ಪ್ರವಾದಿ ಮುಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ

ದಲಿತ ಯುವತಿ ಮೇಲೆ ಗ್ಯಾಂಗ್ ರೇಪ್ : ಮರ್ಮಾಂಗಕ್ಕೆ ಬಾಟಲಿ ತುರುಕಿ ವಿಕೃತಿ ಮೆರೆದ ದುಷ್ಕರ್ಮಿಗಳು

ರಾಜಸ್ಥಾನ (ಜ.26) : ದಲಿತ ಯುವತಿ ಮೇಲೆ ರಾಜಸ್ಥಾನದ ನಾಗೌರ್​ನ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ, ಆಕೆಯ ಮರ್ಮಾಂಗಕ್ಕೆ ಬಾಟಲಿಗಳನ್ನು ತುರುಕಿ ವಿಕೃತಿ ಮೆರೆದಿರುವ ಘಟನೆ ಪರ್ಬಾಸ್ತಾರ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜನವರಿ...

ಮಾಜಿ ಫುಟ್ಬಾಲ್ ಆಟಗಾರ ಪ್ರಶಾಂತ್ ಡೋರಾ ನಿಧನ

ಕೋಲ್ಕತ್ತ (ಜ.26): ಭಾರತ ಫುಟ್‌ಬಾಲ್ ತಂಡದ ಮಾಜಿ ಗೋಲ್‌ಕೀಪರ್ ಪ್ರಶಾಂತ್‌ ಡೋರಾ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ ಅವರಿಗೆ (44) ವರ್ಷ ವಯಸ್ಸಾಗಿತ್ತು.ಕೋಲ್ಕತ್ತ ಮೈದಾನದ ಮೂರು ಪ್ರಮುಖ ಕ್ಲಬ್‌ಗಳ ಪರ ಆಡಿದ ಹಿರಿಮೆ ಹೊಂದಿದ್ದ ಪ್ರಶಾಂತ್,...

ತಾಳ್ಮೆಗೆಟ್ಟ ರೈತರು: ಕೆಂಪು ಕೋಟೆಗೆ ಮುತ್ತಿಗೆ – ಎಲ್ಲೆಡೆ ತ್ರಿವರ್ಣ

ನವದೆಹಲಿ: ಕೇಂದ್ರ ಸರ್ಕಾರದ ಮೂರು ವಿವಾವಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಎರಡು ತಿಂಗಳಿಂದ ದೆಹಲಿಯ ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರು ಗಣರಾಜ್ಯೋತ್ಸವ ದಿನದಂದು ತಾಳ್ಮೆಗೆಟ್ಟು ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಾರೆ....

ಮಂಗಳೂರು: ವೆನಲಾಕ್ ಆಸ್ಪತ್ರೆಗೆ ಉಸ್ತುವಾರಿ ಸಚಿವರ ದಿಢೀರ್ ಭೇಟಿ

ಮಂಗಳೂರು: ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ವೆನ್ಲಾಕ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಭೇಟಿಯ ಸಂದರ್ಭದಲ್ಲಿ ಶಾಸಕರಾದ ಡಾ....

ನಾನು ಸಂಘಟನೆಯ ಅಡಿಯಲ್ಲಿ ಸಂಸ್ಕಾರ ಬೆಳೆದು ಬಂದವ – ಸಚಿವ ಅಂಗಾರ ಹೀಗೆ ಪ್ರತಿಕ್ರಿಯಿಸಿದ್ದು ಹೇಗೆ?

ಉಡುಪಿ: ರಾಜ್ಯದಲ್ಲಿ ಖಾತೆ ಹಂಚಿಕೆ ಗೊಂದಲ ವಿಚಾರ ಕುರಿತು ಉಡುಪಿಯಲ್ಲಿ ಸಚಿವ ಎಸ್. ಅಂಗಾರ ಪ್ರತಿಕ್ರಿಯೆ ನೀಡಿದ್ದು, ನಾನು ಸಂಘಟನೆಯ ಅಡಿಯಲ್ಲಿ ಸಂಸ್ಕಾರ ಬೆಳೆದುಬಂದವ.ಸಮಸ್ಯೆ ಅರಿತು ಸಚಿವರು ಸರಕಾರಕ್ಕೆ ಸಹಕಾರ ಕೊಡಬೇಕು ಎಂದರು. ನಾನ್ನನ್ನು...

