ಅಂತರ್-ಧರ್ಮಿಯ ಪ್ರಣಯದ ವಿರುದ್ಧ ಕ್ರಿಮಿನಲ್ ಪಿತೂರಿ – (ಭಾಗ ಮೂರು)

ಲೇಖಕರು: ಟಿ ಐ ಬೆಂಗ್ರೆ (ವಕೀಲರು,ಬೆಂಗಳೂರು)

ವಿಶ್ವಾಸ ಮತ್ತು ಪ್ರಣಯ

ವಿಶ್ವಾಸ ಎಂದರೆ ಒಂದು ವಿಷಯವನ್ನು ಯಾವುದೇ ಪುರಾವೆಯ ಜೊತೆ ಅಥವಾ ಪುರಾವೆ ಇಲ್ಲದೆ ಒಪ್ಪಿಕೊಳ್ಳುವುದು. ಒಬ್ಬ ಪ್ರಜ್ಞೆ ಇಲ್ಲದ ವ್ಯಕ್ತಿಯ ವಿಶ್ವಾಸವನ್ನು, ವಿಶ್ವಾಸ ಎಂದು ಕರೆಯಲು ಸಾಧ್ಯವಿಲ್ಲ. ಅಂದರೆ ಒಂದು ವಿಶ್ವಾಸವನ್ನು ಇನ್ನೊಬ್ಬನ ಮೇಲೆ ಹೇರಲು ಸಾಧ್ಯವಿಲ್ಲ. ಏಕೆಂದರೆ ವಿಶ್ವಾಸ ಎನ್ನುವುದು ವ್ಯಕ್ತಿಯ ಅಂತರಾಳದಲ್ಲಿ ಹುದುಗಿರುತ್ತದೆ. ಅದನ್ನು ಯಾರು ಹೇರುವುದರಿಂದ ಬದಲಾಗುವುದಿಲ್ಲ. ಒಂದು ವೇಳೆ ಅದು ಹೇರಿಕೆಯಂತೆ ಬದಲಾದರೆ ಅದನ್ನು ವಿಶ್ವಾಸಯೆಂದು ಕರೆಯಲು ಸಾಧ್ಯವಿಲ್ಲ.

ಸ್ವಾಮಿ ವಿವೇಕಾನಂದರ ಮಾತಿನಂತೆ ” ಮನುಷ್ಯನಿಗೆ ವಿಶ್ವಾಸ ಮಾತ್ರವಲ್ಲ ಬದಲಾಗಿ ಬೌದ್ಧಿಕ ವಿಶ್ವಾಸವೂ ಇರಬೇಕು.ಒಂದು ವೇಳೆ ಮನುಷ್ಯನು ಕಂಡದ್ದೆಲ್ಲವನ್ನೂ ವಿಶ್ವಾಸವಿರಿಸಲು ಪ್ರಾರಂಭಿಸಿದರೆ ಅದು ಆತನನ್ನು ಹುಚ್ಚನನ್ನಾಗಿಸುತ್ತದೆ”. ಅಂದರೆ ಕಂಡದೆಲ್ಲವನ್ನು ಪರಾಂಬರಿಸಿ ನೋಡದೆ ಒಬ್ಬ ಹುಚ್ಚನಂತೆ ಎಲ್ಲವೂ ಪರಮ ಸತ್ಯವೆಂದು ಭಾವಿಸಿ ವಿಶ್ವಾಸವಿರಿಸುವವನು ಸಮಾಜಕ್ಕೆ ಒಬ್ಬ ಮೂರ್ಖನಂತೆ ಕಾಣುವನು. ಆದರೆ ಒಂದು ವೇಳೆ ಆತ ವಿಶ್ವಾಸ ಮಾತ್ರವಲ್ಲ ಬದಲಾಗಿ ಬೌದ್ಧಿಕ ವಿಶ್ವಾಸವನ್ನು ಹೊಂದಿದ್ದಾನೆಂದರೆ ಆತ ಸಮಾಜಕ್ಕೆ ಒಬ್ಬ ಪ್ರಭುದ್ದನಂತೆ ಕಾಣುವನು.

