ಉಡುಪಿ ಜಿಲ್ಲೆಯಲ್ಲಿ ಮೂರು ಪ್ರಕರಣದಲ್ಲಿ 73.39 ಲಕ್ಷ ಮೌಲ್ಯದ ಮಾದಕ ದ್ರವ್ಯ ವಶ

ಡಿಸೆಂಬರ್ 5 ಕ್ಕೆ ಹಿಂದೆಂದೂ ನಡೆಯದ ರೀತಿಯಲ್ಲಿ ಕರ್ನಾಟಕ ಬಂದ್ – ವಾಟಳ್ ನಾಗರಾಜ್!

ಬೆಂಗಳೂರು: ಡಿಸೆಂಬರ್ 5ಕ್ಕೆ ಹಿಂದೆಂದೂ ನಡೆಯದ ರೀತಿಯಲ್ಲಿ ಕರ್ನಾಟಕ ಬಂದ್ ನಡೆಯುತ್ತದೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ "ಕನ್ನಡವನ್ನು...

ಬೈಕ್ ಸವಾರರಿಗೆ ಪ್ರಮುಖ ಸುದ್ದಿ, ಜೂನ್ 2021 ಈ ನಿಯಮ ಕಡ್ಡಾಯ!

ನವದೆಹಲಿ: 2021ರ ಜೂನ್ ನಿಂದ ಭಾರತದಲ್ಲಿ ಬಿಐಎಸ್(ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್)ಯೇತರ ಹೆಲ್ಮೆಟ್ ಗಳನ್ನು ಉತ್ಪಾದಿಸುವುದಾಗಲಿ ಅಥವಾ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಬೈಕ್ ಸವಾರರು ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್ ಧರಿಸದೇ...

ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಡ್ರಗ್ಸ್ ವಿರುದ್ಧ ಕ್ರಮ ತೆಗೆದು ಕೊಳ್ಳದೆ ಕತ್ತೆ ಕಾಯುತ್ತಿತ್ತೆ?: ಸೊರಕೆ ಗರಂ

ಉಡುಪಿ: ಕಳೆದ ಒಂದೂವರೆ ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಇವರು ಡ್ರಗ್ಸ್ ಮಾಫಿಯಾದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಕತ್ತೆ ಕಾಯುತ್ತಿದ್ದರಾ? ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿಂದು ಕರೆದ...

ಬೀದಿಪಾಲಾದ ಮನೋರೋಗಿ ಮಹಿಳೆಯ ರಕ್ಷಣೆ

ಉಡುಪಿ (ನ. 27): ಉಡುಪಿಯ ಉದ್ಯಾವರದಲ್ಲಿ ಕಳೆದ ಮೂರು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯೋರ್ವರು ಮಾನಸಿಕ ರೋಗಿಯಾಗಿ ತಿರುಗಾಡುತ್ತಿದ್ದು, ಮಹಿಳೆಯ ರಕ್ಷಣೆ ಹಾಗೂ ಚಿಕಿತ್ಸೆಗಾಗಿ ವಿಶು ಶೆಟ್ಟಿ ಅಂಬಲಪಾಡಿಯವರು ...

ಭಾರತದಲ್ಲಿ ಕೊರೋನಾ ಸೋಂಕು ಹುಟ್ಟು – ಚೀನಾ ಗಂಭೀರ ಆರೋಪ

ಬೀಜಿಂಗ್, (ನ. (28): ಕೊರೊನಾ ಸೋಂಕು ಭಾರತದಲ್ಲೇ ಹುಟ್ಟಿರುವುದು ನಂತರ ಬೇರೆ ದೇಶಗಳಿಗೆ ಹಬ್ಬಿದೆ ಎಂದು ಚೀನಾವು ಗಂಭೀರ ಆರೋಪ ಮಾಡಿದೆ. ಕೊರೊನಾ ಹುಟ್ಟಿರುವುದು ಚೀನಾದ ವುಹಾನ್ ನಗರದಲ್ಲಿ ಎಂದು ಇಡೀ ಜಗತ್ತಿಗೆ...

