ಧಾರವಾಡ (ನ.22): ಸರಕಾರಿ ಮತ್ತು ಖಾಸಗಿ ಶಾಲೆಗಳತ್ತ ರಾಜ್ಯ ಸರಕಾರದ ತಾರತಮ್ಯ ಧೋರಣೆ ಹಾಗೂ ಶಿಕ್ಷಣ ಸಚಿವರ ಹೇಳಿಕೆ ಖಂಡಿಸಿ ಡಿ. 2ರಂದು ಇಲ್ಲಿನ ಸಾರ್ವಜನಿಕ ಸಾಂಕೇತಕ ಧರಣಿ ನಡೆಸಲಾಗುವುದು ಎಂದು ಅನುದಾನ ರಹಿತ ಖಾಸಗಿ ಶಾಲಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಂಕರ ಹಲಗತ್ತಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರು ಬೆಂಗಳೂರು ಕೇಂದ್ರೀಕರಿಸಿ ಖಾಸಗಿ ಶಾಲೆಗಳ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವುದು ಸಲ್ಲ. ಉತ್ತರ ಕರ್ನಾಟಕದ ಖಾಸಗಿ ಶಾಲೆಗಳು ಪಡೆಯುವ ಶುಲ್ಕದ ಬಗ್ಗೆ ಅಧ್ಯಯನ ಮಾಡಲಿ ಎಂದು ಸಲಹೆ ನೀಡಿದರು.
ಈ ಮೊದಲು ಸಚಿವರು ಶಿಕ್ಷಕರಿಗೆ ಮೂಲವೇತನ ನೀಡದಿದ್ದರೆ ಶಾಲೆಯ ಮಾನ್ಯತೆ ರದ್ದುಗೊಳಿಸಲಾಗುವುದು ಎಂದರು.