ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವ 50ಕ್ಕೂ ಅಧಿಕ ಬಿಜೆಪಿ ಯುವ ಕಾರ್ಯಕರ್ತರು ಕಾಂಗ್ರೆಸ್ ತೆಕ್ಕೆಗೆ

ಡಿಸೆಂಬರ್ 5 ಕ್ಕೆ ಹಿಂದೆಂದೂ ನಡೆಯದ ರೀತಿಯಲ್ಲಿ ಕರ್ನಾಟಕ ಬಂದ್ – ವಾಟಳ್ ನಾಗರಾಜ್!

ಬೆಂಗಳೂರು: ಡಿಸೆಂಬರ್ 5ಕ್ಕೆ ಹಿಂದೆಂದೂ ನಡೆಯದ ರೀತಿಯಲ್ಲಿ ಕರ್ನಾಟಕ ಬಂದ್ ನಡೆಯುತ್ತದೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ "ಕನ್ನಡವನ್ನು...

ಬೈಕ್ ಸವಾರರಿಗೆ ಪ್ರಮುಖ ಸುದ್ದಿ, ಜೂನ್ 2021 ಈ ನಿಯಮ ಕಡ್ಡಾಯ!

ನವದೆಹಲಿ: 2021ರ ಜೂನ್ ನಿಂದ ಭಾರತದಲ್ಲಿ ಬಿಐಎಸ್(ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್)ಯೇತರ ಹೆಲ್ಮೆಟ್ ಗಳನ್ನು ಉತ್ಪಾದಿಸುವುದಾಗಲಿ ಅಥವಾ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಬೈಕ್ ಸವಾರರು ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್ ಧರಿಸದೇ...

ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಡ್ರಗ್ಸ್ ವಿರುದ್ಧ ಕ್ರಮ ತೆಗೆದು ಕೊಳ್ಳದೆ ಕತ್ತೆ ಕಾಯುತ್ತಿತ್ತೆ?: ಸೊರಕೆ ಗರಂ

ಉಡುಪಿ: ಕಳೆದ ಒಂದೂವರೆ ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಇವರು ಡ್ರಗ್ಸ್ ಮಾಫಿಯಾದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಕತ್ತೆ ಕಾಯುತ್ತಿದ್ದರಾ? ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿಂದು ಕರೆದ...

ಬೀದಿಪಾಲಾದ ಮನೋರೋಗಿ ಮಹಿಳೆಯ ರಕ್ಷಣೆ

ಉಡುಪಿ (ನ. 27): ಉಡುಪಿಯ ಉದ್ಯಾವರದಲ್ಲಿ ಕಳೆದ ಮೂರು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯೋರ್ವರು ಮಾನಸಿಕ ರೋಗಿಯಾಗಿ ತಿರುಗಾಡುತ್ತಿದ್ದು, ಮಹಿಳೆಯ ರಕ್ಷಣೆ ಹಾಗೂ ಚಿಕಿತ್ಸೆಗಾಗಿ ವಿಶು ಶೆಟ್ಟಿ ಅಂಬಲಪಾಡಿಯವರು ...

ಭಾರತದಲ್ಲಿ ಕೊರೋನಾ ಸೋಂಕು ಹುಟ್ಟು – ಚೀನಾ ಗಂಭೀರ ಆರೋಪ

ಬೀಜಿಂಗ್, (ನ. (28): ಕೊರೊನಾ ಸೋಂಕು ಭಾರತದಲ್ಲೇ ಹುಟ್ಟಿರುವುದು ನಂತರ ಬೇರೆ ದೇಶಗಳಿಗೆ ಹಬ್ಬಿದೆ ಎಂದು ಚೀನಾವು ಗಂಭೀರ ಆರೋಪ ಮಾಡಿದೆ. ಕೊರೊನಾ ಹುಟ್ಟಿರುವುದು ಚೀನಾದ ವುಹಾನ್ ನಗರದಲ್ಲಿ ಎಂದು ಇಡೀ ಜಗತ್ತಿಗೆ...

ಕುಂದಾಪುರ : ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವದಲ್ಲಿ ಬಿಜೆಪಿಯ ಐವತ್ತು ಕಾರ್ಯಕರ್ತರು ಕಾಂಗ್ರೆಸ್’ಗೆ ಸೇರ್ಪಡೆಗೊಂಡರು.

 

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕಟ್ ಬೆಲ್ತೂರು ನಿವಾಸದಲ್ಲಿ ಕಟ್ ಬೆಲ್ತೂರು, ಹೆಮ್ಮಾಡಿ ಗ್ರಾ.ಪಂ ವ್ಯಾಪ್ತಿಯ ಬಿಜೆಪಿ ಯುವ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಸುಕುಮಾರ್ ಶೆಟ್ಟಿಯವರು ಕಾಂಗ್ರೆಸ್ ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಬರುವಂತೆ ಹೇಳುವ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಕೂಡ ಬಿಜೆಪಿಗರನ್ನು ಪಕ್ಷಕ್ಕೆ ಸೆಳೆಯುತ್ತದೆ ಎನ್ನುವ ಬಗ್ಗೆ ಶನಿವಾರ ನಡೆದ ಸಭೆಯಲ್ಲಿ ಹೇಳಿಕೆ ನೀಡಿದ್ದು ಅದಕ್ಕೆ ಪೂರಕವಾಗಿ ಹೆಮ್ಮಾಡಿ ಹಾಗೂ ಕಟ್ ಬೆಲ್ತೂರು ಗ್ರಾ.ಪಂ ವ್ಯಾಪ್ತಿಯ ಬಿಜೆಪಿ ಯುವ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ‌. ಇದು ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ಕರಾವಳಿಯಿಂದ ಮೊದಲ್ಘೊಂಡು ಮಲೆನಾಡು ತನಕವೂ ಬಿಜೆಪಿಗರನ್ನು ಕೈ ಪಾಳಯಕ್ಕೆ ಕರೆತರುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದಿದ್ದಾರೆ.

ಕಟ್ ಬೆಲ್ತೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಹೆಮ್ಮಾಡಿ, ಕಟ್ ಬೆಲ್ತೂರು ಗ್ರಾ.ಪಂ ವ್ಯಾಪ್ತಿಯ ಯುವಕರ ತಂಡ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಮುಂದಿನ ಗ್ರಾ.ಪಂ ಚುನಾವಣೆಯಲ್ಲಿ ಹೆಮ್ಮಾಡಿ ಹಾಗೂ ಕಟ್ ಬೆಲ್ತೂರು ಗ್ರಾಮಪಂಚಾಯತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಪಣತೊಟ್ಟಿದ್ದು ಎರಡು ಪಂಚಾಯತಿಯಲ್ಲಿ ನಮ್ಮದೆ ಗೆಲುವು ಎಂದರು

ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸತ್ಯನಾರಾಯಣ್ ಹೆಮ್ಮಾಡಿ (ನಾಣಿ), ಮುಖಂಡರಾದ ಕೃಷ್ಣಮೂರ್ತಿ ಹೆಮ್ಮಾಡಿ, ಪ್ರಶಾಂತ್ ಪೂಜಾರಿ ಕರ್ಕಿ, ರಾಜು ಪೂಜಾರಿ ಹೆಮ್ಮಾಡಿ, ಯಾಸಿನ್ ಹೆಮ್ಮಾಡಿ, ಸಂತೋಷ್ ಕುಮಾರ್ ತೋಟಬೈಲು, ರಾಘವೇಂದ್ರ ಹೆಮ್ಮಾಡಿ, ಸುಧಾಕರ ಕಟ್ಟು, ಸಚ್ಚೀಂದ್ರ ಜಾಲಾಡಿ ನೇತೃತ್ವದಲ್ಲಿ ಯುವಕರ ಸೇರ್ಪಡೆ ಕಾರ್ಯ ನಡೆಯಿತು.

LEAVE A REPLY

Please enter your comment!
Please enter your name here