ಕುತೂಹಲ ಸಹಜವಾಗಿಯೇ ಮೂಡಿತ್ತು.

ಈಗಾಗಲೇ ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ವನಡುವೆ ನಡೆದ ೮ನೇ ಸುತ್ತಿನ ಮಾತುಕಥೆ ಕೂಡ ಮುರಿದು ಬಿದ್ದಿದೆ. ಮುಂದಿನ ಮಾತುಕತೆಗಳನ್ನು ರೈತರು ಬಹಿಷ್ಕರಿಸುವ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ರೈತರ ದೃಢ ನಿರ್ಧಾರ ನೋಡಿದರೇ, ಈ ಪಿಲ್ಲರ್‌, ಬೋರ್ಡ್‌ ವಿಳಾಸಗಳು ಒಂದೆರಡು ವರ್ಷಗಳವರೆಗೆ ಶಾಶ್ವತ ವಿಳಾಸಗಳಾಗುವ ಮುನ್ಸುಚನೆಯೇ ಎಂಬ ಅನುಮಾನ ಕಾಡದೇ ಇರದು.

ವರದಿ:

ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ

LEAVE A REPLY

Please enter your comment!
Please enter your name here

Hot Topics

ಅಕ್ರಮವಾಗಿ ದನದ ಮಾಂಸ ಸಾಗಾಟಕ್ಕೆ ಯತ್ನದ ಆರೋಪ ;ಹಾಸನದಲ್ಲಿ ವಾಹನ ಸೇರಿ ಇಬ್ಬರ ಬಂಧನ

ಹಾಸನ: ಜನವರಿ 24ರ ಭಾನುವಾರ ಪೊಲೀಸರು ಏಳು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಮೀನು ಸಾಗಣೆಗೆ ಬಳಸುವ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ನಾಲ್ಕು ಟನ್ ಗೋಮಾಂಸವನ್ನು ತುಂಬಿ ಮಂಗಳೂರಿಗೆ ಸಾಗಿಸಲು ಯತ್ನಿಸುತ್ತಿರುವ...

ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ಮಾನಸಿಕ ರೋಗಿಯ, ವಿಶು ಶೆಟ್ಟಿ ಅವರಿಂದ ರಕ್ಷಣೆ; ಮಾನವೀಯತೆ ಮೆರೆದ ಆದರ್ಶ್, ಬಾಳಿಗ ಆಸ್ಪತ್ರೆಗಳು

ಉಡುಪಿ,ಜ.22; ಮಾನಸಿಕ ರೋಗದ ಜೊತೆಯಲ್ಲಿ ದೈಹಿಕ ರೋಗದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅಪರಿಚಿತ ರೋಗಿಯನ್ನು ಗುಣಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಿರುವ ಮಾನವೀಯ ಸೇವಾಕಾರ್ಯವು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ನಡೆದಿದೆ. ಆದರ್ಶ್ ಆಸ್ಪತ್ರೆ...

‘ತಾಂಟ್ ರೇ ಬಾ ತಾಂಟ್’ ಎಂದು ಹೇಳಿದ, ಬಳಿಕ ಗುಂಪುಕಟ್ಟಿ ಹಲ್ಲೆ ನಡೆಸಿದ: ತಾಂಟಿದವರ ಪೈಕಿ ಆರು ಮಂದಿ ಪೊಲೀಸರ ಬಲೆಗೆ

ಬೆಳ್ತಂಗಡಿ: ಹೊಟೇಲ್‍ಗೆ ಬಂದ ಗಿರಾಕಿಗಳು ಅಲ್ಲಿನ ಜ್ಯೂಸ್ ಮೇಕರ್‍ನನ್ನು ಗುರಾಯಿಸಿ ನೋಡಿದ್ದು, ಯಾಕೆ ಹಾಗೆ ನೋಡುತ್ತೀ ಎಂದು ಕೇಳಿದ್ದಕ್ಕೆ ‘ತಾಂಟ್‍ರೇ ಬಾ ತಾಂಟ್’ ಎಂದು ಹೇಳಿ ಹೋಗಿದ್ದ ಕೆಲ ಯುವಕರು ಬಳಿಕ 25ರಿಂದ...

Related Articles

69 ವರ್ಷಗಳ ಹಿಂದೆ ನಡೆದ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್‌ ಪರೇಡ್‌ ನಡೆದಿತ್ತು!

ನವದೆಹಲಿ, ಜ. 21: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಹೋರಾಟ ನಡೆಸುತ್ತಿರುವ ರೈತರು ಜ. 26ರಂದು ಟ್ರ್ಯಾಕ್ಟರ್‌ ಪರೇಡ್‌ ನಡೆಸುತ್ತಿರುವುದು ತಿಳಿದೇ ಇದೆ. ಆದರೆ 69 ವರ್ಷಗಳ ಹಿಂದೆ ನಡೆದ ಗಣರಾಜ್ಯೋತ್ಸವಂದು ನಡೆದ...

ರೈತ ಹೋರಾಟದ ಕಿಡಿ ಸಿಡಿಸಿದ ಜಗಮೋಹನ್‌ ಸಿಂಗ್‌ ಪಟಿಯಾಲ

ಹೋರಾಟದ ಮುಖಗಳು -2 ಪಟಿಯಾಲದ ಮೂಲದ ಇವರಿಗೆ 64 ವರ್ಷ. ಕೆಲ ಕಾಲ ಸರ್ಕಾರಿ ಸೇವೆಯಲ್ಲಿದ್ದು, ಕೃಷಿಯತ್ತ ಹೊರಳಿದರು. ದೀರ್ಘ ಕಾಲ ರೈತ ಸಮಸ್ಯೆಗಳ ಪರ ದನಿಯಾಗಿ ದುಡಿದ ಈ ವ್ಯಕ್ತಿ ಇಂದು ವಿಶ್ವದೆಲ್ಲೆಡೆಯಿಂದ...

ದೇಹದ ರೋಗಕ್ಕೆ ಚಿಕಿತ್ಸೆ ಕೊಡುವ ವೈದ್ಯ ಸಮಾಜದ ರೋಗಗಳಿಗೆ ಮದ್ದುಕೊಡುತ್ತಿದ್ದಾರೆ ದರ್ಶನ್ ಪಾಲ್!

ಇದು ರೈತ ಹೋರಾಟದ ಸಂಘಟನೆ, ಸರ್ಕಾರದೊಂದಿಗೆ ಮಾತುಕತೆ, ಮಾಧ್ಯಮ ಹಾಗೂ ನಾಗರಿಕರಿಗೆ ಕೃಷಿ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ರೈತ ನಾಯಕರನ್ನು ಪರಿಚಯಿಸುವ ಸರಣಿ ಹೋರಾಟದ ಮುಖಗಳು -1 ಎಪ್ಪತ್ತು ವರ್ಷದ ಈ...
Translate »
error: Content is protected !!