✍️ಶಮೀರ ಜಹಾನ್,ಮಂಗಳೂರು

ಜಗತ್ತಿನ ಎಲ್ಲ ಮಸೀದಿಯ ಮಿನಾರಗಳಲ್ಲಿ,ಪ್ರತೀ ಆಝಾನ್ ನಲ್ಲಿ,ಪ್ರತೀ ನಮಾಝಿನಲ್ಲಿ ದಿನದ ಇಪ್ಪತ್ತನ್ನಾಲ್ಕು ಗಂಟೆಗಳಲ್ಲಿ ಮುಸಲ್ಮಾನರು ಅತ್ಯಧಿಕ ಸ್ಮರಿಸುವ ಏಕೈಕ ವ್ಯಕ್ತಿತ್ವ ಮುಹಮ್ಮದ್ (ಸ)ರಾಗಿದ್ದಾರೆ.ಮುಹಮ್ಮದ್(ಸ)ರು ಇಸ್ಲಾಮ್ ಧರ್ಮದ ಸ್ಥಾಪಕರು ಎಂಬ ತಪ್ಪುಕಲ್ಪನೆಯಿದೆ.

ಮುಹಮ್ಮದ್(ಸ)ರು ಇಸ್ಲಾಮ್ ಧರ್ಮದ ಸ್ಥಾಪಕರಲ್ಲ.ಭೋದಕರಾಗಿದ್ದರು. ಒಮ್ಮೆಯೂ ಸುಳ್ಳು ಹೇಳದ ಕಾರಣ ಮಕ್ಕಾವಾಸಿಗಳು ಸತ್ಯಸಂಧ ಎಂಬ ಬಿರುದಿನಿಂದ ಕರೆಯುತ್ತಿದ್ದರು.ಯುವಕರಾಗಿದ್ದಾಗ ಶಾಂತಿಸಭೆಗಳಲ್ಲಿ ಭಾಗವಹಿಸುತ್ತಿದ್ದರು.ಯುದ್ಧಪ್ರಿಯ ಅರಬರಿಂದ ಬೇಸತ್ತು ಹಿರಾ ಗುಹೆಯಲ್ಲಿ ಧ್ಯಾನಮಗ್ನರಾಗಿರುತ್ತಿದ್ದರು.ಕೆಟ್ಟು ಹೋದ ಸಮಾಜದ ಬಗ್ಗೆ ಚಿಂತಿತರಾಗಿದ್ದರು.ಹೀಗೆಯೇ ಒಂದು ದಿನ ದಿವ್ಯವಾಣಿ ಅವತೀರ್ಣವಾಗುತ್ತದೆ.ಭೂಮ್ಯಾಕಾಶಗಳ ಸೃಷ್ಟಿಕರ್ತನ ಪರಿಚಯವಾಗುತ್ತದೆ.ದೇವನ ಸಂದೇಶವನ್ನು ಜನರಿಗೆ ತಲುಪಿಸಬೇಕಾದ ಘನಜವಾಬ್ದಾರಿಯು ಲಭಿಸುತ್ತದೆ.”ಓದಿರಿ” ಎಂಬ ವಚನದಿಂದ ಆರಂಭವಾದ ದಿವ್ಯವಾಣಿ ಇಪ್ಪತ್ತಮೂರು ವರ್ಷಗಳಲ್ಲಿ ಕೊನೆಗೊಳ್ಳುತ್ತದೆ.ಇಪ್ಪತ್ತಮೂರು ವರ್ಷಗಳಲ್ಲಿ ಹದಿಮೂರು ವರ್ಷ ಮಕ್ಕದಲ್ಲಿ,ವಲಸೆಯ ಬಳಿಕ ಹತ್ತು ವರ್ಷ ಮದೀನದಲ್ಲಿ ಕಳೆಯುತ್ತಾರೆ.ಅರವತ್ತಮೂರು ಪ್ರಾಯದಲ್ಲಿ ನಿಧನರಾಗುತ್ತಾರೆ.

