ರಮಝಾನ್ : ಕೆಟ್ಟ ವಾತಾವರಣದಲ್ಲಿಯೂ ಒಳಿತಿನ ಸಂಗಮ.

ದೆಹಲಿ ಕೆಂಪು ಕೋಟೆ ಹಿಂಸಚಾರದ ಹಿಂದೆ ಬಿಜೆಪಿ ಇದೆ, ರೈತರು ಅಲ್ಲ : ಕೇಜ್ರಿವಾಲ್ ಗಂಭೀರ ಆರೋಪ

ನವದೆಹಲಿ (ಫೆ.28): ದೆಹಲಿ ಮುಖ್ಯ ಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಮೀರತ್ ನಲ್ಲಿ 'ಕಿಸಾನ್ ಮಹಾಪಂಚಾಯತ್' ಉದ್ದೇಶಿಸಿ ಮಾತನಾಡಿ, ಮೂರು ಕೃಷಿ ಕಾನೂನುಗಳ...

ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಮೂವರ ರಕ್ಷಣೆ

ಕಾರವಾರ (ಫೆ.28): ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತಿದ್ದ ಒಂದೇ ಕುಟುಂಬದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.ರಕ್ಷಣೆಗೋಳಗಾದವರನ್ನು ಸಂಜನ (15), ಸಂಜಯ್ (18),ಕಮಲಮ್ಮ (40) ಎಂದು ಗುರುತಿಸಲಾಗಿದೆ. ಇವರು ಮೂಲತಃ ಬೆಂಗಳೂರಿನ ಕತ್ರಗುಪ್ಪೆಯ ನಿವಾಸಿಗಳಾಗಿದ್ದು ಮುರುಡೇಶ್ವರಕ್ಕೆ...

ಬಿಎಸ್ ವೈ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಹಾರೈಕೆ

ಬೆಂಗಳೂರು (ಫೆ.28):ಇಂದು ಸಿಎಂ ಯಡಿಯೂರಪ್ಪ ಅವರಿಗೆ 79ನೇ ಸಂಭ್ರಮ ಅವರಿಗೆ ಸಚಿವರು, ಶಾಸಕರು, ಆಪ್ತರು, ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಶುಭ ಹಾರೈಕೆಯ ಮಾಹಪೂರವೇ ಹರಿದು ಬರುತ್ತಿದೆ.ಕರ್ನಾಟಕ ಸಿಎಂ ಅವರಿಗೆ ಶುಭಾಶಯಗಳು. ಯಡಿಯುರಪ್ಪ ಜಿ...

ಉಡುಪಿ : ನಮ್ಮ ನಾಡ ಒಕ್ಕೂಟ- ಹೆಬ್ರಿ ಘಟಕದ ವತಿಯಿಂದ ಆಯುಶ್ಮಾನ್ ಕಾರ್ಡ್ ಶಿಬಿರ

ಹೆಬ್ರಿ : ಸ್ಥಳಿಯ ಭಾಂದವರಿಗೆ ಆಯುಶ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಕಾರ್ಡ್ ನ ಸೌಲಭ್ಯಗಳ ಬಗ್ಗೆ ಅರಿವು ಮೂಡಲು ,ಬೆಳ್ವೆ ಮದರಸ ಆವರಣದಲ್ಲಿ, ನಮ್ಮ ನಾಡ ಒಕ್ಕೂಟ-ಹೆಬ್ರಿ ಘಟಕದ ವತಿಯಿಂದ, ಹೆಬ್ರಿ ಘಟಕದ...

ಸಿಗರೇಟ್ ಹೊಗೆ ಬಿಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ!

ವಿಜಯಪುರ: ಸಿಗರೇಟ್ ಹೊಗೆ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರ ಮಧ್ಯೆ ಗಲಾಟೆ ನಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪಗಿ ಪಟ್ಟಣದ ಹೊರ ಭಾಗದ ಢಾಬಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ...