ಮೊಹಮ್ಮದ್ ಪೈಗಂಬರರ ಮಾತಿನಂತೆ ” ವಿಶ್ವಾಸ ಎನ್ನುವುದು ವ್ಯಕಿಯು ತಾನು ವಿಶ್ವಾಸಿಯಾಗಿದ್ದನೆಂದು ಹೇಳುವುದರಿಂದ ಸಾಬೀತಾಗುವುದಿಲ್ಲ ಮತ್ತು ಅದೇರೀತಿ ವ್ಯಕ್ತಿಯ ವಸ್ತ್ರಧಾರಣೆಯಿಂದ ಆತ ವಿಶ್ವಾಸಿ ಎಂದು ಹೇಳಲು ಸಾಧ್ಯವಿಲ್ಲ. ಬದಲಾಗಿ ವಿಶ್ವಾಸ ಎಂಬುವುದು ವ್ಯಕ್ತಿಯ ಅಂತರಾಳದಲ್ಲಿ ಹುದುಗಿರುತ್ತದೆ ಮತ್ತು ಅದು ಆತನ ಕಾರ್ಯ(ಕರ್ಮ)ದಿಂದ ಬಿಂಬಿತವಾಗುತ್ತದೆ”.ಅಂದರೆ ಯಾವನೇ ವ್ಯಕ್ತಿಯು ವಿಶ್ವಾಸಿ ಎಂದು ಗುರುತಿಸಲು ಆತನ ಕರ್ಮವೇ ಪ್ರಮಾಣ ಪತ್ರವಿದ್ದಂತೆ. ಪ್ರೇಮ ಎನ್ನುವಾಗ ಹರೆಯದ ಇಬ್ಬರ ಮಧ್ಯೆ ಪ್ರಜ್ಞಾ ಪೂರ್ವಕವಲ್ಲದೆ ನಡೆಯುವ ಒಂದು ಭಾವನಾತ್ಮಕ ಸಂಬಂಧ. ಅದು ವಯಸ್ಸು,ಜಾತಿ, ಧರ್ಮ, ಆಸ್ತಿ ಅಂತಸ್ತು ಮತ್ತು ಬಣ್ಣವನ್ನು ನೋಡುವುದಿಲ್ಲ ಎನ್ನುವ ವಿಚಾರವು ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಚಾಲ್ತಿಯಲ್ಲಿದೆ.ಆದರೆ ಪ್ರಜ್ಞಾಪೂರ್ವಕವಲ್ಲದೆ ನೈಜ್ಯ ಪ್ರೇಮವು ಸಾಧ್ಯವಿಲ್ಲ. ಯಾವ ರೀತಿ ವಿಶ್ವಾಸವನ್ನು ಒಬ್ಬ ವ್ಯಕ್ತಿಯ ಮೇಲೆ ಹೇರಲು ಸಾಧ್ಯವಿಲ್ಲವೂ ಅದೇ ರೀತಿ ಪ್ರೇಮವನೂ ಹೇರಲು ಸಾಧ್ಯವಿಲ್ಲ. ಆದರೂ ಹೆಚ್ಚಿನಂಶ ಜನರು ಹಣವನ್ನು ನೋಡಿ ಮದುವೆಯಾಗುವ ಈ ಸಮಾಜದಲ್ಲಿ ಇಂದಿಗೂ ವರದಕ್ಷಿಣೆ ಎಂದರೆ ಕಾರು,ವಾಷಿಂಗ್ ಮಷೀನ್, ಮತ್ತು ಬೈಕುಗಳಂತಹ ವಸ್ತುಗಳಿಗೂ ಪ್ರೇಮಕ್ಕಿಂತಲೂ ಹೆಚ್ಚು ಬೆಲೆ ಇದೆ. ಇಂದಿಗೂ ಶ್ರೀಮಂತ ಹುಡುಗಿ ಬಡ ಹುಡುಗನನ್ನು ಪ್ರೇಮಿಸಿದರೆ ಅಥವ ಬಡ ಹುಡುಗಿ ಶ್ರೀಮಂತ ಹುಡುಗನನ್ನು ಪ್ರೇಮಿಸಿದರೆ ಅವರಿಬ್ಬರೂ ಒಂದೇ ಜಾತಿ ಒಂದೇ ಧರ್ಮದವರಾಗಿದ್ದರೂ ಹೆತ್ತವರಿಗೆ ಅಥವ ಅವರ ಕುಟುಂಬದವರಿಗೆ ಇಷ್ಟವಾಗಿಲ್ಲ ಎನ್ನುವ ಕಾರಣಕ್ಕಾಗಿಯೇ ಹಲವಾರು ಅನಾಹುತಗಳು ಈ ಸಮಾಜದಲ್ಲಿ ನಡೆದಿದೆ. ಅಂತರ್-ಜಾತಿ ಮತ್ತು ಅಂತರ್-ಧರ್ಮಿಯ ಜೋಡಿಗಳು ಪ್ರೇಮಿಸಲು ಪ್ರಾರಂಭಿಸಿದರೆ ನಮ್ಮ ಸಮಾಜದ ಒಂದು ವರ್ಗವು ತನ್ನ ರಾಜಕೀಯ ಲಾಭಕ್ಕಾಗಿ ಮತ್ತು ಸಾಮಾಜಿಕ ಕಾರಣಕ್ಕಾಗಿ ಅವರನ್ನು ಜಾತಿ-ದ್ರೋಹಿ ಮತ್ತು ಧರ್ಮ-ದ್ರೋಹಿಗಳಂತೆ ಹಾಗು ಎಷ್ಟರವರೆಗೆಂದರೆ ಇದೀಗ ರಾಜ್ಯ-ದ್ರೋಹಿಯಂತೆ ನೋಡಲಾರಂಭಿಸಿದೆ. ನಮ್ಮ ದೇಶದ ಇತಿಹಾಸದುದ್ದಕ್ಕೂ ಈ ರೀತಿ ಪ್ರೀತಿಸುವ ಪ್ರೇಮಿಗಳನ್ನು ಹತ್ಯೆಯಿಂದ ಹಿಡಿದು ಸಾಮಾಜಿಕ ಬಹಿಷ್ಕಾರ ಮತ್ತು ಇತರ ನಾನಾ ರೀತಿಯ ಶಿಕ್ಷೆಗಳಿಗೆ ಗುರಿಪಡಿಸಲಾಗಿದೆ.