ಬಾಲ್ಯದಲ್ಲಿರುವಾಗ ಮುಹಮ್ಮದ(ಸ) ರ ಮುಖ ಲಕ್ಷಣಗಳನ್ನು ಗುರುತಿಸಿ “ಮುಹಮ್ಮದ್ ಈ ಬಾಲಕ ಪ್ರವಾದಿಯಾಗುತ್ತಾರೆ” ಎಂಬ ಸುವಾರ್ತೆ ನೀಡಿದವರು ಕ್ರೈಸ್ತ ಪಾದ್ರಿಯಾಗಿದ್ದರು. ಮುಹಮ್ಮದರು(ಸ) ಅವರ ತಾಯಿಯ ಮರಣದ ಬಳಿಕ ತಾತನ ಆಶ್ರಯದಲ್ಲಿ ಬೆಳೆದರು.ತಾತ ಅಬ್ದುಲ್ ಮುತ್ತಲಿಬ್ ಕುರೈಶ್ ಸರದಾರ ಬಹುದೇವಾರಾಧಕರಾಗಿದ್ದರು.ತಾತ ನಿಧನರಾದ ಬಳಿಕ ಅವರ ರಕ್ಷಕರಾಗಿ ಮರಣದ ವರೆಗೂ ಮುಹಮ್ಮದರನ್ನು ವಿರೋಧಿಗಳ ಕೈಗೆ ಕೊಡದೆ ಪ್ರೀತಿಸಿದ,ರಕ್ಷಿಸಿದ ಸಂದೇಶಪ್ರಚಾರಕ್ಕೆ ಸಂಪೂರ್ಣ ಬೆಂಬಲ ನೀಡಿದ ಅವರ ಚಿಕ್ಕಪ್ಪ ಅಬೂತಾಲಿಬ್ ಬಹುದೇವಾರಾಧಕರಾಗಿದ್ದರು.