ಬಹುತೇಕ ಸಹೋದರರು ಈದ್ ನ ವಿಷಯದಲ್ಲಿ ತುಂಬಾ ದುಃಖಿತರಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ರಕೃರ್ತಿದತ್ತ ಅಥವಾ ಮಾನವನಿರ್ಮಿತ  ಕೊರೋನಾ ವೈರಸ್ನ ಬಗ್ಗೆ ನಿರಂತರವಾಗಿ ಅಳಲನ್ನು ತೋಡುತ್ತಿದ್ದಾರೆ. ಇದರಿಂದಾಗಿ ರಮಝಾನ್ ತಿಂಗಳ ಖುಷಿಯಾಗಲಿ ಹಬ್ಬದ ಸಡಗರವಾಗಲೀ ನಮಗೆ ಲಭಿಸಲಿಲ್ಲ. ಈದ್ ನಮಾಝನ್ನು ಒಂದೋ ಬಂದ್ ಕೋಣೆಗಳಲ್ಲಿ ಅಥವಾ ಮನೆಗಳಲ್ಲೇ ಅರಿವಿಗೆ ಬಾರದಂತೆ ನಿರ್ವಹಿಸಿದೆವು. ಕೆಲವರಿಗಂತೂ ವೈಯ್ಯಕ್ತಿಕವಾಗಿ ಏನಾದರೂ ಸಮಸ್ಯೆಗಳಿರಲಿಕ್ಕೂ ಸಾಕು. ಆದರೆ ಈ ಬಾರಿಯ ರಮಝಾನಿನಲ್ಲಿ ಉಪವಾಸವಿದ್ದೂ, ಈದ್ ನಲ್ಲೂ ವೈರಸ್ ಭಾಧೆ ಇದ್ದೂ ಒಂದು ತರಹದ ಮಾನಸಿಕ ದೌರ್ಬಲ್ಯಕ್ಕೆ ಜನರು ಒಳಗಾಗಿದ್ದರು. ಇದರ ನಡುವೆಯೂ ಒಳಿತುಗಳನ್ನು ನಿರಂತರವಾಗಿ ನಾವು ಕಂಡಿರುವುದಂತೂ ಸತ್ಯ.
1) ಮೂರು ತರಹ ಖೈರ್ (ಒಳಿತು)ಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈದ್ ನ ನಮಾಝ್ ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಲಿಲ್ಲ. ಇದಕ್ಕೆ ಕಾರಣಗಳು ಏನೇ ಇರಬಹುದು. ಆದರೆ ಈ ಸಂದರ್ಭದಲ್ಲಿ ಜನಸಾಮಾನ್ಯರೂ ಈದ್ ನ ನಮಾಝನ್ನು ಸುಲಭವಾಗಿ ಕಲಿತು ನಮಾಝ್ ಗೆ ನೇತೃತ್ವವನ್ನು ನೀಡಿದರು. ಮನೆಯ ಸದಸ್ಯರೊಂದಿಗೆ ಜೊತೆಗೂಡಿ ನಮಾಝನ್ನು ನಿರ್ವಹಿಸಿದರು. ಜನರು ಈದ್ ನಮಾಝ್  ಮಾಡಿಸುವ ಒಂದು ಬಹು ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡರು. ನಮಾಝ್ ಮಾಡಿಸುವುದಕ್ಕೆ ಒಂದು ವಿಶೇಷವಾದ ಸ್ಥಾನಮಾನವುಳ್ಳ ವ್ಯಕ್ತಿಯೇ ಬೇಕು ಎಂಬ ತಪ್ಪು ಕಲ್ಪನೆಯು ಜನಸಾಮಾನ್ಯರಲ್ಲಿತ್ತು. ಈ ಮೂಲಕ, ಇಸ್ಲಾಮ್ ಬ್ರಾಹ್ಮಣ್ಯವಾದವನ್ನು ತಿರಸ್ಕರಿಸುತ್ತದೆ. ಹಾಗೂ ಸಾಮಾನ್ಯ ವ್ಯಕ್ತಿಯೂ ಮುಂದೆ ಬಂದು ನಮಾಝ್ ಗೆ ನೇತೃತ್ವವನ್ನು ನೀಡಲು ಅರ್ಹ ಎಂಬ ಸಂದೇಶವು ದೇಶಭಾಂಧವರಿಗೆ ತಲುಪಿತು. ಮಹಿಳೆಯರಿಗೂ ಸಾಮಾನ್ಯವಾಗಿ ಈದ್ ನಮಾಝ್ ಮಾಡಲು ಅವಕಾಶ ಸಿಗುವುದಿಲ್ಲ.  ಈ ಬಾರಿ ಕೊರೋನದಿಂದಾಗಿ ಜಮಾಅತ್ ನೊಂದಿಗೆ ಈದ್ ನಮಾಝ್ ಮಾಡುವ ಅವಕಾಶ ಅವರಿಗೂ ಲಭಿಸಿತು.
