ಅರ್ಜೆಂಟೀನಾ: ಫುಟ್ಬಾಲ್ ದಂತಕಥೆ ಡಿಯಾಗೊ ಮ್ಯಾರಡೊನಾ (60) ಹೃದಯಾಘಾತದಿಂದ ಮೃತ ಪಟ್ಟಿರುವ ಬಗ್ಗೆ ಅರ್ಜೆಂಟೈನಾ ಮಾಧ್ಯಮಗಳು ವರದಿ ಮಾಡಿವೆ.
ಟಿಗ್ರೆಯಲ್ಲಿನ ನಿವಾಸದಲ್ಲಿ ಅವರು ಹೃದಯಾಘಾತಕ್ಕೀಡಾಗಿರುವ ಬಗ್ಗೆ ವರದಿಯಾಗಿದೆ.
ಅಕ್ಟೋಬರ್ 30 ರಂದು ಮೆದುಳಿನಲ್ಲಿ ಹೆಪ್ಪುಗಟ್ಟಿದ ರಕ್ತದ ತೆರವು ಶಸ್ತ್ರ ಚಿಕಿತ್ಸೆಗೆ ಗುರಿಯಾಗಿದ್ದರು. ನಂತರ ಅವರು ಚೇತರಿಸಿಕೊಳ್ಳುತ್ತಿದ್ದರು. ಇದೀಗ ಏಕಾಏಕಿ ಹೃದಯಾಘಾತದಕ್ಕೀಡಾಗಿ ಮೃತಪಟ್ಟಿರುವ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.