ಅಬೂತಾಲಿಬರ ಮರಣದ ಬಳಿಕ ವಿರೋಧಿಗಳು ಮುಹಮ್ಮದ್(ಸ) ರನ್ನು ಕೊಲ್ಲುವ ಸಂಚು ರೂಪಿಸಿದಾಗ ವಿರೋಧಿಗಳಿಂದ ರಕ್ಷಿಸಿ ಮಕ್ಕಾದಿಂದ ಮದೀನಾದ ಕಡೆಗೆ ವಲಸೆ ಹೋಗಲು ರಹಸ್ಯ ದಾರಿ ತೋರಿಸಿದ ಪ್ರವಾದಿಯ ಆಪ್ತಸಂಗಾತಿ ಅರೀಕತ್ ಬಹುದೇವಾರಾಧಕರಾಗಿದ್ದರು. ಆದ್ದರಿಂದ ಮುಹಮ್ಮದ್ (ಸ)ರ ಮೇಲೆ ಮತಾಂತರದ ಆರೋಪ ಹೊರಿಸುವುದು,ಇಸ್ಲಾಮ್ ಧರ್ಮ ಖಡ್ಗದಿಂದ ಪಸರಿಸಿತು ಎಂಬ ಸುಳ್ಳುಪ್ರಚಾರ ಖಂಡಿತವಾಗಿಯೂ ಪಾಪವಾಗಿದೆ.ಮುಹಮ್ಮದರು ಶಾಂತಿಯ,ಸತ್ಯದ, ನ್ಯಾಯದ ವಾಹಕರಾಗಿದ್ದರು.ಜೀವಂತ ದಫನ ಮಾಡುತ್ತಿದ್ದ ಹೆಣ್ಣಿಗೆ ಬದುಕುವ ಹಕ್ಕು ನೀಡಿದರು ಮಾತ್ರವಲ್ಲ ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ಧೈರ್ಯದಿಂದ ವ್ಯಕ್ತಪಡಿಸುವ ವ್ಯಕ್ತಿಸ್ವಾತಂತ್ರ್ಯ ನೀಡಿ ವಿಧ್ವಾಂಸೆಯ ಸ್ಥಾನ ದೊರಕಿಸಿಕೊಟ್ಟರು.ಸಂಪಾದಿಸಿದ ಹಣದಿಂದ ಪರಿಸರದ ಮಕ್ಕಳಿಗೆ ಏನಾದರೂ ಹಂಚುತ್ತಿದ್ದರು.ವಿಧವೆಯರು,ನಿರ್ಗತಿಕರಿಗೆ ನೀಡುತ್ತಿದ್ದರು.ಈ ಕಾರಣದಿಂದಲೇ ಮಕ್ಕಾದ ಬಹುದೇವಾರಾಧಕರು ಮಹಿಳೆಯರಿರಲಿ,ಪುರುಷರಿರಲಿ,ಮಕ್ಕಳಿರಲಿ ಯಾರೂ ಅವರನ್ನು ವಿರೋಧಿಸಲಿಲ್ಲ. ವಿರೋಧಿಗಳ ಕಿರುಕುಳ ಸಹಿಸಲಾರದೆ ಸ್ವಂತ ಊರಿನಿಂದ ವಲಸೆ ಹೋದ ಪ್ರವಾದಿಯ ಅನುಚರರನ್ನು “ನೀವು ಊರು ಬಿಟ್ಟು ಹೋಗಬಾರದು ನಾವು ನಿಮಗೆ ಆಶ್ರಯ ನೀಡುತ್ತೇವೆ” ಎಂದು ಹೇಳಿದ ಗೋತ್ರದ ಸರದಾರ ಇಬ್ನುದುಗ್ನಾ ಬಹುದೇವಾರಾಧಕರಾಗಿದ್ದರು. ಆದುದರಿಂದ ಇತಿಹಾಸದುದ್ದಕ್ಕೂ ಪ್ರವಾದಿಗಳನ್ನು ಅವರು ತಂದ ಶಾಂತಿಯ ಸಂದೇಶಗಳನ್ನು ವಿರೋಧಿಸಿ ಶತ್ರುಗಳಾಗಿ ಮಾರ್ಪಟ್ಟವರು, ಅಪಪ್ರಚಾರ ಮಾಡಿದವರು, ಬೇರೆ ಯಾರೂ ಅಲ್ಲ ಸ್ವಪ್ರತಿಷ್ಠೆಗಾಗಿ,ಅಧಿಕಾರಕ್ಕಾಗಿ ಜನರನ್ನು ಕೊಲೆಮಾಡುವವರು,ಜನರನ್ನು ವಂಚಿಸುವವರು,ಸ್ತ್ರೀಯರನ್ನು ಗೌರವಿಸದವರು, ಮಕ್ಕಳನ್ನು ಪ್ರೀತಿಸದವರು,ಸ್ವೇಚ್ಛಾಚಾರಿಗಳು,ಕಠಿಣ ಹೃದಯಿಗಳು, ಜನರ ಹಕ್ಕುಚ್ಯುತಿ ಮಾಡುವವರು ಎಂಬುದೇ ಸತ್ಯವಾಗಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ವೆನಲಾಕ್ ಆಸ್ಪತ್ರೆಗೆ ಉಸ್ತುವಾರಿ ಸಚಿವರ ದಿಢೀರ್ ಭೇಟಿ

ಮಂಗಳೂರು: ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ವೆನ್ಲಾಕ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಭೇಟಿಯ ಸಂದರ್ಭದಲ್ಲಿ ಶಾಸಕರಾದ ಡಾ....

ನಾನು ಸಂಘಟನೆಯ ಅಡಿಯಲ್ಲಿ ಸಂಸ್ಕಾರ ಬೆಳೆದು ಬಂದವ – ಸಚಿವ ಅಂಗಾರ ಹೀಗೆ ಪ್ರತಿಕ್ರಿಯಿಸಿದ್ದು ಹೇಗೆ?

ಉಡುಪಿ: ರಾಜ್ಯದಲ್ಲಿ ಖಾತೆ ಹಂಚಿಕೆ ಗೊಂದಲ ವಿಚಾರ ಕುರಿತು ಉಡುಪಿಯಲ್ಲಿ ಸಚಿವ ಎಸ್. ಅಂಗಾರ ಪ್ರತಿಕ್ರಿಯೆ ನೀಡಿದ್ದು, ನಾನು ಸಂಘಟನೆಯ ಅಡಿಯಲ್ಲಿ ಸಂಸ್ಕಾರ ಬೆಳೆದುಬಂದವ.ಸಮಸ್ಯೆ ಅರಿತು ಸಚಿವರು ಸರಕಾರಕ್ಕೆ ಸಹಕಾರ ಕೊಡಬೇಕು ಎಂದರು. ನಾನ್ನನ್ನು...

