ಮಾಧ್ಯಮ ಸ್ವಾತಂತ್ರ್ಯ ಮತ್ತು ರಿಪಬ್ಲಿಕ್ ಟಿ ವಿ’ಯ ಅರ್ನಬ್

ಉಡುಪಿ ಜಿಲ್ಲಾಮಟ್ಟದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಉಡುಪಿ, ಜ.24: ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಶಕ್ತಿ ಕೇಂದ್ರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ...

ಗಗಕ್ಕೇರುತ್ತಿರುವ ಪೆಟ್ರೋಲ್ ಡಿಸೇಲ್ ಬೆಲೆ : ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ನವದೆಹಲಿ (ಜ.24): ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಈ ಕುರಿತಂತೆ ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿರುವ...

ಮಂಗಳೂರು: ಧರೆಗುರುಳಿದ ಪುರಾತನ ಮರ: ತಪ್ಪಿದ ಭಾರೀ ಅನಾಹುತ

ಮಂಗಳೂರು: ಸುಮಾರು 30 ವರ್ಷಗಳ ಹಳೇಯ ಅಶ್ವತ್ಥ‌ ಮರವೊಂದು ಧರೆಗುರುಳಿದ ಘಟನೆ ಇಂದು ಬೆಳಗ್ಗೆ ನಗರದ ಕಾರ್‌ಸ್ಟ್ರೀಟ್‌ನಲ್ಲಿ ನಡೆದಿದೆ. ಕಾರ್‌ಸ್ಟ್ರೀಟ್‌ನ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿದ್ದ ಈ ಮರವನ್ನು ದೇವಸ್ಥಾನದ ಭಕ್ತರು ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು....

ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಈಜು

ಉಡುಪಿ, ಜ.24: ಕಿದಿಯೂರು ಪಡುಕೆರೆಯ ಸಮುದ್ರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಈಜು ಮೂಲಕ ಗಂಗಾಧರ ಜಿ.ಕಡೆಕಾರ್ ಹೊಸ ದಾಖಲೆ ನಿರ್ಮಿಸಿದ್ದಾರೆ. 65ರ ಹರೆಯದ ಗಂಗಾಧರ್ ಬೆಳಗ್ಗೆ 8.36ರಿಂದ 9.49ರ...

ಉಳ್ಳಾಲ : ಪಾದಚರಿಗೆ ಅಪರಿಚಿತ ವಾಹನ ಡಿಕ್ಕಿ : ವೃದ್ಧ ಸ್ಥಳದಲ್ಲೇ ಸಾವು

ಉಳ್ಳಾಲ (ಜ.24): ಪಾದಾಚಾರಿ ವೃದ್ಧರೊಬ್ಬರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ನಸುಕಿನ ಜಾವದಲ್ಲಿ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಬಂಟ್ವಾಳ, ಪಾಣೆಮಂಗಳೂರಿನ ನಿವಾಸಿ...