ವಿಶ್ವಾಸಿನಿಯ ಪ್ರಸಂಗ (criminal appeal No 366/2018 ಸುಪ್ರೀಂ ಕೋರ್ಟ್)

ಸೇಲಂನ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ಕಲಿಯುತ್ತಿದ್ದ 26 ವಯಸ್ಸಿನ ಕೇರಳ ಮೂಲದ ಅಖಿಲ ಎನ್ನುವ ಹುಡುಗಿ ಅಲ್ಲಿನ ಒಂದು ಬಾಡಿಗೆ ಮನೆಯಲ್ಲಿ ಇತರ ಐದು ಮಂದಿ ಗೆಳತಿಯರೊಂದಿಗೆ ವಾಸಿಸುತ್ತಿದ್ದಳು.ಅವರ ಪೈಕಿ ಜಸೀನ ಮತ್ತು ಫಸೀನ ಎನ್ನುವವರೊಂದಿಗೆ ಹೆಚ್ಚಿನ ಸ್ನೇಹ ಬೆಳೆಯಿತು, ಈ ಇಬ್ಬರು ಸಹೋದರಿಯರು ಅಖಿಲ’ಳ ತಂದೆ ಅಶೋಕನ್’ರ ಮನೆಗೆ ಕೆಲವೋಮ್ಮೆ ಭೇಟಿನೀಡುತ್ತಿದ್ದರು.ಅಕೀಲಾಳ ತಾತ ತೀರಿಹೋದ ಸಮಯದಲ್ಲಿ ಆಕೆಯು ಮರಣಾನಂತರದ ರೀತಿರಿವಾಜುಗಳನ್ನು ಪಾಲಿಸುವಲ್ಲಿ ಸಂಶಯಾಸ್ಪದ ರೀತಿಯಲ್ಲಿ ವರ್ತಿಸುವುದನ್ನು ಅವರ ಕುಟುಂಬದವರು ಗಮನಿಸಿದ್ದರು.6th ಜನವರಿ 2016 ರಂದು ಅಶೋಕನ್’ಗೆ ಬಂದ ಕರೆಯಿಂದ ಆಕೆಯು ಮುಸ್ಲಿಂ ಮಹಿಳೆಯಂತೆ ಪರ್ದಾ ಧರಿಸಿ ಕಾಲೇಜಿಗೆ ತೆರೆಳಿದ್ದಳೆಂದು ತಿಳಿದುಕೊಂಡರು. ಅಂದು ರಾತ್ರಿ (8 pm ) ಆಕೆಯ ತಾಯಿ ಪೊನ್ನಮ್ಮ ಆಕೆಗೆ ಕರೆ ಮಾಡಿ ಆಕೆಯ ತಂದೆಯ ಅನಾರೋಗ್ಯದ ಕುರಿತು ವಿವರಿಸಿದರು. ಅಂದೇ ರಾತ್ರಿ ಅಖಿಲ ಮತ್ತು ಜಸೀನ ಸೇಲಂಗೆ ತೆರೆಳಿದರು,ಆದರೆ ಆಕೆಯು ಅಂದು ತಂದೆಯ ಮನೆಗೆ ತಲುಪಲಿಲ್ಲ. ನಂತರ ಆಕೆಯು ಜಸೀನ’ಳ ತಂದೆ ಅಬೂಬಕರ್’ರ ಮನೆಯಲ್ಲಿ ವಾಸಿಸುತ್ತಿದ್ದಾಳೆಂದು ತಿಳಿದ ಅಶೋಕನ್’ರಿಗೆ ಆಕೆಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನಂತರ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆಂದು ಮಲ್ಲಪುರಂ ಪೊಲೀಸ್ ಸ್ಟೇಷನ್’ನಲ್ಲಿ ದೂರು ನೀಡಿದರು. ಅದು ಅಲ್ಲಿ ಪ್ರಗತಿ ಕಾಣದಾಗ ಅವರು ಕೇರಳ ಉಚ್ಛ ನ್ಯಾಯಾಲಯದಲ್ಲಿ ಹೆಬಿಯಾಸ್ ಕಾರ್ಪಸ್ (wp 25/2016) ಹಾಕಿದರು.19.1.2016 ರಂದು ಕೋರ್ಟ್ ಕೈಗೆತ್ತಿಕೊಂಡಾಗ ಅಖಿಲ ತನ್ನ ವಕೀಲನೊಂದಿಗೆ (IA no.792/2016 ಮೂಲಕ) ಹಾಜರಾದಳು. ಡಿವಿಷನ್ ಬೆಂಚ್ ಆಕೆಯು ತಂದೆಯ ಮನೆಗೆ ತೆರಳಬೇಕೆಂದು ಹೇಳಿತು.ಆದರೆ ಅಖಿಲ ತಂದೆಯ ಮನೆಗೆ ತೆರಳಲು ಒಪ್ಪದ ಕಾರಣ ಕೋರ್ಟ್ ಆಕೆಯನ್ನು BHMS ಇಂಟರ್ನ್ಶಿಪ್ ಮುಗಿಯುವ ತನಕ ಸೈನಬ್ ಎಂಬುವರ ಜೊತೆ ತೆರಳುವ ಅನುಮತಿ ನೀಡಿತು.

ನ್ಯಾಷನಲ್ ಇನ್ವೆಸ್ಟಿಗೇಷನ್ ಏಜನ್ಸಿ’ಯ ತನಿಖೆಗೆ ಆದೇಶ.

