ಅಂತರ್-ಧರ್ಮಿಯ ಪ್ರಣಯದ ವಿರುದ್ಧ ಕ್ರಿಮಿನಲ್ ಪಿತೂರಿ – (ಭಾಗ ಒಂದು)

ಕೃಷಿ ನೀತಿ ವಿರೋಧಿ ಹೋರಾಟ; ಪೆರುವಿನ ರೈತರ ಹೋರಾಟಕ್ಕೆ ಗೆಲವು ಸಿಕ್ಕಂತೆ, ಭಾರತೀಯರು ರೈತರಿಗೂ ಸಿಗಬಹುದೆ?

ನವದೆಹಲಿ, ಜ. 18: ನಮ್ಮಿಂದ ಸಾಧ್ಯವಾಯಿತು! ಹೀಗೆ ಒಕ್ಕೊರಲನಿಂದ ಉದ್ಗಾರ ತೆಗೆದಿದ್ದು ಪೆರುವಿನ ಕೃಷಿಕರು. ಡಿಸೆಂಬರ್‌ ತಿಂಗಳಲ್ಲಿ ಪೆರುವಿನ ಸರ್ಕಾರ ಕಾರ್ಪೊರೆಟ್‌ ವಲಯಕ್ಕೆ ಅನುಕೂಲವಾಗುವಂತಹ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಈ ಕಾಯ್ದೆಗಳು ಕಾರ್ಪೊರೆಟ್‌ ಸಂಸ್ಥೆಗಳಿಗೆ ಶೇ....

ಜ.26 ರಂದು ರೈತರು ಘೋಷಿಸಿದ ಟ್ರ್ಯಾಕ್ಟರ್ ರ್ಯಾಲಿಯ ವಿರುದ್ಧ ತಡೆಯಾಜ್ಞೆ ಕೋರಿ ಕೇಂದ್ರವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ

ದೆಹಲಿ (ಜ.18) :ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನವು ಸೋಮವಾರ 54 ನೇ ದಿನವನ್ನು ಪ್ರವೇಶಿಸಿದೆ. ಜನವರಿಯ 26 ರಂದು ಗಣರಾಜ್ಯೋತ್ಸವದಂದು ಪ್ರತಿಭಟನಾಕಾರ ರೈತರು ಘೋಷಿಸಿದ ಟ್ರ್ಯಾಕ್ಟರ್ ರ್ಯಾಲಿಯ ವಿರುದ್ಧ...

ಮಂಗಳೂರು: ಯುವಕನ ಬೆದರಿಸಿ ಹನಿಟ್ರ್ಯಾಪ್: ಇಬ್ಬರು ಮಹಿಳೆಯರು ಸಹಿತ ನಾಲ್ವರ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಕಾಸರಗೋಡು ಮೂಲದ ಯುವಕನನ್ನು ಬೆದರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ರೇಶ್ಮಾ ಯಾನೆ ನೀಮಾ, ಝೀನತ್ ಮುಬೀನ್, ಇಕ್ಬಾಲ್ ಮಹಮ್ಮದ್,...

ಅಹಮದಾಬಾದ್ ಮತ್ತು ಸೂರತ್ ಇಂದು ಬಹಳ ಮುಖ್ಯವಾದ ಉಡುಗೊರೆಗಳನ್ನು ಸ್ವೀಕರಿಸುತ್ತಿವೆ – ಪ್ರಧಾನಿ ಮೋದಿ

ಅಹಮದಾಬಾದ್ (ಜ.18): ಸೂರತ್ ಮೆಟ್ರೋ ರೈಲು ಯೋಜನೆಯಲ್ಲಿ ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆಯನ್ನು ನಡೆಸಿದರು. ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಅಹಮದಾಬಾದ್ ಮತ್ತು...