ಶ್ರೀ ಕೃಷ್ಣ ಮಠಕಕ್ಕೆ ಭೇಟಿ ನೀಡಿದ ಮೀನುಗಾರಿಕ ಸಚಿವ ಅಂಗಾರ

ಉಡುಪಿ:ಶ್ರೀ ಕೃಷ್ಣ ಮಠಕ್ಕೆ ಕರ್ನಾಟಕ ಸರಕಾರದ ನೂತನ ಮೀನುಗಾರಿಕೆ ಮತ್ತು ಬಂದರು ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ ಅವರು ಭೇಟಿ ನೀಡಿ ಶ್ರೀ ಕೃಷ್ಣ ದೇವರ ದರ್ಶನ ಮಾಡಿ...

Related Articles

ಪ್ರವಾದಿ ಮುಹಮ್ಮದ್(ಸ): ಮಹಿಳಾ ಪರ ಧ್ವನಿ

ಲೋಕ ಕಂಡ ಮಹಾನ್ ನಾಯಕರಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸುವ ಪ್ರಭಾವಪೂರ್ಣ ವ್ಯಕ್ತಿತ್ವ ಬೆರಳೆಣಿಕೆಯಷ್ಟು ಮಂದಿಯದ್ದು ಮಾತ್ರ. ಅಂತಹ ಪ್ರಭಾವಪೂರ್ಣ ವ್ಯಕ್ತಿತ್ವಗಳ ಸಾಲಿನಲ್ಲಿ ಸೇರುತ್ತಾರೆ ಪ್ರವಾದಿ ಮುಹಮ್ಮದ್ (ಸ). ಇವರ ಕಾರ್ಯವೈಖರಿ...

ಹೆಸರು ಬದಲಿಸಿದರೆ ದಲಿತ ದೌರ್ಜನ್ಯ ನಿಲ್ಲುವುದೇ?

ಅಭಿಪ್ರಾಯ: ಟಿ ಐ ಬೆಂಗ್ರೆ ''Karnataka is the worst state for Dalit's safety - NCRB Data; How can Dalits feel still safe under this congress ruling state...

ರಮಝಾನ್ : ಕೆಟ್ಟ ವಾತಾವರಣದಲ್ಲಿಯೂ ಒಳಿತಿನ ಸಂಗಮ.

