ಬೆಂಗಳೂರು (ನ.14): ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿ ಜೈಲು ಸೇರಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ದೀಪಾವಳಿಗೆ ನಮಗೆ ಹೊಸ ಬಟ್ಟೆ ಬೇಕು. ಹೊಸ ಬಟ್ಟೆ ಕೊಡಿ, ಇಲ್ಲ ನಮ್ಮ ಮನೆಯವರನ್ನು ಕರೆಸಿ ಎಂದು ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜೈಲಿನಲ್ಲಿರುವ ಸಂಜನಾ ಮತ್ತು ರಾಗಿಣಿ ಕಳೆದ 50ಕ್ಕೂ ಹೆಚ್ಚು ದಿನದಿಂದ ಪೋಷಕರನ್ನು ನೋಡಿಲ್ಲದೇ ದೀಪಾವಳಿ ನೆಪ ಮಾಡಿಕೊಂಡು ಹೊಸ ಬಟ್ಟೆ ಕೊಡಿ ಇಲ್ಲಾ ನಮ್ಮ ಮನೆಯವರನ್ನು ಕರೆಸಿ ಎಂದು ಬೇಡಿಕೆ ಯಿಟ್ಟು ರಂಪಾಟ ಮಾಡಿದ್ದಾರೆ.ದೀಪಾವಳಿ ಹಬ್ಬಕ್ಕೆ ನಮಗೆ ಬಟ್ಟೆ ಕೊಟ್ಟು ಹೋಗಲು ನಮ್ಮ ಪೋಷಕರನ್ನು ಬಿಡಿ ಎಂದು ನಟಿ ಮಣಿಯರು ಕಣ್ಣೀರು ಹಾಕಿದ್ದಾರೆ ಎಂದು ತಿಳಿದು ಬಂದಿದೆ.