2)ಲಾಕ್ ಡೌನ್ ನ ನಡುವೆ ರಮಝಾನ್ ನ ಪುಣ್ಯ ಮಾಸದಲ್ಲಿ ದೇಶಭಾಂಧವರಿಗಾಗಿ ಮಾಡಿದ ನಾನಾ ತರಹದ ಸೇವೆಯು ದೇಶವಾಸಿಗಳ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಉತ್ತಮ ಪ್ರಭಾವವನ್ನು ಬೀರಿದೆ.
ಮಾನವೀಯತೆ ಹಾಗೂ ಹಸಿದವರ ಹೊಟ್ಟೆ ತಣಿಸುವುದು ಪ್ರವಾದಿ (ಸ.ಅ) ರವರ ಜೀವನದ ಪ್ರಧಾನ ಅಂಗವಾಗಿದೆ. “ ನರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ” ಎಂಬ ವಚನವೇ ಮುಸ್ಲಿಮರಿಗೆ ಪ್ರೇರಣೆಯಾಗಿತ್ತು. ನೂರು ರೂಪಾಯಿಯನ್ನು ಸಂಪಾದಿಸಿ ಅಲ್ಲಾಹನ ದಾರಿಯಲ್ಲಿ  ನೂರಹತ್ತು ರೂಪಾಯನ್ನು ಖರ್ಚು ಮಾಡುವ ಉತ್ಸಾಹವು ಈ ಸಮುದಾಯಕ್ಕಿದೆ ಎಂಬುವುದನ್ನು ಸಾಬೀತುಪಡಿಸಿದೆ. ವಿಶೇಷವಾಗಿ ಈ ಬಾರಿ ಪ್ರತೀ ಮನೆಯಲ್ಲೂ ಅತೀ ಹೆಚ್ಚು ಕುರ್ ಆನ್ ನ ಪಾರಾಯಣ ಮಾಡಿ ಇದರೊಂದಿಗಿನ ಗಾಢ ಸಂಭಂಧವನ್ನು ತೋರಿಸಿದ್ದಾರೆ. ಚಿಕ್ಕ ಚಿಕ್ಕ ಪ್ರದೇಶಗಳಲ್ಲಿ ಕೆಲವೊಂದು ಯುವಕರು ಸೇರಿ ಲಕ್ಷಾಂತರ ರೂಪಾಯಿಗಳ ಕಿಟ್ ಗಳನ್ನೂ ಊಟದ ಪೊಟ್ಟಣಗಳನ್ನೂ ವಿತರಿಸಿದ್ದಾರೆ. ಹೆದ್ದಾರಿಗಳಲ್ಲಿ ಟೋಪಿದಾರಿಗಳಾಗಿ ತನ್ನ ಅಸ್ಮಿತೆಯನ್ನು ಸಾಬೀತುಪಡಿಸಿ ಅದೆಷ್ಟೋ ಬಡ ದೇಶವಾಸಿಗಳ ಜೀವರಕ್ಷಣೆ ಮಾಡಿದ್ದಾರೆ. ಹಲವು ಮುಸ್ಲಿಮೇತರರು ವೈರಸ್ ನಿಂದ ಸಾವಿಗೀಡಾಗಿ ಸ್ವಂತ ಪರಿವಾರದವರೇ ಅಂತಿಮ ಸಂಸ್ಕಾರಕ್ಕೆ ಮುಂದೆ ಬಾರದಿದ್ದಾಗ ಹೆಗಲಿಗೆ ಹೆಗಲು ಕೊಟ್ಟು ಎಲ್ಲಾ ಅಂತಿಮ ವಿಧಾನಗಳನ್ನು ಸುಸೂತ್ರವಾಗಿ ನಡೆಸಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸಿದ್ದಾರೆ. ನಿಜವಾಗಿಯೂ ಕರುಣೆಯಿಂದ ತುಂಬಿದಂತಹ ಈ ಹೃದಯಗಳನ್ನು ಮೀರಿಸಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನೂ ಈ ಸೇವೆಯು ದೇಶಕ್ಕೆ ಸಾರಿ ಸಾರಿ ಹೇಳಿದೆ. ಇದರೊಂದಿಗೆ ನಮ್ಮ ಯುವಕರಲ್ಲಿ ಸೇವೆಯನ್ನು ಮಾಡುವಂತಹ ಚೈತನ್ಯವು ಇಮ್ಮಡಿಗೊಂಡಿತು. ಯಾವುದೇ ತರಬೇತಿ ಇಲ್ಲದೇ ಕೆಲವೇ ಕೆಲವೇ ಯುವಕರು ಅದೆಷ್ಟೋ ಜನರ ರುಚಿಕರವಾದ ಆಹಾರವನ್ನು ತಯಾರು ಮಾಡುವ ವಿಧಾನವನ್ನು ಕಲಿತರು. ಇದಕ್ಕಾಗಿ ಅವರು ಯಾವುದೇ ತರಹದ ಮ್ಯಾನೇಜ್ ಮೆಂಟ್ ಕೋರ್ಸ್ ಗಳನ್ನು ಮಾಡಿರಲಿಲ್ಲ. ಬರೇ ಅಲ್ಲಾಹನ ವಿಶೇಷವಾದ ಕರುಣೆ ಇವರ ಕೈ ಹಿಡಿದಿತ್ತು.
