ಆನೇಕಲ್(ಅ.26): ಕುಡಿದ ಮತ್ತಿನಲ್ಲಿ ಹೆಂಡತಿಗೆ ಗಂಡನೊಬ್ಬ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೇಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದವಾರನ್ನು ಗೌರಮ್ಮ(42)ಎಂದು ಗುರುತಿಸಲಾಗಿದೆ. ಕುಮಾರ್(48) ಹೆಂಡತಿಯನ್ನೇ ಕೊಂದ ಪಾಪಿ ಗಂಡ. ಮೂಲತಃ ಬೆಂಗಳೂರಿನ ಕೊತ್ತನೂರು ದಿಣ್ಣೆ ನಿವಾಸಿಗಳಾದ ಕುಮಾರ್ ಮತ್ತು ಗೌರಮ್ಮ ದಂಪತಿ ಕಳೆದ 8 ತಿಂಗಳಿಂದ ಬೇಗಿಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಗೌರಮ್ಮ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ, ಕುಡುಕ ಗಂಡ ಕುಮಾರ್ ಹೆಸರಿಗೆ ಮಾತ್ರ ಪೇಯಿಂಟ್ ಕೆಲಸ ಅಂತ ಹೇಳಿಕೊಂಡು ಯಾವಾಗಲೂ ಹೆಂಡತಿಯ ಹಣದಲ್ಲಿ ಕುಡಿಯುವುದು ರಾತ್ರಿಯಾದ್ರೆ ಹೆಂಡತಿಯನ್ನೇ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.