ಕೆಲವು ದಿನಗಳ ನಂತರ ಆಕೆಯ ತಂದೆ ಮತ್ತೊಮ್ಮೆ ಕೋರ್ಟ್’ನಲ್ಲಿ ಆಕೆಯನ್ನು ವಿದೇಶಕ್ಕೆ ಕಳುಹಿಸಲಾಗುತ್ತಿದೆ ಎಂದು ದಾವೆ ಹೂಡಿದರು. ಆದರೆ ದಾವೆಯಲ್ಲಿ ಅವರ ಮಾತನ್ನು ಸಾಬೀತು ಪಡಿಸುವ ಯಾವುದೇ ಪುರಾವೆ ಇರಲಿಲ್ಲ.ಆದರೂ ನ್ಯಾಯಾಲಯವು ಆಕೆಯು ವಿದೇಶಕ್ಕೆ ಹೋಗದಂತೆ ನೋಡಿಕೊಳ್ಳಬೇಕೆಂದು ಆದೇಶ ಮಾಡಿತು. ಆಕೆಯು ಕೋರ್ಟ್’ನಲ್ಲಿ ತನ್ನ ಬಳಿ ಯಾವುದೇ ಪಾಸ್ಪೋರ್ಟ್ ಇಲ್ಲ ಎಂದು ಮತ್ತು ತಾನು ಸಿರಿಯಾಕ್ಕೆ ಹೋಗುವ ಯಾವುದೇ ಸಾಧ್ಯತೆ ಇಲ್ಲ ಎಂದು ಬೇಡಿಕೊಂಡರೂ ಕೋರ್ಟ್ ಆಕೆಯ ಮಾತನ್ನು ಪರಿಗಣಿಸಲಿಲ್ಲ.
ದಿನಾಂಕ 21.12.2016 ರಂದು ಅಖಿಲ ಉಚ್ಛ ನ್ಯಾಯಾಲದ ಮುಂದೆ ಹಾಜರಾಗಿ ತಾನು ಶಫೀನ್ ಜಹಾನ್ ಎನ್ನುವ ವ್ಯಕ್ತಿಯೊಂದಿಗೆ ವಿವಾಹವಾಗಿರುವುದಾಗಿ ವಿವರಿಸಿದಳು.ಈ ಅನಿರೀಕ್ಷಿತ ಮದುವೆಯು ಕೋರ್ಟ್’ಗೆ ಹಿಡಿಸಲಿಲ್ಲ. ವಿದೇಶದಲ್ಲಿ ದುಡಿಯುತ್ತಿದ್ದ ಶಫೀನ್ ಜಹಾನ್ ಎನ್ನುವ ವ್ಯಕ್ತಿಯೊಂದಿಗೆ ಮದುವೆ ಎನ್ನುವಾಗ ಮತ್ತು ಆತ ಆಕೆಗೆ ತೀರಾ ಅಪರಿಚಿತನಾದ ವ್ಯಕ್ತಿಯೆನ್ನುವ ವಿಚಾರವವು ಸಂಶಯಾಸ್ಪದವೆಂದು ಪರಿಗಣಿಸಿದ ಕೋರ್ಟ್ ಈ ಮದುವೆಯನ್ನು (ಕೋರ್ಟ್’ನಲ್ಲಿ ಆಕೆಯ ಪರ ಹಿರಿಯ ವಕೀಲರು ಆಕೆಗೆ 18 ವಯಸ್ಸು ಮುಗಿದಿದೆ ಮತ್ತು ಆಕೆಯ ಜೀವನದ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರಹೊಂದಿದ್ದಾಳೆಂದು ಹೇಳಿದಾಗಲೂ ) ಅಸಿಂಧುಗೊಳಿಸಿತು ಮತ್ತು ಈ ಪ್ರಖರಣದ ಕುರಿತು ಸಮಗ್ರ ತನಿಖೆಯಾಗಬೇಕೆಂದು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜನ್ಸಿ’ಗೆ ಆದೇಶಿಸಿತು. ಅದಲ್ಲದೆ, ಆಕೆಯನ್ನು ಆಕೆಯ ತಂದೆಯ ಅಧೀನಕ್ಕೆ (ಹಾಸ್ಟೆಲ್’ನಲ್ಲಿ ಇರುವಂತೆ) ನೀಡಲಾಯಿತು, ಎಲ್ಲಿತನಕವೆಂದರೆ ಆಕೆಯ ಫೋನ್ ಕೂಡ ನೀಡಬಾರದು ಎಂದು ಆದೇಶಿಸಲಾಗಿತ್ತು.ಆದರೆ NIA ತನಿಖೆಯಲ್ಲಿ ಇದು ಹುಡುಗಿ ಒಬ್ಬ ಇತರ ಧರ್ಮಿಯನ ಪ್ರೇಮಕ್ಕೆ ಸಿಲುಕಿ ಆತನೊಂದಿಗೆ ಮದುವೆಯಾದ ವಿಷಯವಲ್ಲ, ಬದಲಾಗಿ ಆಕೆಯದ್ದು ಒಂದು ರೀತಿ ಅರೇಂಜ್ ಮ್ಯಾರೇಜ್ ಏಕೆಂದರೆ ಮದುವೆಗಿಂತ ಮುಂಚಿತವಾಗಿ ಆಕೆಯು ಶಫೀನ್’ನನ್ನ ಭೇಟಿಯೇ ಆಗಿರಲಿಲ್ಲ ಬದಲಾಗಿ ಆಕೆಯು ”ವೆ ಟು ನಿಕಾಹ್” ಎನ್ನುವ ಆನ್ಲೈನ್ ಪೋರ್ಟಲ್ ಮುಖಾಂತರ ಆತನನ್ನು ಭೇಟಿಯಾಗಿದ್ದಳು ಎಂದು ತಿಳಿದುಬಂತು. ತದನಂತರ ಸುಪ್ರೀಮ್ ಕೋರ್ಟ್’ನಲ್ಲಿ ಶಫೀನ್ ಜಹಾನ್ ಕೇರಳ ಹೈ ಕೋರ್ಟ್ ಆದೇಶದ ವಿರುದ್ಧ ಚಾಲೆಂಜ್ ಮಾಡಿದರು.