3) ಈ ಸಂಧರ್ಭದಲ್ಲಿ ಮುಸ್ಲಿಮರಲ್ಲಿ  ಅತೀ ಹೆಚ್ಚು ಸಾಮಾಜಿಕ ಕಾಳಜಿ ಕಂಡು ಬಂದಿರುವುದು ಬಹು  ಮುಖ್ಯ ವಿಚಾರ. ಅಲ್ಲಲ್ಲಿ ಕೆಲವೊಂದು ಚಿಕ್ಕ ಪುಟ್ಟ ಸಂಭವಗಳು ಸಂಭವಿಸಿರಲೂಬಹುದು. ಅದನ್ನು ಗಣನೆಗೆ ತಗೆದುಕೊಳ್ಳಲು ಸಾಧ್ಯವಿಲ್ಲ. ಚಿಕ್ಕ ಚಿಕ್ಕ ಅಂಗಡಿಗಳನ್ನು ಇಟ್ಟುಕೊಂಡವರೂ ತನ್ನ ಆದಾಯದ ಗಣನೀಯ ಪ್ರಮಾಣವನ್ನು ಬಡವರಿಗೆ ಮೀಸಲಿರಿಸಿದ್ದು ನೋಡಿದರೆ ಆಶ್ಚರ್ಯವಾಗುತ್ತದೆ.  ಇವರು ಬಡವರ ಪಾಲಿನ ಆಶಾಕಿರಣವಾಗಿ ತನ್ನನ್ನು ಮುಡಿಪಾಗಿರಿಸಿದ್ದರು.
ಆದ್ದರಿಂದ ಸಮುದಾಯ ಭಾಂಧವರೇ, ರಮಝಾನ್ ತಿಂಗಳಲ್ಲಿ ಏನೂ ಮಾಡಲಿಕ್ಕಾಗಲಿಲ್ಲ ಎಂಬ ಕೊರಗಿನಿಂದ ಹೊರಬನ್ನಿ. ಈ ರಮಝಾನ್ ನಾನಾ ತರಹದ ಖೈರ್ (ಒಳಿತು) ಗಳುಳ್ಳ ಪವಿತ್ರ ಮಾಸವಾಗಿತ್ತು. ಈ ಬಾರಿಯ ಈದುಲ್ ಫಿತ್ರ್ (ರಮಝಾನ್ ಹಬ್ಬ) ವೂ ತುಂಬಾ ಬರ್ಕತ್ ಗಳಿಂದ ಕೂಡಿದ ಹಬ್ಬವಾಗಿತ್ತು. ಅದಾಗಲೇ ಇದು ಖೈರ್ (ಒಳಿತು) ಗಳ ಪ್ರಾರಂಭ ಮಾತ್ರ. ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಹೆಚ್ಚು ಅಲ್ಲಾಹನ ಕರುಣೆಗಳನ್ನು ನಾವು ನೋಡಲಿದ್ದೇವೆ. ( ಇನ್ ಶಾ ಅಲ್ಲಾಹ್). ಇಂತಹ ಸನ್ನಿವೇಶಗಳಲ್ಲೇ ಸಮುದಾಯಗಳ ತರಬೇತಿಯಾಗುತ್ತದೆ. ಕಷ್ಟ ಕಾರ್ಪಣ್ಯಗಳನ್ನು ಎಷ್ಟರವರೇಗೆ ಸಹಿಸುವುದಿಲ್ಲವೋ ಅಷ್ಟರವರೇಗೆ ತರಬೇತುಗೊಳ್ಳುವುದು ಅಸಾಧ್ಯ. ಈ ಮೂಲಕ ಅಲ್ಲಾಹನು ಮುಂದಿನ ದಿನಗಳ ಖೈರ್ ಗಾಗಿ ಅತಿ ಶೀಘ್ರವಾಗಿ ತರಬೇತುಗೊಳಿಸುತ್ತಿದ್ದಾನೆ. ಅಷ್ಟೇ ವೇಗವಾಗಿ ಕೆಡುಕುಗಳು ಈ ನೆಲದಿಂದ ಮಾಯವಾಗಲಿವೆ. ಇನ್ ಶಾ ಅಲ್ಲಾಹ್ .
ಈ ಸುಸಂಧರ್ಭದಲ್ಲಿ ಈದ್ ಮುಬಾರಕನ್ನು ಸ್ವೀಕರಿಸಿರಿ. ಅಲ್ಲಾಹನಲ್ಲಿ ಒಳಿತು ಹಾಗೂ ವಿಜಯಗಳಿಗಾಗಿ ಪ್ರಾರ್ಥಿಸಿರಿ. “ ತಕಬ್ಬಲಲ್ಲಾಹು ಮಿನ್ನಾ ವ ಮಿನ್ ಕ” (ಅಲ್ಲಾಹು ನಮ್ಮ ಹಾಗೂ ನಿಮ್ಮ ಸತ್ಕರ್ಮಗಳನ್ನು ಸ್ವೀಕರಿಸಲಿ). ಆಮೀನ್.

