ಅಭಿಪ್ರಾಯ: ಟಿ ಐ ಬೆಂಗ್ರೆ
”Karnataka is the worst state for Dalit’s safety – NCRB Data;
How can Dalits feel still safe under this congress ruling state in Karnataka??
#CongressMuktaKarnataka is the only solution for this!!
#Dalits #Safety”
(ತನ್ನ ವಿದ್ಯಾರ್ಥಿ ಕಾಲದಿಂದಲೂ ಸಂಘ ಜೊತೆ ಗುರುತಿಸಿಕೊಳುತ್ತ ಬಂದಿರುವ ರಾಜ್ಯದ ಪ್ರಮುಖ ರಾಜಕಾರಣಿ ಅರವಿಂದ ಲಿಂಬಾವಳಿಯವರು ಏಪ್ರಿಲ್ 13/2018 ರಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ರೀತಿ ಪೋಸ್ಟ್ ಹಾಕಿದ್ದರು.)
ಈ ಪೋಸ್ಟ್ ಓದಿದವರು ರಾಜ್ಯ ಕಾಂಗ್ರೆಸ್ ಮುಕ್ತವಾದ ತಕ್ಷಣ ಎಂದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ದಲಿತರ ಜೀವನ ಸ್ವರ್ಗ ಮಾಯವಾಗುವುದೆಂದು ಭಾವಿಸಿರಬಹುದು, ಆದರೆ ಬಿಜೆಪಿ ಅಧಿಕಾರಕ್ಕೆಬಂದರೆ ಬದಲಾವಣೆ ಮತ್ತು ವಿಕಸನದ ಮಟ್ಟ ಬೇರೆ ಎಂದು ಅವತ್ತೇ ಅರ್ಥವಾಗಬೇಕಿತ್ತು.
( ಯೋಗಿಜೀ ಊರಿನ ಹೆಸರು ಬದಲಿಸಿ ಊರಿನ ಅಭಿವೃದ್ಧಿ ಆಗಿದೆ ಎನ್ನುವಂತೆ) ಇದೀಗ ಕರ್ನಾಟಕ ಸರಕಾರವು ಕೂಡ ಅದೇ ರೀತಿ ದಲಿತ ಸಮುದಾಯದ ಹೆಸರು ಬದಲಿಸಿ , ದಲಿತ ಸಮುದಾಯದ ಸಂಪೂರ್ಣ ಅಭಿವೃದ್ಧಿ ಕಾರ್ಯ ಬಿ.ಜೆ.ಪಿ ಕಾಲದಲ್ಲಿಯೇ ನಡೆದಿದೆ ಎಂದು ಹೇಳಿದರೆ ಅಚ್ಚರಿ ಪಡಬೇಕಾಗಿಲ್ಲ.ಏಕೆಂದರೆ ಮೊಘಲ್ ಸರಾಯಿ’ಯನ್ನು ಪ್ರದೇಶವನ್ನು ದೀನ್ದಯಾಳ್ ಉಪಾದ್ಯಾಯ ಎಂದು ನಾಮಕರಣ ಮಾಡಿ ಮತ್ತು ಅದೇ ರೀತಿ , ಅಲಹಾಬಾದ್ ಎನ್ನುವ ಜಿಲ್ಲೆ ಪ್ರಯಾಗ್ ರಾಜ್ ಆಗಿ ಬದಲಾದ ತಕ್ಷಣ ಇಡೀ ಊರೇ ಬದಲಾಯಿತು ಎನ್ನುವ ಒಂದು ವರ್ಗವು ಇದೆ. ಈ ವಿಚಾರವು ಇಲ್ಲಿ ಏಕೆ ಚರ್ಚಿಸಲಾಗುತ್ತಿದೆ ಎಂದರೆ, ಮೊನ್ನೆ ತಾನೇ ಕೇಂದ್ರ ಗೃಹ ಸಚಿವಾಲಯ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಆಡಳಿತ ಭಾಷೆ, ಪತ್ರ ವ್ಯವಹಾರ, ಪ್ರಮಾಣ ಪತ್ರಗಳಲ್ಲಿ “ದಲಿತ’’ ಎನ್ನುವ ಪದವನ್ನು ಬಳಸದಂತೆ ಸಮಾಜ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಹೇಳಿದ್ದು, ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ. ಕೆಲವು ಚಿಂತಕರು ದಲಿತ ಪದ ಸ್ವಾಭಿಮಾನದ ಸಂಕೇತ, ಇದು ರಾಜ್ಯದಲ್ಲಿ ದಲಿತ ಸಾಹಿತ್ಯ, ಅವರ ಸಮುದಾಯದ ಮೇಲೆ ಇತಿಹಾಸದುದ್ದಕ್ಕೂ ನಿರಂತರ ನಡೆಯುತ್ತ ಬಂದಿರುವ ದೌರ್ಜನ್ಯ, ಕಲೆ, ಸಂಸ್ಕೃತಿ ಎಲ್ಲವನ್ನು ಇಲ್ಲದಾಗಿಸುವ ದುರುದ್ದೇಶ ಎಂದು ದೂರಿಕೊಂಡಿದ್ದಾರೆ.