ಲೇಖಕರು: ಅಡ್ವೋಕೇಟ್, ಟಿ ಐ ಬೆಂಗ್ರೆ

ಕೋಸ್ಟಲ್ ಮಿರರ್ ಎಕ್ಸ್’ಕ್ಲೂಸಿವ್

ಅರ್ನಬ್’ರ ಪ್ರೈಮ್ ಟೈಮ್ ಚರ್ಚೆಗಳನ್ನು ವೀಕ್ಷಿಸುವಾಗ ನನಗೆ ಕೆಲವೊಮ್ಮೆ ”1976 ರಲ್ಲಿ paddy chayefsky ರಚಿಸಿರುವ ”i’m mad as hell and i’m not gonna take this anymore! ” ಎಂಬ ಪ್ರಸಿದ್ದವಾದ ಏಕ ಪಾತ್ರ ಅಭಿನಯ ನೆನಪಾಗುತ್ತದೆ. ಏಕೆಂದರೆ ಕೇವಲ ನಾಲ್ಕು ನಿಮಿಷದ ಈ ಏಕ ಪಾತ್ರ ಅಭಿನಯವನ್ನು ಟಿ ವಿ’ಯಲ್ಲಿ ವೀಕ್ಷಿಸಿದವರು ಕೇವಲ ಮೂರು ನಿಮಿಷದಲ್ಲಿ ತಮ್ಮ ತಮ್ಮ ಮನೆಯ ಕಿಟಕಿಯ ಬಳಿ ಬಂದು ನಿಂತು ‘ ಏಕ ಪಾತ್ರ ಧಾರಿಗಳಂತೆಯೇ’ ”i’m mad as hell and i’m not gonna take this anymore!” ಎಂದು ಬೊಬ್ಬೆ ಹಾಕುವ ದ್ರಶ್ಯವಿದೆ. ಎಂದರೆ ಈ ರೀತಿಯ ಏಕ ಪಾತ್ರ ಅಭಿನಯಗಳು ವೀಕ್ಷಕರು ಟಿ ವಿ’ಯಲ್ಲಿ ವೀಕ್ಷಿಸಿದಂತೆಯೇ ಅಭಿನಯಿಸುವಂತೆ ಪ್ರೇರೇಪಿಸುತ್ತದೆ ಎಂದರ್ಥ. ಇದು ನಮ್ಮ ಇಂದಿನ ಭಾರತದ ಬಹಳಷ್ಟು ರಾಷ್ಟ್ರೀಯ ಮತ್ತು ರಾಜ್ಯದ ಪ್ರಮುಖ ಮಾಧ್ಯಮಗಳ ಚರ್ಚೆಗಳು ಒಂದು ರೀತಿ ಏಕ ಪಾತ್ರ ಅಭಿನಯದಂತೆ ಮೂಡಿಬರುತ್ತಿದೆ. ಈ ರೀತಿ ಪ್ರೈಮ್ ಟೈಮ್ ಚರ್ಚೆಗಳು ತನ್ನ ಅಭಿಪ್ರಾಯವನ್ನು ವೀಕ್ಷಕರ ಮೇಲೆ ಹೇರುವುದು ಮಾತ್ರವಲ್ಲದೆ, ಅದನ್ನು ವೀಕ್ಷರು ಸತ್ಯವೆಂದು ನಂಬುವಂತೆ ಮತ್ತು ಕೆಲವು ಸಂದರ್ಭಗಳಲ್ಲಿ ಅವರು ಅದರಂತೆ ವರ್ತಿಸುವಂತೆ ಪ್ರಚೋದಿಸುತ್ತದೆ ಎಂದರೆ ತಪ್ಪಾಗಲಾರದು.

ಸೆಕ್ಷನ್ 306 I P C (ಇಂಡಿಯನ್ ಪೀನಲ್ ಕೋಡ್) (ಎಂದರೆ ಅಬೆಟ್ಮೆಂಟ್ ಟು ಸುಯಿಸೈಡ್) ಕಲಂ ಪ್ರಕಾರ ತಪ್ಪಿತಸ್ಥರನ್ನು ಸುಮಾರು 10 ವರ್ಷಗಳ ಕಾಲ ಶಿಕ್ಷಿಸಬಹುದಾಗಿದೆ. ಈ ಸೆಕ್ಷನ್ ಅಡಿ ಬಂಧಿತರಾಗಿ ಅರ್ನಬ್ ಜೈಲು ಸೇರಿದ್ದು ಇಂದು ಇತಿಹಾಸ.ಈ ನಾಟಕೀಯ (ಅರ್ನಬ್’ರ ಬಂಧನ ಮತ್ತು ಕೇವಲ ಒಂದೆರೆಡು ದಿನಗಳಲ್ಲಿ ಸುಪ್ರೀಮ್ ಕೋರ್ಟ್’ನಿಂದ ಜಾಮೀನು ಪಡೆದು ಬಿಡುಗಡೆಯಾದ) ಬೆಳವಣಿಗೆಯ ಮಧ್ಯೆ ಹಲವಾರು ವಿಚಾರಗಳು ಬಹು ಚರ್ಚಿತವಾದವು.ಪ್ರಥಮವಾಗಿ, ಕೆಲವರು ಈ ರೀತಿಯ ಬಂಧನವನ್ನು ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಡೆದಿರುವ ಹಲ್ಲೆ ಎಂದು ಕರೆದರೆ, ಇನ್ನು ಕೆಲವರು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪಕ್ಕೂ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಹಲ್ಲೆಗೂ ಬಹಳಷ್ಟು ವ್ಯತ್ಯಾಸವಿದೆ.

