ಕಾಶ್ಮೀರ: ಇದೀಗ ಕಾಶ್ಮೀರದಲ್ಲಿ ಬಿಜೆಪಿ ಮುಖಂಡರ ಮೇಲೆ ಉಗ್ರರ ದಾಳಿ ಮುಂದುವರಿದಿದ್ದು ಇಂದು ನಡೆದ ದಾಳಿಯಲ್ಲಿ ಒರ್ವ ಬಿಜೆಪಿ ಮುಖಂಡ ಹತರಾಗಿದ್ದಾರೆ.
ಬಿಜೆಪಿ ಮುಖಂಡ ಕುಲ್ಗಾಮಿನ ಸಜಾದ್ ಅಹ್ಮದ್ ಮೇಲೆ ಉಗ್ರರು ನಡೆಸಿದ ದಾಳಿಯ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಇದೀಗ ಇದರ ಹಿನ್ನಲೆಯಲ್ಲಿ ಬಿಜೆಪಿಯ ನಾಲ್ಕು ಮಂದಿ ಬಿಜೆಪಿ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ನಾಲ್ವರು ಉಗ್ರರು ಹತ್ಯೆ ಮಾಡುವ ಭೀತಿಯಿಂದ ಪಕ್ಷ ತೊರೆದಿದ್ದು ರಾಜೀನಾಮೆಯ ನಂತರ ನಮಗೂ ಬಿಜೆಪಿಗೂ ಇನ್ನು ಮೇಲೆ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾರೆ.
ಇದೀಗ ಉಗ್ರರು ಕಾಶ್ಮೀರದಲ್ಲಿ ಬಿಜೆಪಿ ಮುಖಂಡರನ್ನು ಗುರಿಯನ್ನಾಗಿಸಿ ಹತ್ಯೆ ಮಾಡುತ್ತಿದ್ದು ಕೆಲವು ದಿನಗಳ ಹಿಂದೆಯೂ ಇಬ್ಬರು ಬಿಜೆಪಿ ಮುಖಂಡರು ಹತರಾಗಿದ್ದರು.