– ಮೌಲಾನಾ ಅಬ್ದುಲ್ ಹಫೀಝ್, ಅಲ್ ಕಾಸಿಮೀ, ಕಾರ್ಕಳ.

LEAVE A REPLY

Please enter your comment!
Please enter your name here

Hot Topics

ಉಳ್ಳಾಲ: ಮಾರುವೇಷದಲ್ಲಿ ಫೀಲ್ಡ್‌ಗೆ ಇಳಿದ ಕಮಿಷನರ್, ಡಿಸಿಪಿ: ಅಕ್ರಮ‌ ಮರಳು ಸಾಗಿಸುತ್ತಿದ್ದ ಲಾರಿ ವಶಕ್ಕೆ

ಉಳ್ಳಾಲ: ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಕುರಿತಂತೆ ನಿರಂತರ ದೂರಿನ ಹಿನ್ನೆಲೆಯಲ್ಲಿ ಸ್ವತಃ ಕಮಿನರೇ ಫೀಲ್ಡ್ ಗೆ ಇಳಿದಿದ್ದಾರೆ. ಈ ನಿಟ್ಟಿನಲ್ಲಿ ಫೆಬ್ರವರಿ 27ರಂದು ಬೆಳಗ್ಗಿನ ಜಾವ ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು...

ಸಾಸ್ತಾನ: ಕಾರು-ಬೈಕ್ ಅಪಘಾತ ; ಬೈಕ್ ಸವಾರ ಮೃತ್ಯು

ಕುಂದಾಪುರ, ಫೆ .28: ಭಾನುವಾರ ಬೆಳಿಗ್ಗೆ ಸಾಸ್ತಾನದ ಗುಂಡ್ಮಿ ಅಂಬಾಗಿಲು ಎಂಬಲ್ಲಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಪ್ರಾಣ ಕಳೆದುಕೊಂಡಿದ್ದಾನೆ.ಮೃತನನ್ನು ಕೋಟಾ ಬನ್ನಾಡಿ ನಿವಾಸಿ ಸುಭಾಷ್ ಅಮೀನ್ (45)...

