ಬಾರಕೂರು ಚೌಳಿ ಕೆರೆ ದುರಂತ: ಪ್ರಾಣದ ಹಂಗು ತೊರೆದು ಯುವತಿಯನ್ನು ರಕ್ಷಿಸಿದ ಪ್ರಾಣ ಸ್ನೇಹಿತರು!

ಬಾರ್ಕೂರು: ಜೀವದ ಹಂಗು ತೊರೆದು ಮಳೆ ನೀರು ಹಾಗೂ ಹೂಳು (ಕೆಸರು)ತುಂಬಿದ ಬಾರಕೂರು ಚೌಳಿ ಕೆರೆಗೆ ಧುಮುಕಿ ಅಪಘಾತಕ್ಕೀಡಾದ ಕಾರಿನಲ್ಲಿನ ಎರಡು ಜೀವ ಉಳಿಸಲು ಇಬ್ಬರು ಪ್ರಾಣ ಸ್ನೇಹಿತರು ಪ್ರಯತ್ನಿಸಿದರು.ಇವರಿಗೆ ಹೇರಾಡಿಯ ಪೂತಬ್ಬ ಎನ್ನುವ ಮುಸ್ಲಿಂ ಯುವಕ ಸಹ ಹುಡುಗಿಯ ಪ್ರಾಣ ಉಳಿಸಲು ಸಹಾಯ ಮಾಡಿದ್ದಾರೆ.

ಬಾರಕೂರು ಚೌಳಿಕೆರೆ ಹೆಚ್ಚು -ಕಡಿಮೆ ಎರಡು ಮುಕ್ಕಾಲು ಎಕ್ಕರೆ ವಿಸ್ತೀರ್ಣದ ವಿಶಾಲ ಕೆರೆಯಾಗಿದ್ದು, ಈ ಕೆರೆಯ ಒಂದು ಪಾರ್ಶ್ವದಲ್ಲಿ PWD ರಸ್ತೆ ಹಾದು ಹೋಗಿರುತ್ತದೆ.ಈ ಕೆರೆಯ ದಕ್ಷಿಣ ದಿಕ್ಕಿನಲ್ಲಿ ಬ್ರಹ್ಮಾವರ -ಬಾರಕೂರು-ಶಂಕರನಾರಾಯಣಕ್ಕೆ ಸಂಪರ್ಕ ಕಲ್ಪಿಸುವ PWD ರಸ್ತೆ ಹಾದು ಹೋಗಿದ್ದು.. ಚೌಳಿಕೆರೆ ಬಳಿ ಎಲ್, ( L ) ಸೇಫ್ನಲ್ಲಿ ಬಹಳ ಅಪಾಯಕಾರಿ ತಿರುವು ಸಹ ಇದಾಗಿದ್ದು, ಇವರೆಗೆ ಹಲವಾರು ವಾಹನಗಳು ಈ ತಿರುವಿನಲ್ಲಿ ಅಪಘಾತಕ್ಕೀಡಾಗಿದ್ದೂ ಅಲ್ಲದೇ, ಕಳೆದ ಹೆಚ್ಚು ಕಡಿಮೆ ಎರಡರಿಂದ ಮೂರು ತಿಂಗಳ ಹಿಂದೆ ದ್ವಿಚಕ್ರ ವಾಹನ ಸವಾರರು ಸಹ ಇದೆ ಕೆರೆಗೆ ಬಿದ್ದು ಕೈಕಾಲು ಮುರಿದು ಕೊಂಡಿರುತ್ತಾರೆ ಅಲ್ಲದೇ ದ್ವಿಚಕ್ರ ವಾಹನ ಜಖಂ ಗೊಂಡಿರುತ್ತದೆ. ಇದೇ ಕೆರೆಗೆ 2ರಿಂದ 3ವರ್ಷದ ಹಿಂದೆ ಒಂದು ಕಾರು ಬಿದ್ದು ಅಪಘಾತ ಸಂಭವಿಸಿತ್ತು ಅದರೆ ಈ ವರೆಗೆ ಯಾರೂ ಮೃತ ಪಟ್ಟಿರಲಿಲ್ಲ.

