ದುಬೈ: – ಯುನೈಟೆಡ್ ಅರಬ್ ಎಮಿರೇಟ್ಸ್ ದೇಶವು ಇಸ್ಲಾಮಿಕ್ ವೈಯಕ್ತಿಕ ಕಾನೂನು ಸಡಿಲಗೊಳಿಸಿದ್ದು ಇದೀಗ
ಅವಿವಾಹಿತ ದಂಪತಿಗಳಿಗೆ ಸಹಬಾಳ್ವೆ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಆಲ್ಕೊಹಾಲ್ ನಿರ್ಬಂಧಗಳನ್ನು ಸಡಿಲಗೊಳಿಸಿದೆ.
ಇಸ್ಲಾಮಿಕ್ ಧಾರ್ಮಿಕ ಕಾನೂನಿನ ಆಧಾರದ ಮೇಲಿನ ಯುಎಇ ಶಾಸನವನ್ನು ಬಳಸುವುದಕ್ಕಿಂತ ಹೆಚ್ಚಾಗಿ ಗಲ್ಫ್ ರಾಜ್ಯದಲ್ಲಿ ವಾಸಿಸುವ ವಿದೇಶಿಯರು ವಿಚ್ಛೇದನ ಮತ್ತು ಆನುವಂಶಿಕತೆಯ ಬಗ್ಗೆ ತಮ್ಮ ತಾಯ್ನಾಡಿನ ಕಾನೂನುಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರ-ಸಂಬಂಧಿತ ಮಾಧ್ಯಮ ವರದಿ ಮಾಡಿದೆ.
ಹತ್ತರಲ್ಲಿ ಒಂಭತ್ತು ಮಂದಿ ವಲಸಿಗರನ್ನು ಹೊಂದಿರುವ ಯು.ಎ.ಇ, ಪ್ರವಾಸಿಗರನ್ನು ಮತ್ತು ವ್ಯಾಪರ ವೃದ್ದಿಗೆ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ. ಈ ಮುಂಚೆಯೂ ಕೂಡ ಇದು ತನ್ನದೇ ದೇಶದ ಕಾನೂನು ಪಾಲನೆಯಲ್ಲಿ ಹಿಂಜರಿಯುತ್ತಿತ್ತು ಎನ್ನಲಾಗಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ಕಂಡು ಬಂದಲ್ಲಿ ಕಠಿಣವಾಗಿ ಶಿಕ್ಷಿಸುವ ಕಾನೂನಿನ ಬಗ್ಗೆ ಈ ಸಂದರ್ಭದಲ್ಲಿ ಸರಕಾರ ಮಾಹಿತಿ ನೀಡಿರುವ ಬಗ್ಗೆ ವರದಿಯಾಗಿದೆ.
ಮುಂದಿನ ವರ್ಷದ ವರ್ಲ್ಡ್ ಎಕ್ಸ್ಪೊ ಕೂಡ ನಡೆಯಲಿರುವುದರಿಂದ ಜನಾಕರ್ಷಣೆಗೆ ಯುಎಇ ಸರಕಾರ ಈ ನೀತಿಗಳನ್ನು ಪರಿಚಯಿಸುತ್ತಿದೆ ಎನ್ನಲಾಗಿದೆ.