ಉಳ್ಳಾಲದ ರಾಣಿ ಅಬ್ಬಕ್ಕ, ಬ್ಯಾರಿಗಳು ಮತ್ತು ಕಲ್ಲಡ್ಕ ಪ್ರಭಾಕರ ಭಟ್ರ ಹೇಳಿಕೆ

ಉಡುಪಿ ಜಿಲ್ಲಾಮಟ್ಟದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಉಡುಪಿ, ಜ.24: ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಶಕ್ತಿ ಕೇಂದ್ರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ...

ಗಗಕ್ಕೇರುತ್ತಿರುವ ಪೆಟ್ರೋಲ್ ಡಿಸೇಲ್ ಬೆಲೆ : ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ನವದೆಹಲಿ (ಜ.24): ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಈ ಕುರಿತಂತೆ ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿರುವ...

ಮಂಗಳೂರು: ಧರೆಗುರುಳಿದ ಪುರಾತನ ಮರ: ತಪ್ಪಿದ ಭಾರೀ ಅನಾಹುತ

ಮಂಗಳೂರು: ಸುಮಾರು 30 ವರ್ಷಗಳ ಹಳೇಯ ಅಶ್ವತ್ಥ‌ ಮರವೊಂದು ಧರೆಗುರುಳಿದ ಘಟನೆ ಇಂದು ಬೆಳಗ್ಗೆ ನಗರದ ಕಾರ್‌ಸ್ಟ್ರೀಟ್‌ನಲ್ಲಿ ನಡೆದಿದೆ. ಕಾರ್‌ಸ್ಟ್ರೀಟ್‌ನ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿದ್ದ ಈ ಮರವನ್ನು ದೇವಸ್ಥಾನದ ಭಕ್ತರು ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು....

ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಈಜು

ಉಡುಪಿ, ಜ.24: ಕಿದಿಯೂರು ಪಡುಕೆರೆಯ ಸಮುದ್ರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಈಜು ಮೂಲಕ ಗಂಗಾಧರ ಜಿ.ಕಡೆಕಾರ್ ಹೊಸ ದಾಖಲೆ ನಿರ್ಮಿಸಿದ್ದಾರೆ. 65ರ ಹರೆಯದ ಗಂಗಾಧರ್ ಬೆಳಗ್ಗೆ 8.36ರಿಂದ 9.49ರ...

ಉಳ್ಳಾಲ : ಪಾದಚರಿಗೆ ಅಪರಿಚಿತ ವಾಹನ ಡಿಕ್ಕಿ : ವೃದ್ಧ ಸ್ಥಳದಲ್ಲೇ ಸಾವು

ಉಳ್ಳಾಲ (ಜ.24): ಪಾದಾಚಾರಿ ವೃದ್ಧರೊಬ್ಬರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ನಸುಕಿನ ಜಾವದಲ್ಲಿ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಬಂಟ್ವಾಳ, ಪಾಣೆಮಂಗಳೂರಿನ ನಿವಾಸಿ...

– ನವೀನ್ ಸೂರಿಂಜೆ

ಬ್ಯಾರಿ ಮುಸ್ಲೀಮರ ಸಂಖ್ಯೆ ಜಾಸ್ತಿ ಇದೆ ಎನ್ನುವ ಕಾರಣಕ್ಕಾಗಿ ಉಳ್ಳಾಲವನ್ನು ಪಾಕಿಸ್ತಾನ ಎಂದ ಕಲ್ಲಡ್ಕ ಪ್ರಭಾಕರ ಭಟ್ಟರ ಮಾತನ್ನು ಕೇವಲ ಅಷ್ಟಕ್ಕೇ ಸೀಮಿತಗೊಳಿಸಿ ನೋಡಬಾರದು. ಈ ಮಾತಿನ ಹಿಂದೆ ಕರಾವಳಿಯ ಮಾತೃಪ್ರಧಾನ ಸಂಸ್ಕೃತಿಯನ್ನು ಅವಹೇಳನ ಮಾಡುವ, ಇತಿಹಾಸವನ್ನು ತಿರುಚುವ ಕುತಂತ್ರವಿದೆ.

ಉಳ್ಳಾಲವನ್ನು ಪಾಕಿಸ್ತಾನ ಎಂದು ಕರೆದು ಭಟ್ಟರು ಸುಮ್ಮನಾಗುವುದಿಲ್ಲ. ಮುಂದುವರೆದು, ಹಿಂದೂ ಮಹಿಳೆಯರು ಹೆಚ್ಚು ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ಕರೆ ನೀಡುತ್ತಾರೆ. ಅದೂ ಉಳ್ಳಾಲದ ರಾಣಿ ಅಬ್ಬಕ್ಕನ‌ ನೆಲದಲ್ಲಿ..!