ಬಹುತೇಕ ಸಹೋದರರು ಈದ್ ನ ವಿಷಯದಲ್ಲಿ ತುಂಬಾ ದುಃಖಿತರಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ರಕೃರ್ತಿದತ್ತ ಅಥವಾ ಮಾನವನಿರ್ಮಿತ  ಕೊರೋನಾ ವೈರಸ್ನ ಬಗ್ಗೆ ನಿರಂತರವಾಗಿ ಅಳಲನ್ನು ತೋಡುತ್ತಿದ್ದಾರೆ. ಇದರಿಂದಾಗಿ ರಮಝಾನ್ ತಿಂಗಳ ಖುಷಿಯಾಗಲಿ ಹಬ್ಬದ ಸಡಗರವಾಗಲೀ ನಮಗೆ ಲಭಿಸಲಿಲ್ಲ. ಈದ್ ನಮಾಝನ್ನು ಒಂದೋ ಬಂದ್ ಕೋಣೆಗಳಲ್ಲಿ ಅಥವಾ ಮನೆಗಳಲ್ಲೇ ಅರಿವಿಗೆ ಬಾರದಂತೆ ನಿರ್ವಹಿಸಿದೆವು. ಕೆಲವರಿಗಂತೂ ವೈಯ್ಯಕ್ತಿಕವಾಗಿ ಏನಾದರೂ ಸಮಸ್ಯೆಗಳಿರಲಿಕ್ಕೂ ಸಾಕು. ಆದರೆ ಈ ಬಾರಿಯ ರಮಝಾನಿನಲ್ಲಿ ಉಪವಾಸವಿದ್ದೂ, ಈದ್ ನಲ್ಲೂ ವೈರಸ್ ಭಾಧೆ ಇದ್ದೂ ಒಂದು ತರಹದ ಮಾನಸಿಕ ದೌರ್ಬಲ್ಯಕ್ಕೆ ಜನರು ಒಳಗಾಗಿದ್ದರು. ಇದರ ನಡುವೆಯೂ ಒಳಿತುಗಳನ್ನು ನಿರಂತರವಾಗಿ ನಾವು ಕಂಡಿರುವುದಂತೂ ಸತ್ಯ. 1) ಮೂರು ತರಹ ಖೈರ್ (ಒಳಿತು)ಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈದ್ ನ ನಮಾಝ್ ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಲಿಲ್ಲ. ಇದಕ್ಕೆ ಕಾರಣಗಳು ಏನೇ ಇರಬಹುದು. ಆದರೆ ಈ ಸಂದರ್ಭದಲ್ಲಿ ಜನಸಾಮಾನ್ಯರೂ ಈದ್ ನ ನಮಾಝನ್ನು ಸುಲಭವಾಗಿ ಕಲಿತು ನಮಾಝ್ ಗೆ ನೇತೃತ್ವವನ್ನು ನೀಡಿದರು. ಮನೆಯ ಸದಸ್ಯರೊಂದಿಗೆ ಜೊತೆಗೂಡಿ ನಮಾಝನ್ನು ನಿರ್ವಹಿಸಿದರು. ಜನರು ಈದ್ ನಮಾಝ್  ಮಾಡಿಸುವ ಒಂದು ಬಹು ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡರು. ನಮಾಝ್ ಮಾಡಿಸುವುದಕ್ಕೆ ಒಂದು ವಿಶೇಷವಾದ ಸ್ಥಾನಮಾನವುಳ್ಳ ವ್ಯಕ್ತಿಯೇ ಬೇಕು ಎಂಬ ತಪ್ಪು ಕಲ್ಪನೆಯು ಜನಸಾಮಾನ್ಯರಲ್ಲಿತ್ತು. ಈ ಮೂಲಕ, ಇಸ್ಲಾಮ್ ಬ್ರಾಹ್ಮಣ್ಯವಾದವನ್ನು ತಿರಸ್ಕರಿಸುತ್ತದೆ. ಹಾಗೂ ಸಾಮಾನ್ಯ ವ್ಯಕ್ತಿಯೂ ಮುಂದೆ ಬಂದು ನಮಾಝ್ ಗೆ ನೇತೃತ್ವವನ್ನು ನೀಡಲು ಅರ್ಹ ಎಂಬ ಸಂದೇಶವು ದೇಶಭಾಂಧವರಿಗೆ ತಲುಪಿತು. ಮಹಿಳೆಯರಿಗೂ ಸಾಮಾನ್ಯವಾಗಿ ಈದ್ ನಮಾಝ್ ಮಾಡಲು ಅವಕಾಶ ಸಿಗುವುದಿಲ್ಲ.  ಈ ಬಾರಿ ಕೊರೋನದಿಂದಾಗಿ ಜಮಾಅತ್ ನೊಂದಿಗೆ ಈದ್ ನಮಾಝ್ ಮಾಡುವ ಅವಕಾಶ ಅವರಿಗೂ ಲಭಿಸಿತು. 2)ಲಾಕ್ ಡೌನ್ ನ ನಡುವೆ ರಮಝಾನ್ ನ ಪುಣ್ಯ ಮಾಸದಲ್ಲಿ ದೇಶಭಾಂಧವರಿಗಾಗಿ ಮಾಡಿದ ನಾನಾ ತರಹದ ಸೇವೆಯು ದೇಶವಾಸಿಗಳ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಉತ್ತಮ ಪ್ರಭಾವವನ್ನು ಬೀರಿದೆ. ಮಾನವೀಯತೆ ಹಾಗೂ ಹಸಿದವರ ಹೊಟ್ಟೆ ತಣಿಸುವುದು ಪ್ರವಾದಿ (ಸ.ಅ) ರವರ ಜೀವನದ...
Translate »
error: Content is protected !!