ಮಹಾರಾಷ್ಟ್ರ ಸಿಎಂ ಗೆ ಖಡಕ್ ಉತ್ತರ ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು (ಜ.18): ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆಗೆ ಖಡಕ್ ತಿರುಗೇಟು ನೀಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಓರ್ವ ಮುಖ್ಯಮಂತ್ರಿಯಾಗಿ ಸೌಹಾರ್ದಯುತ ವಾತಾವರಣ ಕೆಡಿಸುವ ಯತ್ನ ನಡೆಸುತ್ತಿರುವುದು ನೋವಿನ ಸಂಗತಿ....

ಟಿ ಐ ಬೆಂಗ್ರೆ (ವಕೀಲರು, ಬೆಂಗಳೂರು)

love recognizes no barriers. it jumps hurdles, leaps fences, penetrates walls to arrive at its destination full of hope.

(american poet Angelou)

ಪ್ರಣಯವು ಯಾವುದೇ ಅಡೆ-ತಡೆಗಳನ್ನು ಗಮನಿಸುವುದಿಲ್ಲ. ಅದು ಅಡೆತಡೆಗಳನ್ನು ಜಿಗಿಯುತ್ತದೆ. ಬೇಲಿಗಳನ್ನು ತುಂಡರಿಸುತ್ತದೆ. ಗೋಡೆಗಳನ್ನು ಭೇದಿಸಿ ತನ್ನ ನಿರ್ದಿಷ್ಟ ಗುರಿ ಪೂರ್ಣ ಭರವಸೆಯಿಂದ ತಲುಪುತ್ತದೆ.

(ಅಂಗೆಲೌ ಅಮೇರಿಕಾ’ದ ಕವಿ ಮತ್ತು ನಾಗರೀಕ ಹಕ್ಕು ಕಾರ್ಯಕರ್ತ)

ಒಂದು ನಿಜ ಪ್ರೇಮ ಪ್ರಸಂಗ (ಲವ್ ಸ್ಟೋರಿ)

ಸ್ನೇಹ (ಹೆಸರು ಬದಲಿಸಲಾಗಿದೆ) ಎನ್ನುವವಳು ಅನ್ಸರ್ (ಹೆಸರು ಬದಲಿಸಲಾಗಿದೆ) ಎನ್ನುವ ಹುಡುಗನನ್ನು ತಾನು B.Sc .(PHYSICS) ಪದವಿ ಅಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಪ್ರೀತಿಸಲು ಪ್ರಾರಂಭಿಸಿದಳು. ನಂತರ ತಾನು ಆತನನ್ನು ಮದುವೆಯಾಗುವ ಇಚ್ಚೆಯನ್ನು ತನ್ನ ಹೆತ್ತವರ ಮುಂದೆ ವ್ಯಕ್ತಪಡಿಸಿದ್ದಾಳೆ.ಆದರೆ ಅವರು ಹುಡುಗ ಅನ್ಯ ಧರ್ಮೀಯನೆಂಬ (ಮುಸ್ಲಿಂ) ಕಾರಣಕ್ಕೆ ಆಕೆಯ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿದರು. ಸ್ನೇಹ ಒಂದು ದಿನ ಆಕೆಯ ಮನೆ ಬಿಟ್ಟು ಅನ್ಸರ್’ನೊಂದಿಗೆ ದೆಹಲಿಗೆ ಹೋಗಿ ಅಲ್ಲಿ ಒಂದು ರೀತಿಯ ಅಣಕು ಮದುವೆಯಾದ ನಂತರ ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಳು.ಇಬ್ಬರು ಮೊದಲು ದೆಹಲಿ ನಂತರ ಸೋನಿಪತ್’ನಲ್ಲಿ ಲಿವ್-ಇನ್-ರಿಲೇಶನ್’ನಲ್ಲಿದ್ದರ.ಆಗ ಅನ್ಸರ್ ಒಂದು ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದನು. ಸುಮಾರು ಹತ್ತು ತಿಂಗಳ ನಂತರ ಸ್ನೇಹಾಳ ತಂದೆಯವರು ಆಕೆ ಕಾಣೆಯಾಗಿದ್ದಾಳೆ ಎಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರಿಂದ ಶೋಧ ಕಾರ್ಯ ನಡೆಸಿ ನಂತರ ಅವರಿಬ್ಬರನ್ನು ಬಂಧಿಸಿ ಬೇರೆ ಬೇರೆಯಾಗಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಆಕೆಯನ್ನು ಆಕೆಯ ಹೆತ್ತವರಿಗೆ ಹಸ್ತಾಂತರಿಸಲಾಯಿತು. ಅವರು ಆಕೆಯನ್ನು ಎರ್ನ್ನಕುಲಮ್’ನ ಉದಯಂಪೇರೂರ್’ನಲ್ಲಿರುವ ಯೋಗ ಕೇಂದ್ರಕ್ಕೆ ಸೇರಿಸಿದರು. ಸುಮಾರು 40 ರಷ್ಟು ಯುವತಿಯರು ಇರುವ ಆ ಕೇಂದ್ರದಲ್ಲಿ ಅವಳನ್ನು ಒರ್ವ ಕೈದಿಯಂತೆ ಇಡಲಾಯಿತು. ಅನ್ಸರ್’ನಿಗೆ ಸ್ನೇಹಾಳ ವಿಚಾರವಾಗಿ ಯಾವುದೇ ಮಾಹಿತಿ ಇರಲಿಲ್ಲ. ಆದ್ದರಿಂದ ಆತ ಅಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಮೊರೆಹೋದ, ಕೋರ್ಟ್ ಸೆಕ್ಷನ್ 97 Cr.P.C. ಪ್ರಕಾರ ಸರ್ಚ್ ವಾರಂಟ್ ಜಾರಿಮಾಡಿತು.

