ಮೊಬೈಲ್ ಜೊತೆಗೆ, ಅನೇಕರು ತಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ವೆಬ್ ವಾಟ್ಸ್ ಆಪ್ ಇನ್ಟಾಲ್ ಮಾಡಿಕೊಂಡು ಯೂಸ್ ಮಾಡ್ತಾ ಇದ್ದಾರೆ. ಇಂತಹ ಬಳಕೆದಾರರಿಗೆ ಸದ್ಯದಲ್ಲಿಯೇ ಅನುಕೂಲವಾಗಲಿದೆ. ವೆಬ್ ವಾಟ್ಸ್ ಆಪ್ ಮೂಲಕವೂ ವಾಯ್ಸ್ ಹಾಗೂ ವೀಡಿಯೋ ಕರೆ ಮಾಡಲು ಹೊಸ ಫೀಚರ್ ಅನ್ನು ವಾಟ್ಸ್ ಆಪ್ ಪರಿಚಯಿಸುತ್ತಿದೆ.
ಈಗಾಗಲೇ ಅನೇಕರು ವೆಬ್ ವಾಟ್ಸ್ ಆಪ್ ತಮ್ಮ ಕೆಲಸಗಳಿಗೆ ಅನುಕೂಲವಾಗಲು ಬಳಕೆ ಮಾಡ್ತಾ ಇದ್ದೀರಿ. ಆದ್ರೇ ಮೊಬೈಲ್ ನಿಂದ ಮಾತ್ರವೇ ವಾಯ್ಸ್ ಹಾಗೂ ವೀಡಿಯೋ ಕರೆ ಮಾಡಬೇಕಾಗಿತ್ತು. ಇಂತಹ ವೆಬ್ ವಾಟ್ಸ್ ಆಪ್ ಬಳಕೆ ದಾರರಿಗೂ ಧ್ವನಿ ಮತ್ತು ವೀಡಿಯೋ ಕರೆಗಳನ್ನು ಪರಿಚಯಿಸಲು ವಾಟ್ಸ್ ಪ್ ಸಿದ್ಧತೆ ಮಾಡಿಕೊಂಡಿದೆ.