ಲೇಖಕರು: ಟಿ.ಐ ಬೆಂಗ್ರೆ (ವಕೀಲರು, ಬೆಂಗಳೂರು)
ಲವ್ ಅಂಡ್ ಹಾನರ್ ಕಿಲ್ಲಿಂಗ್
ಪ್ರಣಯ ಎಂದರೆ ಹದಿಹರೆಯದ ವ್ಯಕ್ತಿಯಲ್ಲಿ ಮೂಡುವ ಒಂದು (ಹುಡುಗನಿಗೆ ಹುಡುಗಿಯೊಂದಿಗೆ ಅಥವಾ ಹುಡುಗಿಗೆ ಹುಡುಗನೊಂದಿಗಿನ ವಿಶೇಷ ಆಕರ್ಷಣೆ) ಸ್ಪೆಷಲ್ ಫೀಲಿಂಗ್ಸ್, ಅದು ಮನುಷ್ಯ ಸಹಜವಾದ ವಿಚಾರ. ಅಮೆರಿಕಾದಂತಹ ದೇಶದಲ್ಲಿ ”ರೋಮ್ಯಾಂಟಿಕ್ ಲವ್ ಐಸ್ ಆ ಪ್ರೆಕಂಡಿಷನ್ ಫಾರ್ ಮ್ಯಾರೇಜ್” ಮದುವೆಗಿಂತ ಪೂರ್ವಭಾವಿಯಾಗಿ ಪ್ರಣಯ ಪ್ರೇಮವು ಅವರ ಮದ್ಯೆ ಇರಬೇಕಾಗಿದೆ. ಆದರೆ ಭಾರತದಲ್ಲಿ ”ಮ್ಯಾರೇಜ್ ಕಮ್’ಸ್ ಫಸ್ಟ್, ಲವ್ ಕಮ್’ಸ್ ನೆಕ್ಸ್ಟ್” ಅಂದರೆ ಮೊದಲು ಮದ್ವೆ ಮತ್ತೆ ಪ್ರಣಯ ಎನ್ನುವ ಕಲ್ಪನೆ ಇದೆ. ಇಂದಿಗೂ ಹೆಚ್ಚಿನ ಹೆತ್ತವರಿಗೆ ಅವರ ಮಕ್ಕಳು ಲವ್ ಮ್ಯಾರೇಜ್ ಆಗುವುದು ಒಂದು ಅಪರಾಧ ಇದ್ದಂತೆ. ದೇಶದ ಹಲವಾರು ರಾಜ್ಯಗಳ ಖಾಪ್ ಪಂಚಾಯತ್’ಗಳು ಅಂತರ ಜಾತಿ ಮತ್ತು ಅಂತರ ಧರ್ಮಿಯ ಜೋಡಿಗಳಿಗೆ ಹಲುವು ಪ್ರಕಾರದ ತೊಂದರೆ ನೀಡಿರುವ ಇತಿಹಾಸವಿದೆ. ದೇಶದಲ್ಲಿ ನೆಡೆಯುವ ಹತ್ಯೆಗಳಿಗೆ ಮೂರನೆಯ ಅತೀ ದೊಡ್ಡ ಕಾರಣ ಪ್ರಣಯ ಎಂದು NCRB ಡೇಟಾ ಹೇಳುತ್ತದೆ. 2001 ರಿಂದ 2017 ರವರೆಗಿನ ಅಂಕಿ ಅಂಶಗಳ ಪ್ರಕಾರ ಹಲವಾರು ಹತ್ಯೆಯ ಕಾರಣಗಳ ಪೈಕಿ ಲವ್ ಅಫ್ಫೇರ್ಸ್’ನಿಂದಾಗಿ ನಡೆದ ಹತ್ಯೆಗಳಲ್ಲಿ ಶೇ. 28% ರಷ್ಟು ಹೆಚ್ಚಳವಾಯಿತು. ಅಂದರೆ ಒಟ್ಟು ಸುಮಾರು 44,412 ಪ್ರಖರಣಗಳು ಬೆಳಕಿಗೆ ಬಂದವು ಎಂದಾಗಿದೆ.