ಅದು ಸಾಲದು ಎಂದು ಅರಿತ ಆತ ಉಚ್ಛ ನ್ಯಾಯಾಲಯದಲ್ಲಿ ಸ್ನೇಹ’ಳನ್ನು ಅಕ್ರಮ ಬಂಧನದಿಂದ ಮುಕ್ತಗೊಳಿಸಬೇಕೆಂದು wirt of habeas corpus (ವ್ಯಕ್ತಿಯನ್ನು ಕೋರ್ಟಿನ ಮುಂದೆ ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಹಾಜರು ಪಡಿಸಬೇಕೆನ್ನುವ ಆದೇಶ) WP(Crl.No.313/2017) ನಲ್ಲಿ ಅರ್ಜಿ ಸಲ್ಲಿಸಿದ.

ಆದರೆ ಸ್ಥಳೀಯ ನ್ಯಾಯಾಲಯ ಈ ವಿಚಾರವನ್ನು ಕೈಗೆತ್ತಿಕೊಂಡು ಆಕೆಯನ್ನು ನೀನು ಯಾರ ಒಟ್ಟಿಗೆ ಇರಲು ಬಯಸುತ್ತಿ? ಎಂದು ಸ್ನೇಹ’ಳನ್ನು ಕೇಳಿದಾಗ ಆಕೆಯು (ಹೆದರಿದ್ದರಿಂದಾಗಿ) ತಾನು ತನ್ನ ಹೆತ್ತವರೊಂದಿಗೆ ಇರಲು ಬಯಸುವೆ ಎಂದು ಹೇಳಿದಳು. ಅವರು ಮತ್ತೆ ಆಕೆಯನ್ನು ಅದೇ ಯೋಗ ಕೇಂದ್ರಕ್ಕೆ ಮರಳಿ ಕಳುಹಿಸಿದರು. ಅಲ್ಲಿ ಆಕೆಯನ್ನು ಅನ್ಸರ್’ನಿಂದ ದೂರ ಉಳಿಯುವಂತೆ ಮತ್ತು ಎಂದೆಂದೂ ಹಿಂದೂ ಧರ್ಮದ ಅನುಯಾಯಿಯಾಗಿ ಉಳಿಯುವಂತೆ ನೋಡಿಕೊಂಡರು. ಆದರೆ ಆಕೆಯು ಉಚ್ಛ ನ್ಯಾಯಾಲಯದ ಮುಂದೆ ತಾನು ಅನ್ಸಾರ್’ನೊಂದಿಗೆ ಹೋಗಲು ಇಚ್ಚಿಸುತ್ತಿದ್ದೇನೆಂದು ತನ್ನ ಬಯಕೆಯನ್ನು ವ್ಯಕ್ತಪಡಿಸಿದಳು. ಮತ್ತೊಂದು ಸಲ ಸ್ನೇಹ ನ್ಯಾಯಾಲಯಕ್ಕೆ ಬಂದಾಗ ಆ ಯೋಗ ಕೇಂದ್ರದಲ್ಲಿ ತನ್ನ ಮೇಲೆ ಮತ್ತು ಅಲ್ಲಿ ವಾಸಿಸುತ್ತಿದ್ದ ಇತರ ಯುವತಿಯರ ಮೇಲೆ ನಡೆಯುತ್ತಿದೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯದ ತೀವ್ರತೆಯ ಕುರಿತು ವಿವರಿಸಿ ತೆರೆದ ನ್ಯಾಯಾಲಯದಲ್ಲಿ ಅತ್ತಳು. ಆ ಯೋಗ ಕೇಂದ್ರವು ಒತ್ತಾಯಪೂರ್ವಕವಾಗಿ ಯುವತಿಯರನ್ನು ಹಿಂದೂ ಧರ್ಮಕ್ಕೆ ಮರು ಮತಾಂತರಿಸುವ ಉದ್ದೇಶವನ್ನು ಹೊಂದಿದೆ ಎಂದು ಅಲ್ಲಿ ಅಭಿಪ್ರಾಯ ವ್ಯಕ್ತವಾದಾಗ ನ್ಯಾಯಾಲಯವು ಆ ಕೇಂದ್ರದ ಕುರಿತು ತನಿಖೆ ನಡೆಸುವಂತೆ ಆದೇಶಿಸಿತು.

ತದನಂತರ ಅದರ ಮುಖ್ಯಸ್ಥ ಮತ್ತು ಇತರ 8 ಸಹಾಯಕರ ಮೇಲೆ ಐಪಿಸಿ ಸೆಕ್ಷನ್ 323 ಅಂದರೆ (Punishment for voluntarily causing hurt), ಸೆಕ್ಷನ್ 342 ( Punishment for wrongful confinement ) ಮತ್ತು ಸೆಕ್ಷನ್ 506 (offence of criminal intimidation shall be punished with simple or rigorous imprisonment for a term extending up to two years, or with fine, or with both) ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಇದೆಲ್ಲದರ ಮಧ್ಯೆ ಆಕೆಯು ಮುಸ್ಲಿಂ ಆಗಿದ್ದಾಳೆ. ಆದರಿಂದ ಮುಸ್ಲಿಂ ಸಮುದಾಯದವರು ಆಕೆಯನ್ನು ಸಿರಿಯಾಕ್ಕೆ ಕಳುಹಿಸುವರು ಎಂದು ನಾನಾ ರೀತಿಯ ಕಥೆ ಕಟ್ಟಿ, ಆಕೆಯ ಮನಸಿನಲ್ಲಿ ಭಯ ಹುಟ್ಟಿಸಲು ಪ್ರಯತ್ನಪಟ್ಟರು. ‘ರೈಟ್ ಟು ಚೂಸ್ ಲೈಫ್ ಪಟ್ನರ್ ಒಫ್ ಹರ್ ಚಾಯ್ಸ್ ಐಸ್ ಫಂಡಮೆಂಟಲ್ ರೈಟ್’ ಎಂದು ನ್ಯಾಯಾಲಯ ಹೇಳಿತು. ಅವರಿಬ್ಬರೂ ಬೇರೆ ಬೇರೆ ಧರ್ಮಿಯರಾದರೂ ಪತಿ-ಪತ್ನಿಯರಾಗಿ ಜೀವಿಸುವ ಹಕ್ಕಿದೆ ಎಂದು ನ್ಯಾಯಾಲಯ ಪ್ರಸ್ತಾಪಿಸಿತು.