ಅರ್ನಬ್ ಅನ್ವಯ್ ನೈಕ್’ರಿಗೆ ಸುಮಾರು 80 ಲಕ್ಷದಷ್ಟು ಹಣ ನೀಡಲು ಬಾಕಿ ಇತ್ತು ಮತ್ತು ಅವರು ಅನ್ವಯ್’ರಿಗೆ ನೀಡಬೇಕಾಗಿದ್ದ ಆ ಹಣ ನೀಡದೆ ಇದ್ದುದರಿಂದ ತಾನು ಆತ್ಮಹತ್ಯೆಗೆ ಶರಣಾಗಬೇಕಾಗಿ ಬಂತು ಎಂದು ಸುಯಿ ಸೈಡ್ ನೋಟ್’ನಲ್ಲಿ ಬರೆದಿದ್ದರು, ಅದು ಈ ಬಂಧನಕ್ಕೆ ಕಾರಣವಾಯಿತೆ ಹೊರತು ರಿಪಬ್ಲಿಕ್ ಟಿ ವಿ’ಯ ಪ್ರಸಾರವನ್ನು ತಡೆಯುವ ನಿಟ್ಟಿನಲ್ಲಿ ಈ ಬಂಧನ ನಡೆದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಎರಡನೆಯ ವಿಚಾರ, ಸೆಕ್ಷನ್ 306 I P C ಅಡಿಯಲ್ಲಿ ಬಂಧಿತರಾದ ಅರ್ನಬ್’ರಿಗೆ ಸುಪ್ರೀಮ್ ಕೋರ್ಟ್ ಒಂದೆರೆಡು ದಿನಗಳಲ್ಲಿಯೇ ಮಧ್ಯಂತರ ಜಾಮೀನು ನೀಡಿತು ಆದರೆ ಇತರ UAPA ಆಕ್ಟ್ ಅಡಿ ಬಂಧಿತರಾದ ಹಲವಾರು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಈಗಲೂ ಜೈಲಿನಲ್ಲಿದ್ದಾರೆ ಎಂಬ ಚರ್ಚೆ.ಇದರಲ್ಲಿ ವಿಪರ್ಯಾಸವೇನೆಂದರೆ, UAPA (UNLAWFUL ACTIVITIES PREVENTION) ಒಂದು ವಿಶೇಷ ಕಾಯಿದೆ ಅದು ಒಂದು ರೀತಿ ಕರಾಳ ಕಾನೂನು ಇದ್ದಂತೆ, ಈ ಕಾನೂನಿನಡಿ ಬಂಧಿತರಾದ ಆರೋಪಿಯ ಆರೋಪಕ್ಕೂ ಸಾಮಾನ್ಯ ಐಪಿಸಿ ಕಾನೂನಿನಡಿ ಬಂಧಿತರಾದ ಆರೋಪಿಯ ಆರೋಪಕ್ಕೂ ಬಹಳ ವ್ಯತ್ಯಾಸವಿದೆ. UAPA ಕಾಯಿದೆ ಸರಿಯಾಗಿ ಓದಿದರೆ ಮಾತ್ರ ಅದರಲ್ಲಿ ಎಷ್ಟು ವ್ಯತ್ಯಾಸವಿದೆ ಎಂದು ತಿಳಿಯಬಹುದು. ಅದರಿಂದಾಗಿ ಈ ಎರಡು ಕಾನೂನುಗಳ ಮಧ್ಯೆ ಸಾಮ್ಯತೆ ಕಲ್ಪಿಸುವುದು ಅಷ್ಟು ಸರಿಯಾಗುವುದಿಲ್ಲ. ಆದರೆ ಪೊಲೀಸ್ ಇಲಾಖೆಯು ಹತ್ರಾಸ್ ಘಟನೆಯ ಕುರಿತು ವರದಿ ಬರೆಯಲು ಹೋದ ಪತ್ರಕರ್ತರನ್ನು ಉಅಪ ಅಥವಾ ರಾಜ್ಯದ್ರೋಹದ ಹೆಸರಿನಲ್ಲಿ ಬಂಧಿಸಿರುವುದು ಅತ್ಯಂತ ಕಳವಳಕಾರಿ ವಿಚಾರ. ಅದೇರೀತಿ ಹಲವಾರು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ರಾಜ್ಯದ್ರೋಹ ಕಾನೂನಿನಡಿ ಬಂಧಿಸಿರುವುದರಿಂದ ಅವರಿಗೆ ಅರ್ನಾಬ್’ರಂತೆ ಅತ್ಯಂತ ಪ್ರಭಾವಿ ವಕೀಲರನ್ನು ಬಳಸಿ ಜಾಮೀನು ಪಡೆಯಲು ಸಾಧ್ಯವಿಲ್ಲ ಎನ್ನುವುದು ನಿಜ. ಅಂದರೆ ಕೋರ್ಟಿನಲ್ಲಿ ಒಂದು ಕರಾಳ ಕಾನೂನನ್ನು ಎದುರಿಸುವುದು ಮತ್ತು ಒಂದು ಸಾಮಾನ್ಯ ಕಾನೂನನ್ನು ಎದುರಿಸುವುದು ಬಹಳ ಅಂತರವಿದೆ.