ಸುಪ್ರೀಮ್ ತೀರ್ಪು

ಪ್ರಕರಣವನ್ನು ಕೈಗೆತ್ತಿಕೊಂಡ ಆಗಿನ ಚೀಫ್ ಜಸ್ಟಿಸ್ ಆಫ್ ಇಂಡಿಯಾ ದೀಪಕ್ ಮಿಶ್ರ, ಮತ್ತು ಎ ಎಂ ಕನ್ವೆಲ್ಕರ್ ಪೀಠವು ತೀರ್ಪಿನ ಎರಡನೆಯ ಪರಾಗ್ರಫ್’ನಲ್ಲಿ ಈ ರೀತಿ ಉಲ್ಲೇಖಿಸಿದ್ದಾರೆ.

”ಪ್ರಸ್ತುತ ಪ್ರಕರಣದಲ್ಲಿ ಸಂಗತಿಗಳನ್ನು ಗಮನಿಸುವುದಾದರೆ, ಅದು ಕಥೆಗೆ ವಿಭಿನ್ನ ಬಣ್ಣದ ನಿರೂಪಣೆಯನ್ನು ನೀಡುತ್ತಿದೆ.ನಾಗರಿಕರಿಗೆ ಕಾನೂನು ಹಕ್ಕು ಸುಲಭವಾಗಿ ದೊರೆಯುವಂತೆ ನೋಡಿಕೊಳ್ಳಬೇಕಾಗಿದ್ದ ಒಂದು ರಾಜ್ಯವು, ಒಬ್ಬ ತಂದೆಯ ಹಠಮಾರಿ ಧೋರಣೆಗೆ ಸಹಕಾರಿಯಾಗಿದೆ. ಆತನ ಮಗಳ ತನ್ನ ಜೀವನದ ಕುರಿತು ತನ್ನದೇ ಆದ ವಿಶ್ವಾಸ ಮತ್ತು ತನ್ನ ಆಯ್ಕೆಯಂತೆ ಮದುವೆಯಾಗುವ ಇಚೆಯನ್ನು ಸರ್ವನಾಶ ಮಾಡಲು ಹೊರಟಿದೆ. ಈ ಆಲೋಚನೆಯು ನಿರಂಕುಶಾಧಿಕಾರದ ಕಲ್ಪನೆಯ ಪ್ರತೀಕ ಮತ್ತು ಹೆಣ್ಣಿನ ವಿರುದ್ದದ ಪಕ್ಷಪಾತದ ಹಾಗು ಆಕೆಯ ಅಭಿವ್ಯಕ್ತಿಯ ವಿರುದ್ದದ ಪ್ರಹಾರ ಮತ್ತು ಹೆಣ್ಣನ್ನು ಒಂದು ರೀತಿ ಚಾಟಲ್ ಎಂಬ ಭಾವನೆಯೊಂದಿಗೆ ನೋಡುವುದಾಗಿದೆ’.

