ಕೊರೋನದ ಮರೆಯಲ್ಲಿ ಗ್ರಾಮಪಂಚಾಯತಿಗಳನ್ನು ಅಪವಿತ್ರಗೊಳಿಸುತ್ತಿರುವ ಬಿಜೆಪಿ – ವೆಲ್ಫೇರ್ ಪಾರ್ಟಿ

ಮಂಗಳೂರು : ಬಿಜೆಪಿ ಸರಕಾರವು ಕೊರೊನವನ್ನು ರಾಜಕೀಯ ಲಾಭಕ್ಕಾಗಿ ಉಪಯೋಗಿಸುತ್ತಿದೆ. ಅವದಿ ಮುಗಿದ ಗ್ರಾಮ ಪಂಚಾಯತಿಗಳ ಚುನಾವಣೆಯನ್ನು ಸಾಂಕ್ರಾಮಿಕ ರೋಗ ಕೊರೊನ ಕಾರಣ ನೀಡಿ ತೆರೆಮರೆಯಲ್ಲಿ ತನ್ನ ಪಕ್ಷದ ಸದಸ್ಯರನ್ನು ಗ್ರಾಮ ಪಂಚಾಯತ್ ಸದಸ್ಯರನ್ನಾಗಿಸುವ ತಂತ್ರ ರೂಪಿಸುವ ಮೂಲಕ ಗ್ರಾಮ ಪಂಚಾಯತನ್ನು ಅಪವಿತ್ರ ಗೊಳಿಸುತ್ತಿದ್ದಾರೆ, ಅಲ್ಲದೆ ಕೊವಿಡ್ ಪರಿಹಾರವನ್ನು ಸಂಪೂರ್ಣವಾಗಿ ಗುಳುಂ ಮಾಡುವ ತಯಾರಿ ನಡೆಸುತ್ತಿರುವಂತೆ ಕಾಣುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನಸಭಾ ಸಮಿತಿ ಅಧ್ಯಕ್ಷರಾದ ಶ್ರೀಮಾನ್ ಹನೀಫ್ ತಲಪ್ಪಾಡಿ ತಿಳಿಸಿದರು. ಅವರು ಇಂದು ಗ್ರಾಮಪಂಚಾತ್ ಚುನಾವಣೆ ನಡೆಸಬೇಕು ಇಲ್ಲ ಈ ಮೊದಲಿನ ಸದಸ್ಯರನ್ನೇ ಚುನಾವಣೆ ನಡೆಯುವವರೆಗೆ ಮುಂದುವರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೋಮೆಶ್ವರ ಪುರಸಭೆ ಮುಖ್ಯಾಧಿಕಾರಿಯವರ ಮೂಲಕ ಮನವಿ ಸಲ್ಲಿಸಿದರು. ಚುನಾವಣೆ ನಡೆಸಲು ಈ ಸಂಧರ್ಭ ಸೂಕ್ತವಲ್ಲದಿದ್ದರೆ 1987 ರ ಕಾಯಿದೆ ಪ್ರಕಾರ ಈ ಗಿರುವ ಸದಸ್ಯರನ್ನೇ ಆರು ತಿಂಗಳ ಮಟ್ಟಿಗೆ ಮುಂದುವರಿಸಬೇಕು.ಅದು ತನ್ನ ಪಕ್ಷದ ಕಾರ್ಯಕರ್ತರನ್ನು ಹಿಂಬಾಗಿಲಿನಿಂದ ಗ್ರಾಮಪಂಚಾಯತ್ ಸದಸ್ಯರನ್ನಾಗಿಸುವ ನೀಚ ಹೊಲಸು ರಾಜಕೀಯ ಮಾಡಬಾರದು ಎಂದು ಹೇಳಿದರು. ಮನವಿಯಲ್ಲಿ ಮುಖ್ಯವಾಗಿ ಜಿಲ್ಲಾಧಿಕಾರಿಗಳು ಗ್ರಾಮಪಂಚಾಯತಿಗೆ ನಾಮನಿರ್ದೇಶಕ ಸದಸ್ಯರನ್ನು ನೇಮಿಸಲು ಅಂಗೀಕಾರ ನೀಡಬಾರದು ಎಂದು ಪ್ರಸ್ತಾಪಿಸಲಾಗಿದೆ. ಈ ಸಂಧರ್ಭದಲ್ಲಿ ಪಕ್ಷದ ಮಂಗಳೂರು ಅಧ್ಯಕ್ಷರಾದ ಹನೀಫ್ ತಲಪ್ಪಾಡಿ,ಎಫ ಐ ಟಿಯುವಿನ ಜಿಲ್ಲಾ ಅಧ್ಯಕ್ಷ ಅಬ್ದುಲ್ ಜಲೀಲ್, ಫ್ರಟರ್ನಿಟಿಯ ಫಝಲ್ ಪಿಲಾರ್ ಉಪಸ್ಥಿತರಿದ್ದರು.