ಸಮಾಜದ ಅಭಿವೃದ್ಧಿಗೆ ಸಂಘಟನೆ ಅವಶ್ಯಕ – ಶಾಸಕ ರಘುಪತಿ ಭಟ್

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಬ್ರಾಹ್ಮಿ ಸಭಾಭವನ ಸಮರ್ಪಣಾ ಹಾಗೂ ಅಭಿನಂದನಾ ಕಾರ್ಯಕ್ರಮಒಂದು ಸಮಾಜದ ಅಭಿವೃದ್ಧಿಯಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿ ಸಮಾಜದ ಆಸಕ್ತ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಹಸ್ತ ನೀಡಿದಲ್ಲಿ ಸಮಾಜದ ಸರ್ವಾಂಗೀಣ...

Related Articles

ದೆಹಲಿ ಕಿಸಾನ್ ಪೆರೇಡ್ ಗೆ ಮಸಿ ಬಳಿದವರು ಯಾರು?

ಒಂದು ರೈತ ಹೋರಾಟವನ್ನು ನ್ಯಾಯವಾದ ರೀತಿಯಲ್ಲಿ ಎದುರಿಸಲಾಗದ ಹೇಡಿ ಸರ್ಕಾರ ಕೊನೆಗೆ ಎಂತಹ ನೀಚತನಕ್ಕೆ ಇಳಿಯಬಹುದು ಎಂಬುದು ಇಂದು ದೆಹಲಿಯಲ್ಲಿ ಸಾಬೀತಾಗಿದೆ.ರೈತರ ಹೋರಾಟಕ್ಕೆ ಮಸಿ ಬಳಿಯಲು ಒಂದು ಅರಾಜಕತಾವಾದಿ ಗುಂಪನ್ನು ತಾನೇ ಹಿಂದಿನಿಂದ...

ಪ್ರವಾದಿ ಮುಹಮ್ಮದ್(ಸ): ಮಹಿಳಾ ಪರ ಧ್ವನಿ

ಲೋಕ ಕಂಡ ಮಹಾನ್ ನಾಯಕರಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸುವ ಪ್ರಭಾವಪೂರ್ಣ ವ್ಯಕ್ತಿತ್ವ ಬೆರಳೆಣಿಕೆಯಷ್ಟು ಮಂದಿಯದ್ದು ಮಾತ್ರ. ಅಂತಹ ಪ್ರಭಾವಪೂರ್ಣ ವ್ಯಕ್ತಿತ್ವಗಳ ಸಾಲಿನಲ್ಲಿ ಸೇರುತ್ತಾರೆ ಪ್ರವಾದಿ ಮುಹಮ್ಮದ್ (ಸ). ಇವರ ಕಾರ್ಯವೈಖರಿ...

ಪ್ರವಾದಿ ಮುಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ

✍️ಶಮೀರ ಜಹಾನ್,ಮಂಗಳೂರುಜಗತ್ತಿನ ಎಲ್ಲ ಮಸೀದಿಯ ಮಿನಾರಗಳಲ್ಲಿ,ಪ್ರತೀ ಆಝಾನ್ ನಲ್ಲಿ,ಪ್ರತೀ ನಮಾಝಿನಲ್ಲಿ ದಿನದ ಇಪ್ಪತ್ತನ್ನಾಲ್ಕು ಗಂಟೆಗಳಲ್ಲಿ ಮುಸಲ್ಮಾನರು ಅತ್ಯಧಿಕ ಸ್ಮರಿಸುವ ಏಕೈಕ ವ್ಯಕ್ತಿತ್ವ ಮುಹಮ್ಮದ್ (ಸ)ರಾಗಿದ್ದಾರೆ.ಮುಹಮ್ಮದ್(ಸ)ರು ಇಸ್ಲಾಮ್ ಧರ್ಮದ ಸ್ಥಾಪಕರು ಎಂಬ ತಪ್ಪುಕಲ್ಪನೆಯಿದೆ.ಮುಹಮ್ಮದ್(ಸ)ರು ಇಸ್ಲಾಮ್...
Translate »
error: Content is protected !!