ಈ ಪ್ರಕರಣದಿಂದ ಎರಡು ವಿಚಾರಗಳು ವ್ಯಕ್ತವಾದವು.

ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವು ಅತ್ಯಂತ ಮಹತ್ವವಾದುದು.ಆತನಿಗೆ ಎಷ್ಟೇ ಆತ್ಮೀಯನಾದರೂ ಆತ ಆತನ ಆತ್ಮಿಯನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಬಾರದು. ಎರಡನೆಯದಾಗಿ, ಮುಸ್ಲಿಂ ಸಮುದಾಯದ ಕುರಿತು ಹವಾರು ವರ್ಷಗಳಿಂದ ನಿರಂತರ ಅಪಪ್ರಚಾರ ನಡೆದಿರುದರಿಂದಾಗಿ ಸೃಷ್ಟಿಯಾದ ಪೂರ್ವಗ್ರಹಗಳ ಕುರಿತು.

ಲವ್ ಜಿಹಾದ್ : ಮುಸ್ಲಿಮರು ಹಿಂದೂ ಹುಡುಗಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸುವ ಉದ್ದೇಶದಿಂದ ಅವರೊಂದಿಗೆ ಪ್ರೇಮದ ನಾಟಕ ಮಾಡುತ್ತಾರೆ. ಈ ನಿಟ್ಟಿನಲ್ಲಿ ಮುಸ್ಲಿಮರು ಸಂಘಟಿತವಾಗಿ ಅವರನ್ನು ಆಕರ್ಷಿಸಲು ಶ್ರಮಿಸುತ್ತಾರೆ ಎನ್ನುವ ವಿಚಾರ ಸರಿಯಲ್ಲ. ಏಕೆಂದರೆ ಧರ್ಮದಲ್ಲಿ ಯಾವುದೇ ಬಲಾತ್ಕಾರವಿಲ್ಲ (ಅಂದರೆ ಯಾರಿಗೆ ಬೇಕಾದರೂ ಇಸ್ಲಾಂ ಸ್ವೀಕರಿಸಬಹುದು ಮತ್ತು ಯಾರಿಗೆ ಬೇಕಾದರೂ ಇಸ್ಲಾಂ ಧರ್ಮವನ್ನು ತೊರೆಯಬಹುದು ) ಎಂದು ಕುರಾನ್ ಹೇಳುತ್ತದೆ. ಅಂದರೆ ಒಂದು ವೇಳೆ ಮದುವೆ ಯಾಗುವ ಉದ್ದೇಶದೊಂದಿಗೆ ಯಾರಾದರೂ ಇಸ್ಲಾಂ ಧರ್ಮ ಸ್ವೀಕರಿಸಿದರೆ ಅವರು ಅವರ ಇಸ್ಲಾಂ ಧರ್ಮ ಸ್ವೀಕಾರವು ಸಿಂಧುವಾಗುವುದಿಲ್ಲ.

