ನವದೆಹಲಿ: ದೆಹಲಿ ಚಲೋ ರೈತರ ಪ್ರತಿಭಟನೆ ವೇಳೆ ಪೊಲೀಸರು ರೈತರ ಮೇಲೆ ಕೊರೆಯುವ ಚಳಿಯಲ್ಲಿ ಹರಿ ಬಿಡುತ್ತಿದ್ದ ಜಲ ಫೀರಂಗಿಯನ್ನು ಧೈರ್ಯದಿಂದ ಹತ್ತಿ ನಿಲ್ಲಿಸಿದ ಯುವ ರೈತ ನವದೀಪ್ ಸಿಂಗ್ ಅವರ ಮೇಲೆ ಇದೀಗ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
ನವದೀಪ್ ಸಿಂಗ್ ಗಲಭೆ ಸೃಷ್ಟಿ ಮತ್ತು ಕೋವಿಡ್ 19 ಕ್ರಮಗಳನ್ನು ಉಲ್ಲಂಘನೆ ಆರೋಪದಲ್ಲಿ ಅವರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ 26 ವರ್ಷದ ನವದೀಪ್ ಸಿಂಗ್ ಪ್ರತಿಭಟಿಸುವುದು ನಮ್ಮ ಹಕ್ಕು. ನಾನು ನಮ್ಮ ತಂದೆಯವರೊಂದಿಗೆ ಹೊಲದಲ್ಲಿ ದುಡಿಯುತ್ತೇನೆ. ನಮ್ಮನ್ನು ದೆಹಲಿಗೆ ಹೋಗುವಾಗ ತಡೆಯಲಾಯಿತು. ನಮ್ಮ ಮೇಲೆ ಜಲ ಫಿರಂಗಿ ಬಿಡಲಾಯಿತು. ಅದರಿಂದ ರೈತರಿಗೆ ನೋವಾಗುತ್ತಿತ್ತು. ಆ ಕಾರಣಕ್ಕೆ ಹತ್ತಿ ನಿಲ್ಲಿಸಿದೆ ಎಂದು ಹೇಳಿದ್ದಾರೆ.
ಸರಕಾರದ ವಿರುಧ್ಧ ಪ್ರತಿಭಟಿಸುವ ದನಿಗಳನ್ನು ಪ್ರಕರಣಗಳ ಹೆಸರಿನಲ್ಲಿ ಬಂಧಿಸಿ ಜೈಲಿಗಟ್ಟುವುದು ಈ ಕೇಂದ್ರ ಸರಕಾರದಲ್ಲಿ ಸಾಮಾನ್ಯದಂತಾಗಿದೆ.