ಒಟ್ಟಾರೆಯಾಗಿ ಈ ಪ್ರಕರಣವನ್ನು ಸ್ನೇಹಾಳ ಹೆತ್ತವರು ಕಪೋಕಲ್ಪಿತ ”ಲವ್ ಜಿಹಾದ್” ಎಂದು ವಿವರಿಸಿದರೆ, ಆಕೆಯು ಇದು ”ಘರ್ ವಾಪ್ಸಿ’ಯ ಅನಗತ್ಯ ಪ್ರಯತ್ನವೆಂದು ಸಾಬೀತುಪಡಿಸಿದಳು.

ಕೋರ್ಟ್’ನ ತೀರ್ಪು ಹೇಳುವಂತೆ ” any centre for forcible conversion OR re-conversion has to be busted by The police whether It be Hindu, Muslim Or Christian lest it offends the constitutional right”

ಬಲವಂತವಾಗಿ ಮತಾಂತರಿಸುವ ಮತ್ತು ಮರು-ಮತಾಂತರಿಸುವ ಯಾವುದೇ ಕೇಂದ್ರವರನ್ನು ಪೊಲೀಸರು ಅಪರಾಧವೆಂದು ಪರಿಗಣಿಸಿ ಅದನ್ನು ತಡೆಯಬೇಕಾಗಿದೆ ಎಂದು ಉಲ್ಲೇಖಿಸಲಾಗಿದೆ.

(ಮುಂದುವರಿಯುತ್ತದೆ….)

 

ಈ ಲೇಖನದಲ್ಲಿನ ಅಭಿಪ್ರಾಯ ಲೇಖಕರ ಸ್ವತಂತ್ರ ಅಭಿಪ್ರಾಯವಾಗಿರುತ್ತದೆ.

LEAVE A REPLY

Please enter your comment!
Please enter your name here

Hot Topics

ವಿಚಿತ್ರ ಸ್ವರೂಪದ ಮಗು ಜನನ, ವೈರಲ್ ವಿಡಿಯೋ ಮತ್ತು ಸುದ್ದಿಯ ಹಿಂದಿರುವ ಸತ್ಯಾಂಶ? ?

ಮಿರರ್ ಫೋಕಸ್ : ಜಗತ್ತಿನಲ್ಲಿ ಪ್ರತಿನಿತ್ಯ ಸಾವಿರಾರೂ ಮಕ್ಕಳು ಹುಟ್ಟುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೊಂದು ಮಗು ವಿಚಿತ್ರ ರೀತಿಯಲ್ಲಿ ಬೆಳವಣಿಗೆ ಹೊಂದುದನ್ನು ನಾವು ದಿನಪತ್ರಿಕೆಗಳಲ್ಲಿ, ಟಿ ವಿ ಮಾಧ್ಯಮದಲ್ಲಿ ನೋಡಿದ್ದೇವೆ ಆದರೆ ಇತ್ತೀಚಗೆ...

ಯಾವುದೋ ಒಂದು ಘಟನೆ ಆಧರಿಸಿ ಮುಸ್ಲಿಮರ ಬಗ್ಗೆ ತಪ್ಪಾಗಿ ಮಾತನಾಡಿದರೆ ಕ್ರಮ – ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ಎಚ್ಚರಿಕೆ

ಬೆಂಗಳೂರು: ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂದರ್ಶಕ ಏಕಾಏಕಿ ಭಾವೋದ್ವೇಗದಿಂದ ಕೆಲವೊಂದು ಪ್ರಶ್ನೆ ಕೇಳಿ ಮುಖ್ಯಮಂತ್ರಿಯನ್ನು ಉದ್ರೇಕಿಸಲು ಪ್ರಯತ್ನಿಸಿದಾಗ ಶಾಂತ ಚಿತ್ತವಾಗಿ ಉತ್ತರ ನೀಡಿದ ಅವರು ನಾನು ಅಲ್ಪಸಂಖ್ಯಾತ ಸಮಾಜದ...