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನಡೆದ ಕಾರ್ಯಚರಣೆಯಲ್ಲಿ ಒಟ್ಟು ಮೂರು ಪ್ರಕರಣದಲ್ಲಿ ಉಡುಪಿ ಪೊಲೀಸರು ಸುಮಾರು 73.39 ಲಕ್ಷ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.

Udupi sp

ಪ್ರಮುಖ 3 ಪ್ರಕರಣಗಳಲ್ಲಿ ಅತೀ ಹೇಚ್ಚು ಮೊತ್ತವಾದ ರೂ 73, 39, 500 ರೂ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ನ್ನು ವಶಪಡಿಸಿಕೊಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

 

ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 73,39,510 ಆಗಿದ್ದು ವಿವರ ಈ ಕೆಳಗಿನಂತಿದೆ.

ರೂ 30,57,000 ಮೌಲ್ಯದ ನಿಷೇಧಿತ MDMA Ecstasy 540 ಗ್ರಾಂ ತೂಕದ 1019 ಮಾತ್ರೆಗಳು, ರೂ 30 ಲಕ್ಷ ಮೌಲ್ಯದ ,1000 ಎಲ್.ಎಸ್.ಡಿ. ಸ್ಟ್ಯಾಂಪ್ಸ್, ರೂ 3 ಲಕ್ಷ ಮೌಲ್ಯದ 30 ಗ್ರಾಂ ತೂಕದ ಬ್ರೌನ್ ಶುಗರ್ ಮತ್ತು ರೂ 9, 82, 500 ಮೌಲ್ಯದ 131 ಗ್ರಾಂ ತೂಕವುಳ್ಳ Superior Quality hydro weed ಗಾಂಜಾವನ್ನು ವಶಪಡಿಸಿಕೊಂಡಿದ್ದು ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 73,39500 ಆಗಿರುತ್ತದೆ ಎಂದರು.

ವರ್ಷದಲ್ಲಿ ಗಾಂಜಾ ಸೇವನೆ ಮಾರಾಟ, ಸಾಗಾಟ, ವಿದ್ಯಾರ್ಥಿ ಹಾಗೂ ಸಾರ್ವಜನಿಕರ ವಿರುದ್ಧ ಒಟ್ಟು 200 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕಳೆದ 5 ವರ್ಷಗಳಲ್ಲಿ ದಾಖಲಿಸಿದೆ ಅತೀ ಹೆಚ್ಚು ಪ್ರಕರಣ ಗಳಾಗಿರುತ್ತದೆ. ಅಲ್ಲದೇ ಗಾಂಜಾ ಹೊರತುಪಡಿಸಿ Synthetic drugs ಅನ್ನು ಉಡುಪಿ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ ಚಂದ್ರ, ಹರಿರಾಂ ಶಂಕರ್, ಸಹಾಯಕ ಪೊಲೀಸ್ ಅಧೀಕ್ಷಕರು, ಕುಂದಾಪುರ ಉಪವಿಭಾಗ , ಭರತ್ ಎಸ್, ರೆಡ್ಡಿ, ಮೊಲೀಸ್ ಅಧೀಕ್ಷಕರು, ಕಾರ್ಕಳ ಉಪವಿಭಾಗ, ಮಂಜುನಾಥ, ಮೊಲೀಸ್ ವೃತ್ತ ನಿರೀಕ್ಷಕರು, ಉಡುಪಿ ವೃತ್ತ. ಮಂಜಪ್ಪ ಡಿ. ಆರ್. ಸೋಲಿಸ್ ನಿರೀಕ್ಷಕರು, ಮಂಜುನಾಥ ಎಂ., ಮೊಲೀಸ್ ನಿರೀಕ್ಷಕರು, ಮಣಿಪಾಲ ಠಾಣೆ, ರಾಜಶೇಖರ್ ವಂದಲಿ, ಪೊಲೀಸ್ ಉಪನಿರೀಕ್ಷಕರು ಮಣಿಪಾಲ ಠಾಣೆ ಮತ್ತು ಐಎಸ್ಡಿ ಉಡುಪಿ ಘಟಕ ಪೊಲೀಸ್ ನಿರೀಕ್ಷಕ ಮಧು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here