2015 ರಲ್ಲಿ 1,379 ಮತ್ತು 2016 ರಲ್ಲಿ ಸುಮಾರು 1,493 ಹಾಗು 2017 ರಲ್ಲಿ ಸುಮಾರು 1,390 ಕೊಲೆಗಳು ಲವ್ ಅಫ್ಫೇರ್ಸ್’ನಿಂದಾಗಿ ನಡೆದವು ಎಂದು ವರದಿ ಹೇಳುತ್ತದೆ. ಇನ್ನೂ ಉತ್ತರ ಪ್ರದೇಶದಲ್ಲಿದೇಶದಲ್ಲಿಯೇ ಅತೀ ಹೆಚ್ಚು ಅಂದರೆ ಪ್ರತೀ ವರ್ಷ ಸುಮಾರು 395 ರಂತೆ ಹತ್ಯೆಗಳು ಕೇವಲ ಲವ್ ಎನ್ನುವ ಕಾರಣಕ್ಕೆ ನಡೆಯುತ್ತದೆ. ನಮ್ಮ ಕರ್ನಾಟಕದಲ್ಲಿಯೂ ಹತ್ಯೆಗೆ ಎರಡನೆಯ ಅತೀ ದೊಡ್ಡ ಕಾರಣ ಲವ್ ಅಫ್ಫೇರ್ಸ್ ಎನ್ನುವುದಾಗಿದೆ. ಅಂದರೆ ಪ್ರತೀ ವರ್ಷ ಸುಮಾರು 113 ಹತ್ಯೆಗಳು ನಡೆದಿವೆ.ಅದೇರೀತಿ ಗುರು ನಾನಕ್ ಯೂನಿವರ್ಸಿಟಿಯ ಪೊಲಿಟಿಕಲ್ ಸೈನ್ಸ್ ಡಿಪಾರ್ಟ್ಮೆಂಟ್’ನ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀ ಸತ್ನಮ್ ಸಿಂಗ್ ಡಿಯೋಲ್’ರ ಅಧ್ಯಯನದ ಪ್ರಕಾರ 2005 ರಿಂದ 2012 ರ ವರೆಗೆ ನಡೆದ ಗೌರವ ಹತ್ಯೆ ಪ್ರಖರಣಗಳ ಪೈಕಿ ಸುಮಾರು ಶೇ. 44% ರಷ್ಟು ಹತ್ಯೆಗಳ ಕಾರಣ ಅಂತರ ಜಾತಿ/ಧರ್ಮ ಮಾಡುವೆ ಎಂದಾಗಿತ್ತು. ಮತ್ತು ಶೇ.೫೬% ರಷ್ಟು ಕುಟುಂಬವು ಹುಡುಗ ಅಥವಾ ಹುಡುಗಿಯ ಮದುವೆಯ ಆಯ್ಕೆಯನ್ನು ಒಪ್ಪಲಿಲ್ಲ ಎನ್ನುವ ಕಾರಣದಿಂದಾಗಿತ್ತು ಎಂದು (18 ನವೆಂಬರ್ 2019) ರ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
”ಜಾತಿ ವರ್ಗ ಮತ್ತು ಧರ್ಮದ ಹೆಸರಿನಲಿ ವ್ಯಕ್ತಿಗಳನ್ನು ಅವರವರ ಇಚ್ಚೆಯಂತೆ ಅವರ ಜೋಡಿಗಳ ಆಯ್ಕೆಯನ್ನು ಮಾಡುವುದರಿಂದ ತಡೆಯುವ ನಿಟ್ಟಿನಲ್ಲಿ ರಾಷ್ಟ್ರ ಮತ್ತು ಸಮುದಾಯದ ಹೆಸರಿನಲ್ಲಿ ನಡೆಯುವ ಹಿಂಸಾಚಾರಾದ ಹಿಂದೆ ರಾಜ್ಯಕೀಯ ಮತ್ತು ಸಾಮಾಜಿಕ ಕಾರಣಗಳಿವೆ”.