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಕೃಷ್ಣ ಮಠದಲ್ಲಿ ನೀಡಿದ ಹೇಳಿಕೆಗಳನ್ನು ಹಿಂಪಡೆಯುತ್ತೇನೆ : ತೇಜಸ್ವಿ ಸೂರ್ಯ

ಉಡುಪಿ,( ಡಿ.27): ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಭಾರತದಲ್ಲಿ ಹಿಂದೂ ಪುನರುತ್ಥಾನ' ಎಂಬ ವಿಷಯದ ಕುರಿತು ಮಾತನಾಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಸಂಸದ ತೇಜಸ್ವಿ...

ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್ ಕಮಿಟಿ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್, ಈ-ಶ್ರಮ್ ಕಾರ್ಡ್ ಮತ್ತು ವಿದ್ಯಾರ್ಥಿವೇತನ ಶಿಬಿರ

ದಿನಾಂಕ 26 (ಡಿ.2021), ಆದಿತ್ಯವಾರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಇಂದು ನಮ್ಮ ನಾಡ ಒಕ್ಕೂಟ(ರಿ) ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್...

ಮಂಗಳೂರು : ಇಂಜಿನಿಯರಿಂಗ್ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಮಂಗಳೂರು (ಡಿ.26): ಇಲ್ಲಿನ ಸುರತ್ಕಲ್ ನ ಇಂಜಿನಿಯರಿಂಗ್ ಕಾಲೇಜ್ ನ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಸೌರವ್ ಎನ್ನುವ ಬಿಹಾರ ಮೂಲದ ದ್ವಿತೀಯ ವರ್ಷದ ವಿದ್ಯಾರ್ಥಿ ಸೌರವ್...

Related Articles

ಕಸಾಪ ಚುನಾವಣೆ ಸೂಕ್ತ ಅಭ್ಯರ್ಥಿಯ ಆಯ್ಕೆಯಾಗಲಿ: ಖಿದ್ಮಾ ಸಂಚಾಲಕ ಆಮಿರ್ ಬನ್ನೂರು ಅಭಿಪ್ರಾಯ

ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಗೆ ಇದೇ ಬರುವ ನವೆಂಬರ್ 21 ಭಾನುವಾರದಂದು ಚುನಾವಣೆ ನಡೆಯಲಿದೆ. ಪ್ರಸ್ತುತ ಕಸಾಪ ಚುನಾವಣೆಯಲ್ಲಿ ರಾಜ್ಯ ಮತ್ತು ಆಯಾ ಜಿಲ್ಲಾಧ್ಯಕ್ಷರ ಆಯ್ಕೆಯಾಗಲಿದ್ದು ಕನ್ನಡ...

ಎಸ್.ಡಿ.ಪಿ.ಐ. ಪಡುತೋನ್ಸೆ ಗ್ರಾಮ ಪಂಚಾಯತ್ ಸಮಿತಿಯಿಂದ ನೂತನ ಜಿಲ್ಲಾ ನಾಯಕರಿಗೆ ಸನ್ಮಾನ ಸಮಾರಂಭ

ಎಸ್.ಡಿ.ಪಿ.ಐ. ಪಡುತೋನ್ಸೆ ಗ್ರಾಮ ಪಂಚಾಯತ್ ಸಮಿತಿಯಿಂದ ನೂತನ ಜಿಲ್ಲಾ ನಾಯಕರಿಗೆ ಸನ್ಮಾನ ಸಮಾರಂಭವನ್ನು ಇತ್ತೀಚೆಗೆ ಹೂಡೆಯ ಎಸ್.ಡಿ.ಪಿ.ಐ. ಕಛೇರಿಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ.ಉಡುಪಿ ಜಿಲ್ಲಾಧ್ಯಕ್ಷರಾದ ನಜೀರ್ ಅಹ್ಮದ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಉಡುಪಿ...

ತಾಜುಲ್ ಫುಖಹಾ ಉಸ್ತಾದ್ ನಮ್ಮ ಶೈಖುನಾ ಬಾರ್ಕೂರು ಅನುಸ್ಮರಣಾ ಮಜ್ಲಿಸ್ ನಲ್ಲಿ ಖಾಝಿ ಮಾಣಿ ಉಸ್ತಾದ್

ಉಡುಪಿ : ಮನೆಯನ್ನೇ ಖುತುಬು ಖಾನ ಮಾಡಿದ ಅರಿವಿನ ಲೈಬ್ರರಿ ತಾಜುಲ್ ಫುಖಹಾಅ ಬೇಕಲ್ ಉಸ್ತಾದ್ ಅವರು ನಮ್ಮ ಶೈಖುನಾ ಆಗಿದ್ದಾರೆ ಯಾವುದೇ ಸಮಸ್ಯೆಗಳಿಗೂ,ಸಂಶಯಗಳಿಗೂ ಅಂತಿಮ ತೀರ್ಪು ಅವರದ್ದಾಗಿತ್ತು. ನಮ್ಮಿಂದ...
Translate »
error: Content is protected !!