ಮೂರನೇಯ ವಿಚಾರವು ಸೆಲೆಕ್ಟಿವ್ ಲಿಸ್ಟಿಂಗ್ , ಅಂದರೆ ಸುಪ್ರೀಮ್ ಕೋರ್ಟ್ ಅಂಗಳದಲ್ಲಿ ಅತೀ ವೇಗವಾಗಿ ಇತ್ಯರ್ಥವಾಗಬೇಕಿದ್ದ ಸಾವಿರಾರು ವ್ಯಾಜ್ಯಗಳಿರುವಾಗ, ಇಷ್ಟು ಬೇಗ ಅರ್ನಾಬ್’ರ ಪ್ರಕರಣವು ಹೇಗೆ ಇತ್ಯಥವಾಯಿತು ಎನ್ನುವ ವಿಚಾರದ ಕುರಿತು ಸುಪ್ರೀಮ್ ಕೋರ್ಟ್ ಬಾರ್ ಅಸೋಸಿಯೇಷನ್’ನ ಅಧ್ಯಕ್ಷರಾದ ದುಷಂತ ದಾವೆ ಪತ್ರ ಬರೆದು ತನ್ನ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣವು ನಮ್ಮ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯು ಕೆಲವರೊಂದಿಗೆ ಒಂದು ರೀತಿ ಇನ್ನು ಕೆಲವರೊಂದಿಗೆ ಬೇರೆಯೇ ರೀತಿಯಲ್ಲಿ ವರ್ತಿಸುತ್ತದೆ ಎಂದು ಕೆಲವರು ಆರೋಪಿಸುವಂತೆ ಮಾಡಿದೆ. ಎಲ್ಲಿಯ ತನಕವೆಂದರೆ ಕುನಲ್ ಕಮ್ರಾ ಎನ್ನುವ ಸ್ಟಾಂಡ್-ಅಪ್ ಕಾಮಿಡಿಯನ್ ಬಹಿರಂಗವಾಗ ”ಸುಪ್ರೀಮ್ ಕೋರ್ಟ್’ನ್ನು ಸುಪ್ರೀಮ್ ಜೋಕ್” ಎಂದು ಕರೆದು ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದಾರೆ.

ಒಟ್ಟಿನಲ್ಲಿ ನ್ಯಾಯಾಂಗದ ಮೇಲಿನ ವಿಶ್ವಾಸ ಮತ್ತು ನಂಬಿಕೆ ಸಾಮಾನ್ಯ ಜನರಲ್ಲಿ ಉಳಿದುಕೊಳ್ಳುವಂತೆ ಜಾಗರೂಕತೆ ವಹಿಸಬೇಕಾಗಿದೆ. ಕೆಲವೊಂದು ವಿಷಯವನ್ನಿಟ್ಟುಕೊಂಡು ಸುಪ್ರೀಮ್ ಕೋರ್ಟ್’ನ ಇಡೀ ಕಾರ್ಯವೈಖರಿಯನ್ನು ಸಾರ್ವಜನಿಕವಾಗಿ ಚರ್ಚಿಸುವಾಗ ಅದರ ಘನತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿರುತ್ತ
ದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಧರೆಗುರುಳಿದ ಪುರಾತನ ಮರ: ತಪ್ಪಿದ ಭಾರೀ ಅನಾಹುತ

ಮಂಗಳೂರು: ಸುಮಾರು 30 ವರ್ಷಗಳ ಹಳೇಯ ಅಶ್ವತ್ಥ‌ ಮರವೊಂದು ಧರೆಗುರುಳಿದ ಘಟನೆ ಇಂದು ಬೆಳಗ್ಗೆ ನಗರದ ಕಾರ್‌ಸ್ಟ್ರೀಟ್‌ನಲ್ಲಿ ನಡೆದಿದೆ. ಕಾರ್‌ಸ್ಟ್ರೀಟ್‌ನ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿದ್ದ ಈ ಮರವನ್ನು ದೇವಸ್ಥಾನದ ಭಕ್ತರು ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು....

ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಈಜು

ಉಡುಪಿ, ಜ.24: ಕಿದಿಯೂರು ಪಡುಕೆರೆಯ ಸಮುದ್ರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಈಜು ಮೂಲಕ ಗಂಗಾಧರ ಜಿ.ಕಡೆಕಾರ್ ಹೊಸ ದಾಖಲೆ ನಿರ್ಮಿಸಿದ್ದಾರೆ. 65ರ ಹರೆಯದ ಗಂಗಾಧರ್ ಬೆಳಗ್ಗೆ 8.36ರಿಂದ 9.49ರ...

ಉಳ್ಳಾಲ : ಪಾದಚರಿಗೆ ಅಪರಿಚಿತ ವಾಹನ ಡಿಕ್ಕಿ : ವೃದ್ಧ ಸ್ಥಳದಲ್ಲೇ ಸಾವು

ಉಳ್ಳಾಲ (ಜ.24): ಪಾದಾಚಾರಿ ವೃದ್ಧರೊಬ್ಬರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ನಸುಕಿನ ಜಾವದಲ್ಲಿ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಬಂಟ್ವಾಳ, ಪಾಣೆಮಂಗಳೂರಿನ ನಿವಾಸಿ...

Related Articles

ಕೃಷಿ ಕಾಯಿದೆಗಳು ಮತ್ತು ಆದಾನಿ, ಅಂಬಾನಿಗಳ ಲಾಭಗಳು

ಲೇಖಕರು: ಶಿವ ಸುಂದರ್ ಕಳೆದ ೪೭ ದಿನಗಳಿಂದ ದೆಹಲಿಗೆ ಮುತ್ತಿಗೆ ಹಾಕಿರುವ ಚರಿತ್ರಾರ್ಹ ರೈತ ಚಳವಳಿ ಒಂದು ದೇಶವ್ಯಾಪಿ ಬೃಹತ್ ಜನಾಂದೋಲನದ ರೂಪ ಪಡೆದುಕೊಂಡು ನಿರ್ಣಾಯಕ ಘಟ್ಟ ಪ್ರವೇಶಿಸಿದೆ. ಅದರಲ್ಲೂ ರೈತ ಚಳವಳಿಯು ಜನವರಿ...

ಅಂತರ್-ಧರ್ಮಿಯ ಪ್ರಣಯದ ವಿರುದ್ಧ ಕ್ರಿಮಿನಲ್ ಪಿತೂರಿ – (ಭಾಗ ಮೂರು)

ಲೇಖಕರು: ಟಿ ಐ ಬೆಂಗ್ರೆ (ವಕೀಲರು,ಬೆಂಗಳೂರು) ವಿಶ್ವಾಸ ಮತ್ತು ಪ್ರಣಯ ವಿಶ್ವಾಸ ಎಂದರೆ ಒಂದು ವಿಷಯವನ್ನು ಯಾವುದೇ ಪುರಾವೆಯ ಜೊತೆ ಅಥವಾ ಪುರಾವೆ ಇಲ್ಲದೆ ಒಪ್ಪಿಕೊಳ್ಳುವುದು. ಒಬ್ಬ ಪ್ರಜ್ಞೆ ಇಲ್ಲದ ವ್ಯಕ್ತಿಯ ವಿಶ್ವಾಸವನ್ನು, ವಿಶ್ವಾಸ ಎಂದು...

ಪ್ರಣಯದ ವಿರುದ್ದ ಕ್ರಿಮಿನಲ್ ಪಿತೂರಿ (ಭಾಗ 2)

ಲೇಖಕರು: ಟಿ.ಐ ಬೆಂಗ್ರೆ (ವಕೀಲರು, ಬೆಂಗಳೂರು) ಲವ್ ಅಂಡ್ ಹಾನರ್ ಕಿಲ್ಲಿಂಗ್ ಪ್ರಣಯ ಎಂದರೆ ಹದಿಹರೆಯದ ವ್ಯಕ್ತಿಯಲ್ಲಿ ಮೂಡುವ ಒಂದು (ಹುಡುಗನಿಗೆ ಹುಡುಗಿಯೊಂದಿಗೆ ಅಥವಾ ಹುಡುಗಿಗೆ ಹುಡುಗನೊಂದಿಗಿನ ವಿಶೇಷ ಆಕರ್ಷಣೆ) ಸ್ಪೆಷಲ್ ಫೀಲಿಂಗ್ಸ್, ಅದು ಮನುಷ್ಯ...
Translate »
error: Content is protected !!