ಬೆಂಗಳೂರು: ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂದರ್ಶಕ ಏಕಾಏಕಿ ಭಾವೋದ್ವೇಗದಿಂದ ಕೆಲವೊಂದು ಪ್ರಶ್ನೆ ಕೇಳಿ ಮುಖ್ಯಮಂತ್ರಿಯನ್ನು ಉದ್ರೇಕಿಸಲು ಪ್ರಯತ್ನಿಸಿದಾಗ ಶಾಂತ ಚಿತ್ತವಾಗಿ ಉತ್ತರ ನೀಡಿದ ಅವರು ನಾನು ಅಲ್ಪಸಂಖ್ಯಾತ ಸಮಾಜದ ಶಾಸಕರನ್ನು ಕರೆದು ಮಾತನಾಡಿದ್ದೇನೆ. ಅವರು ಸಂಪೂರ್ಣ ಸಹಕಾರ ನೀಡುವುದರ ಬಗ್ಗೆ ತಿಳಿಸಿದ್ದಾರೆ. ಯಾವುದೋ ಒಂದು ಘಟನೆ ಆಧರಿಸಿ ಮುಸ್ಲಿಮರ ಬಗ್ಗೆ ತಪ್ಪಾಗಿ ಮಾತನಾಡಿದರೆ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಯಾರೊಬ್ಬರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರ ಬಗ್ಗೆ ಮಾತನಾಡಕೂಡದು ಇದರ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಒಂದು ಸಣ್ಣ ಘಟನೆ ನಡೆದರೆ ಇಡೀ ಮುಸ್ಲಿಂ ಸಮುದಾಯವನ್ನೇ ಹೊಣೆಯನ್ನಾಗಿಸಬಾರದು. ಹಾಗೇನು ಮಾಡಿದರೆ ಹಿಂದೆ ಮುಂದೆ ನೋಡದೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ವೀಡಿಯೋ: ಟಿವಿ 9