ಆದರೆ ನಿನ್ನೆಯ ಅಪಘಾತದಲ್ಲಿ ಸಂತೋಷ್ ಶೆಟ್ಟಿ (40) ಹಾಗೂ ಶ್ವೇತ ಎನ್ನುವ ಹುಡುಗಿ ಗಂಭೀರ ಸ್ವರೂಪದ ಅಪಘಾತಕ್ಕೀಡಾಗಿ ಅರೆ ಪ್ರಜ್ಞಾವಸ್ಥೆಯಲ್ಲಿ ಚೌಳಿ ಕೆರೆಯಲ್ಲಿ ಮುಳುಗುವ ಸ್ಥಿತಿಯಲ್ಲಿ ಕಾರಿನಲ್ಲಿರುವುದನ್ನು ಗಮನಿಸಿದ ಸ್ಥಳೀಯ ಜನ ಕೆರೆಯ ದಂಡೆಯಲ್ಲಿ ಸೇರಿದ್ದರು. ಸದ್ರಿ ಕಾರು ನಾಲ್ಕು ಚಕ್ರ ಮೇಲಾಗಿ ಚೌಳಿ ಕೆರೆಯಲ್ಲಿ ತೇಲುತಿತ್ತು ಪ್ರದೀಪ್ ದೇವಾಡಿಗ ಹಾಗೂ ಪ್ರವೀಣ್ ಕುಮಾರ್ ಎನ್ನುವ ಯುವಕರು ಇದೆ ಚೌಳಿ ಕೆರೆ ಮಾರ್ಗವಾಗಿ ಸೈಬ್ರಕಟ್ಟೆಗೆ ಕಾರು ಡ್ರೈವಿಂಗ್ ಕಲಿಯಲು ದ್ವಿಚಕ್ರವಾಹನದಲ್ಲಿ ಸಂಚರಿಸುತಿದ್ದರು. ಈ ಕೆರೆಯಲ್ಲಿ ಹಲವಾರು ವರ್ಷದಿಂದ ಬಾರಿ ಪ್ರಮಾಣದಲ್ಲಿ ಕೆಸರು ತುಂಬಿದ್ದುದು ಅಲ್ಲದೇ ಮಳೆಗಾಲದ ನೀರು ಸಹ ಸಂಗ್ರಹವಾಗಿದ್ದುದರಿಂದ ಸರಿಯಾಗಿ ಈಜಲು ಬಾರದವರು ಕೆರೆಗೆ ಇಳಿಯುವುದು ಅಪಾಯಕಾರಿ ಅಲ್ಲದೇ ಈಜಲು ಬಂದರೂ ಸಹ ಕೆಸರಿನಲ್ಲಿ ಕಾಲು ಕೀಳಲು ಬಾರದೆ ಮುಳುಗುವ ಅಪಾಯಕಾರಿ ಸನ್ನಿವೇಶ ಇದ್ದುದರಿಂದ ಸ್ಥಳೀಯ ನಿವಾಸಿಗಳು ಕಣ್ಣೆದುರೇ ಕಾರು ಮುಳುಗುತಿದ್ದುದನ್ನು ನೋಡಿ ಕಕ್ಕಾಬಿಕ್ಕಿಯಾಗಿದ್ದರು.ಕೆರೆಗೆ ಇಳಿಯುವ ಧೈರ್ಯ ಯಾರೂ ತೋರಿರಲಿಲ್ಲ, ಸ್ಥಳೀಯರೆಲ್ಲರಿಗೂ ಅಪಘಾತ ಕ್ಕೀಡಾದವರನ್ನು ರಕ್ಷಿಸುವ ಹಂಬಲದಿಂದ ಯಾರಾದ್ರೂ ಈಜು ಬಂದವರು ರಕ್ಷಿಸಿ ಎಂದು ಕೂಗುತ್ತಿದ್ದರು. ಆಗ ಮೇಲಿನ ಪ್ರದೀಪ್ ಹಾಗೂ ಪ್ರವೀಣ್ ಎನ್ನುವ ಯುವಕರು ಹಿಂದೆ ಮುಂದೆ ನೋಡದೆ ಕೆರೆಗೆ ಧುಮುಕಿ ನಾಲ್ಕು ಚಕ್ರ ಮೇಲಾಗಿ ಬಿದ್ದ ಕಾರನ್ನು ಪಲ್ಟಿ ಮಾಡಿ, ಸ್ಥಳೀಯರ ಸಹಾಯದಿಂದ ಹಗ್ಗ, ಹಾಗೂ ಕಲ್ಲಿನ ಸಹಾಯದಿಂದ ಕಾರಿನ ಗಾಜನ್ನು ಒಡೆದು ಕಾರಿನೊಳಗೆ ಅಪಘಾತದ ತೀವ್ರತೆಗೆ ಸಿಟ್ಬೆಲ್ಟ್ ಸಹಿತ ಸಂತೋಶ್ ಶೆಟ್ಟಿಯವರು ಹಿಂದಿನ ಸೀಟಿಗೆ ಎಸೆಯಲ್ಪಟ್ಟಿದ್ದರು, ಹಾಗೂ ಕಾರಿನಲ್ಲಿದ್ದ ಹುಡುಗಿ ಶ್ವೇತಾ ಎಂದು ತಿಳಿದು ಬಂದಿದ್ದು ಆಕೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದವಳ ದೇಹವನ್ನು ಹಾಗೂ ಸಂತೋಶ್ ಶೆಟ್ಟಿಯವರ ದೇಹವನ್ನು ಕೆರೆಯಿಂದ ಸ್ಥಳೀಯರ ಸಹಕಾರದಿಂದ ಮೇಲೆ ತಂದು ರಕ್ಷಿಸಿದ್ದಾರೆ. ನಂತರ ನಮನ ಅವರು ಯುವತಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಮಾಹಿತಿ: ಶಂಕರ್ ಶಾಂತಿ