ಕೋರೊನಾ ವೈರಸ್ ಭೀತಿ; ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಹೆಗಲು ಕೊಟ್ಟ ಮುಸ್ಲಿಮ್ ಬಾಂಧವರು

ಉತ್ತರ:  ರವಿಶಂಕರ್ ಎಂಬ ವ್ಯಕ್ತಿ ಮೃತರಾದಾಗ ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಮುಸ್ಲಿಂ ಬಾಂಧವರು ಮುಂದೆ ಬಂದು ಹೆಗಲುಕೊಟ್ಟು ಹಿಂದು ಸಂಸ್ಕೃತಿಯೆಂತೆ ಅಂತ್ಯ ಕ್ರಿಯೆ ನಡೆಸಿದ್ದಾರೆ ಈ ವರದಿಯನ್ನು ನವಭಾರತ್ ಟೈಮ್ಸ್...

Related Articles

ಕೃಷಿ ನೀತಿ ವಿರೋಧಿ ಹೋರಾಟ; ಪೆರುವಿನ ರೈತರ ಹೋರಾಟಕ್ಕೆ ಗೆಲವು ಸಿಕ್ಕಂತೆ, ಭಾರತೀಯರು ರೈತರಿಗೂ ಸಿಗಬಹುದೆ?

ನವದೆಹಲಿ, ಜ. 18: ನಮ್ಮಿಂದ ಸಾಧ್ಯವಾಯಿತು! ಹೀಗೆ ಒಕ್ಕೊರಲನಿಂದ ಉದ್ಗಾರ ತೆಗೆದಿದ್ದು ಪೆರುವಿನ ಕೃಷಿಕರು. ಡಿಸೆಂಬರ್‌ ತಿಂಗಳಲ್ಲಿ ಪೆರುವಿನ ಸರ್ಕಾರ ಕಾರ್ಪೊರೆಟ್‌ ವಲಯಕ್ಕೆ ಅನುಕೂಲವಾಗುವಂತಹ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಈ ಕಾಯ್ದೆಗಳು ಕಾರ್ಪೊರೆಟ್‌ ಸಂಸ್ಥೆಗಳಿಗೆ ಶೇ....

ಮಂಗಳೂರು: ಯುವಕನ ಬೆದರಿಸಿ ಹನಿಟ್ರ್ಯಾಪ್: ಇಬ್ಬರು ಮಹಿಳೆಯರು ಸಹಿತ ನಾಲ್ವರ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಕಾಸರಗೋಡು ಮೂಲದ ಯುವಕನನ್ನು ಬೆದರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ರೇಶ್ಮಾ ಯಾನೆ ನೀಮಾ, ಝೀನತ್ ಮುಬೀನ್, ಇಕ್ಬಾಲ್ ಮಹಮ್ಮದ್,...

ಬೆಳಗಾವಿಯ ಕುರಿತು ಅಧಿಕ ಪ್ರಸಂಗದ ಹೇಳಿಕೆ ಬೇಡ, ಉದ್ಧವ್ ಠಾಕ್ರೆಗೆ ಸಿದ್ಧರಾಮಯ್ಯ ಎಚ್ಚರಿಕೆ

ಬೆಂಗಳೂರು:ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು, ಮರಾಠಿ ಮಾತನಾಡುವ ಪ್ರದೇಶವನ್ನು ಕರ್ನಾಟಕ ಆಕ್ರಮಿತ ಪ್ರದೇಶವಾಗಿ ಘೋಷಿಸುತ್ತೇವೆ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆಗೆ, ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ...
Translate »
error: Content is protected !!