ಬಳ್ಳಾರಿ: ದೀಪ ಹಚ್ಚಿ ಎಂದಾಗ ಹಚ್ವಿದೆವು, ಗಂಟೆ ಬಾರಿಸಿ ಎಂದಾಗ ಬಾರಿಸೆದುವು, ಇನ್ನುಮುಂದೆ ಹೇಳಿದ ಹಾಗೆ ಕೇಳೋಕೆ ನಮಗೆ ಆಗಲ್ಲ. ಇನ್ನು ಮುಂದೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದರು.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ ತಿಂಗಳಿಂದ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದನ್ನು ತಡೆಗಟ್ಟಲು ಸರಕಾರ ಏನೂ ಮಾಡಿಲ್ಲ.ಕೇವಲ ಗಂಟೆ ಬಾರಿಸಿ, ದೀಪ ಹಚ್ಚಿ ಎಂದು ಹೇಳಿದ ಹಾಗೆ ನಾವು ಕುಣಿದಿದ್ದೂ ಆಗಿದೆ. ಆದರೆ ಇನ್ನು ಮುಂದೆ ಸರ್ಕಾರ ಕೊರೊನಾ ನಿಯಂತ್ರಣದ ಹೆಸರಲ್ಲಿ ಲೂಟಿ ಹೊಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ.ಕೇವಲ ಜನರನ್ನು ಕುಣಿಸುತ್ತಿದೆ. ರಾಜ್ಯದಲ್ಲಿ ಸೋಂಕಿತ ಗೋಳಿನ ಕಥೆಯನ್ನು ಸಾಕಷ್ಟು ಸಿನಿಮಾ ತೆಗೆಯಬಹುದು ಅಷ್ಟು ಜನ ನರಳುತಿದ್ದಾರೆ. ಒಬ್ಬ ಮಾಜಿ ಮಂತ್ರಿ ಕೋವಿಡ್-19 ಆಸ್ಪತ್ರೆ ಬಿಲ್ 17 ಲಕ್ಷ ರೂ. ಆಗಿದೆ. ಹೀಗಿರುವಾಗ ಬಡವರ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದರು.
ಕೋವಿಡ್-19 ನಿಯಂತ್ರಣ ವಿಚಾರದಲ್ಲಿ ಸರ್ಕಾರ ಸಾವಿರಾರು ಕೋಟಿ ರೂ. ಲೂಟಿ ಹೊಡೆದಿದೆ. ಕೊರೊನಾ ಬಾರದ ಜನರನ್ನು ಸಹ ಕೋವಿಡ್ ಕೇರ್ ಗೆ ಕರೆತಂದು ಅವರ ಹೆಸರಲ್ಲಿ ಲಕ್ಷಾಂತರ ಹಣ ಲೂಟಿ ಮಾಡಿದ್ದಾರೆ. ಸರ್ಕಾರ ಖಾಸಗಿ ಆಸ್ಪತ್ರೆಯ ಜೊತೆಯಲ್ಲಿ ಶಾಮೀಲಾಗಿ ಜನರ ದುಡ್ಡು ಕೊಳ್ಳೆ ಹೊಡೆದಿದೆ ಎಂದು ಕಿಡಿ ಕಾರಿದ್ದಾರೆ.