ಮಂಗಳೂರು, ನವೆಂಬರ್ 28: ನವೆಂಬರ್ 25 ರ ಬುಧವಾರ ತಡರಾತ್ರಿ ನಗರದ ಕುದ್ರೋಳಿಯ ಕರ್ನಾಲ್ ಗಾರ್ಡನ್ ಬಳಿ ಬೊಕ್ಕಪಟ್ಟಣದ ನಿವಾಸಿ ಇಂದ್ರಜಿತ್ (29) ಹತ್ಯೆಗೆ ಸಂಬಂಧಿಸಿದಂತೆ ಇಲ್ಲಿನ ಬಾರ್ಕೆ ಪೊಲೀಸ್ ಠಾಣೆಯ ಸಿಬ್ಬಂದಿ ಎಂಟು ಜನರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.
ಬುಧವಾರ ರಾತ್ರಿ 10 ರ ಸುಮಾರಿಗೆ ಇಂದ್ರಜಿತ್ ತಮ್ಮ ಮನೆಯಿಂದ ಹೊರಟಿದ್ದರು ಎಂದು ವರದಿಯಾಗಿದೆ. ಅವರು ತಮ್ಮ ಸ್ನೇಹಿತನ ವಿವಾಹ ಸಮಾರಂಭಕ್ಕೆ ಸಂಬಂಧಿಸಿದಂತೆ ಮೆಹಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಮನೆಗೆ ಹಿಂದಿರುಗುತ್ತಿದ್ದಾಗ ಅವನಿಗಾಗಿ ಕಾಯುತ್ತಿದ್ದ ಗ್ಯಾಂಗ್, ಅವನ ಮೇಲೆ ಎಗರಿ ಕೊಲೆ ಮಾಡಿತು ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿದ ಬಾರ್ಕೆ ಪೊಲೀಸರು ಈಗಾಗಲೇ 17 ಜನರನ್ನು ವೇಳೆ ವಿಚಾರಣೆಗೆ ಒಳಪಡಿಸಿ ಅವರಲ್ಲಿ ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಹಿಂದಿನ ಹಗೆತನವೇ ಈ ಕೊಲೆಗೆ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತನಿಖೆಯನ್ನು ಮುಂದುವರಿಸಿದ್ದಾರೆ.