(ಪ್ರತಿಕ್ಷ ಬಾಕ್ಸಿ, ಅಸೋಸಿಯೇಟ್ ಪ್ರೊಫೆಸರ್ JNU)
ಹೀಗಿರುವಾಗ ಈ ಗೌರವ ಹತ್ಯೆ ಎನ್ನುವ ಪಿಡುಗನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸರಕಾರವು ಕಾನೂನು ರೂಪಿಸಬೇಕಿತ್ತೇ ಹೊರತು ಅಂತರ್ ಧರ್ಮಿಯ ಹರೆಯದ ಯುವಕ ಯುವತಿಯರು ಪ್ರೇಮಿಸುವುದರ ವಿರುದ್ದವಲ್ಲ. ಏಕೆಂದರೆ ಪ್ರೇಮಿಸುವ ಕಾಲೇಜು ಹುಡುಗ ಹುಡುಗಿಯರು ತನ್ನ ಆಕರ್ಷಣೆಯ ಬಗ್ಗೆ ಮನೆಯಲ್ಲಿ ಹೇಳುವ ಸ್ಥಿತಿಯಲ್ಲಿರುವುದಿಲ್ಲ. ಪ್ರೇಮಿಸುವುದು ತಪ್ಪು ಎಂದು ಭಾವಿಸುವ ಹಲವಾರು ಜನರು ಇರುವ ಈ ಸಮಾಜದಲ್ಲಿ ಈ ಜೋಡಿಗಳು ಅತ್ಯಂತ ದಯನೀಯ ಸ್ಥಿತಿಯಲ್ಲಿರುವರು. ಒಂದುವೇಳೆ ಆ ಜೋಡಿಗಳು ಅಂತರ ಜಾತಿ/ಧರ್ಮದವರಾದರೆ ಅವರ ಸ್ಥಿತಿಯು ಇನ್ನೂ ಗಂಭೀರವಾಗಿರುತ್ತದೆ. ಇದೀಗ ಮತಾಂತರದ ನೆಪದಲ್ಲಿ ಅಂತರ್ ಧರ್ಮಿಯ ಜೋಡಿಗಳ ವಿರುದ್ಧ ಜಾರಿಯಾಗಲಿರುವ ಈ ಕಾನೂನು ನಿಜಕ್ಕೂ ಅಪಾಯಕಾರಿ. ಏಕೆಂದರೆ ಐತಿಹಾಸಿಕವಾಗಿ, ಅಂತರ್ ಮದುವೆಗಳು ಅದು ಅಂತರ್-ಜಾತಿ ಅಥವಾ ಅಂತರ್-ಧರ್ಮಿಯ ಮದುವೆಗಳೇ ಆಗಿರಲಿ, ಅದು ಸಾಮಾಜಿಕ ಅಡೆತಡೆಗಳನ್ನು ಮುರಿಯುತ್ತದೆ ಮತ್ತು ಸಮಾಜದಲ್ಲಿರುವ ಭಿನ್ನತೆಯನ್ನು ಸರಿಪಡಿಸುತ್ತದೆ. ಅಂಬೇಡ್ಕರ್ ಪ್ರಕಾರ ಜಾತಿ ವ್ಯವಸ್ಥೆಯ ಜೀವಾಳವನ್ನು ಕಿತ್ತೆಗೆಯುವ ನಿಜವಾದ ಮಾರ್ಗ ಅಂತರ್-ಮದುವೆ. ಅಂದರೆ ಇಲ್ಲಿ ಜಾತಿಗಳ ಮತ್ತು ಧಾರ್ಮಿಕ ಸಮುದಾಯಗಳ ನಡುವೆ ಶಾಂತಿ ನೆಲೆಸಬೇಕಿದ್ದರೆ ಅಂತರ್-ಮದುವೆ ನಡೆಯಬೇಕಾಗಿದೆ ಎಂದು ಅವರು ಅನ್ನಿಹಿಲೇಷನ್ ಆಫ್ ಕಾಸ್ಟ ಎನ್ನುವ ಪುಸ್ತಕದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
(ಮುಂದುವರಿಯುತ್ತದೆ)
ಈ ಲೇಖನದ ಅಭಿಪ್ರಾಯವೂ ಲೇಖಕರ ಸ್ವಂತ ಅಭಿಪ್ರಾಯವಾಗಿದೆ.
ತುಂಬು ಹೃದಯದ ಧನ್ಯವಾದಗಳು ಲೇಖಕರಿಗೆ.. ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಲೇಖನ ಬರೆದು, ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ್ದೀರಿ..