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ನಮ್ಮ ನಾಡ ಒಕ್ಕೂಟ ಉಡುಪಿ ಘಟಕ ಮತ್ತು ಮಸ್ಜಿದ್ ಎ ನೂರುಲ್ ಇಸ್ಲಾಮ್ ಆದಿಉಡುಪಿ ವತಿಯಿಂದ ಆಯುಷ್ಮಾನ್ ಕಾರ್ಡ್ ಹಾಗೂ ವಿದ್ಯಾರ್ಥಿವೇತನ ಶಿಬಿರ

ದಿನಾಂಕ 24 ಅಕ್ಟೊಬರ್ 2021, ಆದಿತ್ಯವಾರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಇಂದು ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ...

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಿಂದ ಪಕ್ಷದ ಉಳ್ಳಾಲ ನಗರ ಸಮಿತಿ ವತಿಯಿಂದ ಸ್ಥಾಪಿಸಿದ ನಾಗರಿಕ ಸೇವಾ ಕೇಂದ್ರ ಮತ್ತು ಪಕ್ಷದ ಕಚೇರಿಯ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು, ಅ. 24: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರಾದ್ಯಂತ ತನ್ನ ಪಕ್ಷಕ್ಕೆ ಸದಸ್ಯತ್ವ ಸೇರ್ಪಡೆಯ ಬೃಹತ್ ಅಭಿಯಾನವನ್ನು ಇದೇ ಕಳೆದ ಅಕ್ಟೋಬರ್ 15 ರಿಂದ ಈ ತಿಂಗಳ ಕೊನೆಯವರೆಗೂ ಅಂದರೆ ಅಕ್ಟೋಬರ್...

ಮಂಗಳೂರು: ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು: ನಗರದ ಜೆಪ್ಪು ಕುಡುಪಾಡಿಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಕುರಿತು ವರದಿಯಾಗಿದೆ.ಮೃತ ವಿದ್ಯಾರ್ಥಿಯನ್ನು ಅನಿಶ್ ಪಿ. ಪಾಯಲ್ (16) ಎಂದು ಗುರುತಿಸಲಾಗಿದೆ.ದಿ.ಪ್ರಶಾಂತ್ ಪಾಯಲ್ ಎಂಬವರ ಪುತ್ರ ಅನಿಶ್ ಮನನೊಂದು ಆತ್ಮಹತ್ಯೆಗೆ...

Related Articles

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್‌ ಟೇ-ವೊ ನಿಧನ

ಸೋಲ್‌ (ಅ.26):ಅನಾರೋಗ್ಯದಿಂದ ಬಳಳುತ್ತಿದ್ದ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಟೇ-ವೂ (88) ನಿಧನರಾಗಿದ್ದಾರೆ ಎಂದು ಸೋಲ್‌ನ ನ್ಯಾಷನಲ್ ಯುನಿವರ್ಸಿಟಿ ಆಸ್ಪತ್ರೆ ತಿಳಿಸಿದೆ.1979ರ ಮಿಲಿಟರಿ ದಂಗೆಯನ್ನು ಬೆಂಬಲಿಸಿದ್ದ ರೋಹ್‌, ಸೋಲ್‌ನಲ್ಲಿ ಸೇನಾ ವಿಭಾಗವನ್ನು...

2022 ರ ಚುನಾವಣೆ ಕುರಿತು ಚರ್ಚೆಗೆ ಕಾಂಗ್ರೆಸ್ ಅದಿನಾಯಕಿ ಸೋನಿಯಾ ಗಾಂಧಿ ಸಭೆ

ನವದೆಹಲಿ,(ಅ.26): ಮುಂಬರುವ 2022ರ ವಿಧಾನಸಭೆ ಚುನಾವಣೆಗಳ ಕುರಿತು ಚರ್ಚಿಸುವುದಕ್ಕೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮಂಗಳವಾರ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಮತ್ತು...

ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅನಾಹುತ : ಉಸಿರು ಕಟ್ಟಿ ನಾಲ್ವರು ಮೃತ್ಯು

ನವದೆಹಲಿ (ಅ.26): ರಾಷ್ಟ್ರರಾಜಧಾನಿ ನವದೆಹಲಿಯ ಸೀಮಾಪುರಿ ಪ್ರದೇಶದಲ್ಲಿನ ಮೂರು ಅಂತಸ್ತಿನ ಹಳೇಯ ಕಟ್ಟಡವೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಕನಿಷ್ಠ ನಾಲ್ವರು ಮೃತಪಟ್ಟಿರುವ ಘಟನೆ ಮಂಗಳವಾರ(ಅಕ್ಟೋಬರ್ 26) ನಸುಕಿನ ವೇಳೆ ನಡೆದಿದೆ.ಇಂದು ಮುಂಜಾನೆ...
Translate »
error: Content is protected !!