ಮುಂಬೈ: ಅನಾರೋಗ್ಯದ ಹಿನ್ನಲೆಯಲ್ಲಿ ಕೆಲಸದಿಂದ ಸ್ವಲ್ಪವಿರಾಮವನ್ನು ತೆಗೆದುಕೊಂಡಿದ್ದ ಸಂಜಯ್ ದತ್ ತಮ್ಮ ಹೊಸ ಚಿತ್ರ ಕೆಜಿಎಫ್: 2 ಚಿತ್ರೀಕರಣವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ.
ಶುಕ್ರವಾರದಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡು #Adheera! #KGFChapter2 ಎಂದು ಬರೆದುಕೊಂಡಿದ್ದಾರೆ. 66 ವರ್ಷದ ಸಂಜಯ್ ದತ್ ಕಪ್ಪು ಟೀ ಶರ್ಟ್ ಮತ್ತು ಪ್ಯಾಂಟ್ ನಲ್ಲಿ ಸ್ಟೈಲಿಶ್ ಕಾಣಿಸುತ್ತಾನೆ. ತನ್ನ ಮೊದಲ ಭಾಗದ ಮೂಲಕ ದೇಶದಲ್ಲೆಡೆ ಸದ್ದು ಮಾಡಿದ್ದ ಕೆಜಿಎಫ್ ಚಿತ್ರ ಈಗ ಎರಡನೇ ಭಾಗ ಇನ್ನಷ್ಟು ಕುತೂಹಲ ಮೂಡಿಸಿದೆ. ಈಗ ಎರಡನೇ ಭಾಗದಲ್ಲಿ ಸಂಜಯ್ ದತ್ ಅಧೀರಾ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಅಷ್ಟೇ ಅಲ್ಲದೆ ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿರುವುದು ಇನ್ನಷ್ಟು ಆಸಕ್ತಿ ಕೆರಳಿಸಿದೆ.