ಉಳ್ಳಾಲದ ರಾಣಿ ಅಬ್ಬಕ್ಕಳು ಮಾತೃಪ್ರಧಾನ ಸಂಸ್ಕೃತಿಯಾದ “ಅಳಿಯ ಸಂತಾನ” ನಿಯಮದಂತೆ ಪಟ್ಟಕ್ಕೇರಿದ್ದಳು. ಪತಿ ಲಕ್ಷ್ಮಪ್ಪ ಅರಸನೊಂದಿಗೆ ಸ್ವಲ್ಪ ಕಾಲ ಬಾಳಿ ಪ್ರತ್ಯೇಕಗೊಂಡಳು‌. ನಂತರ ಏಕಾಂಗಿಯಾಗಿ ಉಳ್ಳಾಲದ ರಾಣಿಯಾಗಿ ಆಳ್ವಿಕೆ ಮಾಡುತ್ತಾಳೆ. ಪ್ರಭಾಕರ ಭಟ್ಟರು ಹೇಳಿದಂತೆ ಕರಾವಳಿಯ ಮಹಿಳೆಯರಿಗೆ ಮಕ್ಕಳು ಹುಟ್ಟಿಸುವುದಷ್ಟೇ ಕೆಲಸ ಆಗಿದ್ದರೆ ರಾಣಿ ಅಬ್ಬಕ್ಕ, ಸಿರಿ ಇತಿಹಾಸ ಸೃಷ್ಟಿಸುತ್ತಿರಲಿಲ್ಲ. ಮುಂದೆ ಪೋರ್ಚುಗೀಸರು ಉಳ್ಳಾಲದ ಮೇಲೆ ದಾಳಿ ಮಾಡಿದಾಗ ರಾಣಿ ಅಬ್ಬಕ್ಕನ ವಿಚ್ಚೇದಿತ ಪತಿ ಲಕ್ಷ್ಮಪ್ಪ ಅರಸನು ಪೋರ್ಚುಗೀಸರ ಜೊತೆ ಸೇರಿ ರಾಣಿ ಅಬ್ಬಕ್ಕನ ವಿರುದ್ದ ಸಮರ ಸಾರುತ್ತಾನೆ ! ಈಗ ಪ್ರಭಾಕರ ಭಟ್ಟರು ಉಳ್ಳಾಲ ಪಾಕಿಸ್ತಾನ ಎಂದು ಭಾಷಣ ಮಾಡಿರುವುದು ದಂಪತಿಗಳ ಸಮಾವೇಶದಲ್ಲಿ..!
ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರನ್ನು ಎದುರಿಸಿದ್ದು ಉಳ್ಳಾಲ ಬ್ಯಾರಿಗಳ ಸಹಕಾರದಲ್ಲಿ…! ಪ್ರಭಾಕರ ಭಟ್ಟರ ಪೂರ್ವಜರಾಗಿದ್ದ ಒಂದು ವರ್ಗ ಪೋರ್ಚುಗೀಸರಿಗೆ ಸಹಕಾರ ನೀಡಿದಾಗ, ಉಳ್ಳಾಲವನ್ನು ಉಳಿಸಲು ರಾಣಿ ಅಬ್ಬಕ್ಕನ ನೆರವಿಗೆ ಬಂದಿದ್ದು ಉಳ್ಳಾಲದ ಬ್ಯಾರಿ ಮುಸ್ಲೀಮರು. ಆಗಿನ ಕಾಲಕ್ಕೇ ಸಮುದ್ರ ತೀರದಲ್ಲಿ ನೌಕಾಪಡೆ ಹೊಂದಿದ್ದ ಉಳ್ಳಾಲದ ರಾಣಿ ಅಬ್ಬಕ್ಕ, ಅದರ ಸಂಪೂರ್ಣ ಉಸ್ತುವಾರಿಯನ್ನು ಬ್ಯಾರಿ ಮುಸ್ಲೀಮರಿಗೆ ನೀಡಿದ್ದರು. ಪೋರ್ಚುಗೀಸರು ಉಳ್ಳಾಲದ ರಾಣಿ ಅಬ್ಬಕ್ಕನಿಗೆ ಎಷ್ಟು ಹೆದರುತ್ತಿದ್ದರೂ ಉಳ್ಳಾಲದ ಬ್ಯಾರಿಗಳನ್ನು ಕಂಡರೂ ಅಷ್ಟೇ ಭಯಪಡುತ್ತಿದ್ದರು. ಆದ್ದರಿಂದಲೇ ಉಳ್ಳಾಲ ಪೋರ್ಚುಗೀಸರ ವಶವಾದರೂ ಐತಿಹಾಸಿಕ ಸೋಮೇಶ್ವರ ದೇವಸ್ಥಾನ ಹಾಗೇ ಉಳಿದುಕೊಂಡಿತು.

ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು, ಕಾರ್ಕಳದ ಅರಸರ ದಾಳಿಯಾದಾಗಲೇ ಸುರಕ್ಷಿತವಾಗಿದ್ದ ಉಳ್ಳಾಲದ ದೇವಸ್ಥಾನಗಳು ಈಗ ಪ್ರಭಾಕರ ಭಟ್ಟರ ದಾಳಿಯಿಂದ ನಾಶವಾಗುವುದುಂಟೆ ? ಅವತ್ತೂ ಮೊಗವೀರ, ಬಿಲ್ಲವ, ಮುಸ್ಲೀಮರು ಜತೆಯಾಗಿ ಉಳ್ಳಾಲವನ್ನೂ, ಅಲ್ಲಿನ ಧಾರ್ಮಿಕ ಕ್ಷೇತ್ರಗಳನ್ನು ರಕ್ಷಿಸಿದರು. ಈಗಲೂ, ಮುಂದೆಯೂ ಅವರೇ ರಕ್ಷಿಸಬೇಕಿರುವವರು..!

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಧರೆಗುರುಳಿದ ಪುರಾತನ ಮರ: ತಪ್ಪಿದ ಭಾರೀ ಅನಾಹುತ

ಮಂಗಳೂರು: ಸುಮಾರು 30 ವರ್ಷಗಳ ಹಳೇಯ ಅಶ್ವತ್ಥ‌ ಮರವೊಂದು ಧರೆಗುರುಳಿದ ಘಟನೆ ಇಂದು ಬೆಳಗ್ಗೆ ನಗರದ ಕಾರ್‌ಸ್ಟ್ರೀಟ್‌ನಲ್ಲಿ ನಡೆದಿದೆ. ಕಾರ್‌ಸ್ಟ್ರೀಟ್‌ನ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿದ್ದ ಈ ಮರವನ್ನು ದೇವಸ್ಥಾನದ ಭಕ್ತರು ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು....

ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಈಜು

ಉಡುಪಿ, ಜ.24: ಕಿದಿಯೂರು ಪಡುಕೆರೆಯ ಸಮುದ್ರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಈಜು ಮೂಲಕ ಗಂಗಾಧರ ಜಿ.ಕಡೆಕಾರ್ ಹೊಸ ದಾಖಲೆ ನಿರ್ಮಿಸಿದ್ದಾರೆ. 65ರ ಹರೆಯದ ಗಂಗಾಧರ್ ಬೆಳಗ್ಗೆ 8.36ರಿಂದ 9.49ರ...

ಉಳ್ಳಾಲ : ಪಾದಚರಿಗೆ ಅಪರಿಚಿತ ವಾಹನ ಡಿಕ್ಕಿ : ವೃದ್ಧ ಸ್ಥಳದಲ್ಲೇ ಸಾವು

ಉಳ್ಳಾಲ (ಜ.24): ಪಾದಾಚಾರಿ ವೃದ್ಧರೊಬ್ಬರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ನಸುಕಿನ ಜಾವದಲ್ಲಿ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಬಂಟ್ವಾಳ, ಪಾಣೆಮಂಗಳೂರಿನ ನಿವಾಸಿ...

Related Articles

ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಈಜು

ಉಡುಪಿ, ಜ.24: ಕಿದಿಯೂರು ಪಡುಕೆರೆಯ ಸಮುದ್ರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಈಜು ಮೂಲಕ ಗಂಗಾಧರ ಜಿ.ಕಡೆಕಾರ್ ಹೊಸ ದಾಖಲೆ ನಿರ್ಮಿಸಿದ್ದಾರೆ. 65ರ ಹರೆಯದ ಗಂಗಾಧರ್ ಬೆಳಗ್ಗೆ 8.36ರಿಂದ 9.49ರ...

ಎಫ್’ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಸಮಗ್ರ ತನಿಖೆಗೆ ಸಿಎಂ ಆದೇಶ, 14 ಮಂದಿ ಬಂಧನ

ಬೆಂಗಳೂರ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್'ಸಿ) ನಡೆಸುವ ಪ್ರಥಮ ದರ್ಜೆ ಸಹಾಯಕ (ಎಫ್'ಡಿಎ) ಹುದ್ದೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪ್ರಕರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಪ್ರಕರಣ ಸಂಬಂಧ...

ತಕ್ಷಣ ಅಕ್ರಮ ಗಣಿಗರಿಕೆ ನಿಲ್ಲಿಸಬೇಕು ರಾಜ್ಯದ ಎಲ್ಲಾ ಡಿಸಿ ಗಳಿಗೆ ಸಿಎಂ ಸೂಚನೆ

ಶಿವಮೊಗ್ಗ (ಜ.24): ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಇಂದು ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿದ ಅವರು, ತಕ್ಷಣ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು. ಗಣಿಗಾರಿಕೆ...
Translate »
error: Content is protected !!