ಮಹಿಳೆ ದುರ್ಬಲ ಜೀವಿ ಅವಳ ಇಚ್ಚೆಯಂತೆ ಅವಳ ತನ್ನ ಜೋಡಿಯನ್ನು ಆಯ್ಕೆ ಮಾಡುವ ವಿಚಾರವು ಅವರ ಮನೆಯಲ್ಲಿರುವ ಹೆತ್ತವರು/ಪುರುಷರಿಗೆ ಇರುವುದು.ಈ ಕುರಿತು ಆ ಮಹಿಳೆ ತೀರ್ಮಾನ ಮಾಡಬಾರದೆನ್ನುವ ಪುರುಷ ಪ್ರಧಾನ ಸಮಾಜದ ನಂಬಿಕೆಯು ಸರಿಯಲ್ಲ ಎಂದು ಕೋರ್ಟ್ ಹೇಳಿತು. 26 ವಯಸ್ಸಿನ ಹೆಣ್ಣು ದುರ್ಬಲ ಜೀವಿ ಎನ್ನುವ ಕೇರಳ ನ್ಯಾಯಾಲಯದ ಧೋರಣೆಯನ್ನು ಸುಪ್ರೀಮ್ ಕೋರ್ಟ್ ತಳ್ಳಿಹಾಕಿದೆ.

(ಮುಂದುವರಿಯುತ್ತದೆ)

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸೆ 27 ಭಾರತ್ ಬಂದ್ ಗೆ ವೆಲ್ಪೇರ್ ಪಾರ್ಟಿ ಉಡುಪಿ ಸಂಪೂರ್ಣ ಬೆಂಬಲ – ಅಬ್ದುಲ್ ಅಜೀಜ್

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್’ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

ಬೈಂದೂರು:ಅಕ್ಷರ ದಾಸೋಹ ನೌಕರರ ಬೃಹತ್ ಪ್ರತಿಭಟನೆ

ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ,ಬಜೆಟ್ ನಲ್ಲಿ ಅನುದಾನ ಹೆಚ್ಚಳ ಮಾಡಬೇಕು.ಶಾಲೆಗಳಲ್ಲಿ ಗ್ರೂಪ್ "ಡಿ" ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾಸ್ವಚ್ಚತೆ,ಕೈತೋಟ ನಿವ೯ಹಣೆ,ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ...

ಸೆಪ್ಟೆಂಬರ್ 27 ರಂದು ನಡೆಯುವ ರೈತ ಪರ ಹೋರಾಟದಲ್ಲಿ ಭಾಗವಹಿಸಲು ಸಾಲಿಡಾರಿಟಿ ಕರೆ

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

Related Articles

ಬೈಂದೂರು:ಅಕ್ಷರ ದಾಸೋಹ ನೌಕರರ ಬೃಹತ್ ಪ್ರತಿಭಟನೆ

ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ,ಬಜೆಟ್ ನಲ್ಲಿ ಅನುದಾನ ಹೆಚ್ಚಳ ಮಾಡಬೇಕು.ಶಾಲೆಗಳಲ್ಲಿ ಗ್ರೂಪ್ "ಡಿ" ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾಸ್ವಚ್ಚತೆ,ಕೈತೋಟ ನಿವ೯ಹಣೆ,ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ...

ಸೆಪ್ಟೆಂಬರ್ 27 ರಂದು ನಡೆಯುವ ರೈತ ಪರ ಹೋರಾಟದಲ್ಲಿ ಭಾಗವಹಿಸಲು ಸಾಲಿಡಾರಿಟಿ ಕರೆ

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

ಕಾರ್ಕಳ ಕಾಂಗ್ರೆಸ್ ನಿಂದ ಸೆ.25 ರಂದು ಪಂಜಿನ ಮೆರವಣಿಗೆ

ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ನೆಪದಲ್ಲಿ ಪುರಾತನ ಶ್ರದ್ದಾ ಕೇಂದ್ರಗಳನ್ನು ದ್ವಂಸಗೊಳಿಸುತ್ತಿರುವ ಬಿಜೆಪಿ ಸರ್ಕಾರದ ನಡೆಯನ್ನು ವಿರೋಧಿಸಿ ಜನಜಾಗೃತಿಗಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಕಾರ್ಕಳ ಯುವ ಕಾಂಗ್ರೆಸ್ ನೇತೃತ್ವದಲ್ಲಿ, ಕಾರ್ಕಳ...
Translate »
error: Content is protected !!