ದೇಶ ಸಮರ್ಥರ ಕೈಯಲ್ಲಿದ್ದರೆ ಇಂತಹ ಸಂದರ್ಭದಲ್ಲಿ ಅರ್ಥಿಕ ಕುಸಿತದಿಂದ ಅದ್ರು ತಡೆಯಬಹುದಿತ್ತು!

ಸಂಪಾದಕೀಯ

ದೇಶ ಕೋವಿಡ್, 19 ವೈರಸ್ ನಿಂದ ಬಳಲುತ್ತಿದೆ. ಈಗಾಗಲೇ ನೂರಾರು ಮಂದಿಗೆ ಕೋರೊನಾ ವೈರಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಹತ್ತಾರು ಮಂದಿಯನ್ನು ಈ ವೈರಸ್ ಬಲಿ ಪಡೆದಿದೆ. ದೇಶದ ಜನ ಭಯಭೀತರಾಗಿದ್ದಾರೆ. ದೇಶ ಲಾಕ್ ಡೌನ್ ಪ್ರಯುಕ್ತ ಸಂಪೂರ್ಣ ಸ್ತಬ್ಧವಾಗಿದೆ. ಇದು ಪ್ರಸ್ತುತ ದೇಶದ ಚಿತ್ರಣ.

ಮೇಲೆ ವಿವರಿಸಿರುವುದು ಕಣ್ಣಿಗೆ ಕಾಣುವ ಚಿತ್ರಣವಾದರೆ ಕಾಣಿಗೆ ಕಾಣದ ಭಯಾನಕ ನರಳಾಟ ಇನ್ನೊಂದಿದೆ. ಈ ದೇಶಕ್ಕೆ ಕೋರೊನಾ ವೈರಸ್ ಅಪ್ಪಳಿಸುವ ಮುನ್ನವೇ ಅರ್ಥಿಕವಾಗಿ ಕುಸಿದಿತ್ತು. ನರೇಂದ್ರ ಮೋದಿ ನೇತೃತ್ವದ ಸರಕಾರ ಕಾಂಗ್ರೆಸ್ 70 ವರ್ಷದಿಂದ ಏನು ಮಾಡಿದೆ ಏನ್ನುತ್ತಲೇ ದೇಶವನ್ನು ಆದಾಗಲೇ ತನ್ನ ಆಡಳಿತದಲ್ಲಿ ಆರು ವರ್ಷದಲ್ಲೇ ಪಾತಾಳಕ್ಕೆ ದೂಡುವಷ್ಟರ ಮಟ್ಟಿಗೆ ಅರ್ಥಿಕ ಹಿನ್ನಡೆಗೆ ಕಾರಣವಾಗಿತ್ತು. ಜಿ.ಡಿ.ಪಿ ಕುಸಿತವಾಗಿತ್ತು. ಬ್ಯಾಂಕ್’ಗಳು ದಿವಾಳಿಯಾಗಿತ್ತು. ಮಾರುಕಟ್ಟೆ ಕುಸಿದಿತ್ತು. ಫ್ಯಾಕ್ಟರಿಗಳು ಮುಚ್ಚಲ್ಪಡುತ್ತಿದ್ದವು. ಆಟೋ ಮೊಬೈಲ್ ಕ್ಷೇತ್ರ ನೆಲಕಪ್ಪಳಿಸಿತ್ತು.‌ಸಣ್ಣ ಪುಟ್ಟ ವ್ಯಾಪರಗಳು ನೆಲಕಚ್ಚಿತ್ತು. ಎಲ್ಲಿ ನೋಡಿದರೂ ಹಾಹಕಾರದ ವಾತಾವರಣವಿತ್ತು. ಡೀಮೊನಿಟೈಝೇಷನ್ ನಿಂದ ಹಿಡಿದು ಹತ್ತು ಹಲವು ಪ್ರೌಢಿಮೆ ಇಲ್ಲದ ನಿರ್ಧಾರಗಳು ದೇಶದ ಅರ್ಥಿಕತೆಗೆ ಗಾಢವಾದ ಪೆಟ್ಟು ನೀಡಿತ್ತು. ಅರ್ಥಿಕ ತಜ್ಞರ ಎಚ್ಚರಿಕೆ, ಅನುಭವಿಗಳ ಮಾತುಗಳನ್ನು ಲೆಕ್ಕಿಸದೆ ಸರಕಾರ ಮುನ್ನಡೆಯಿತು.‌ಸರಕಾರವನ್ನು ಎಚ್ಚರಿಸಿ ಹಳಿಗೆ ತರಬೇಕಾದ ಮಾಧ್ಯಮಗಳು ಕೂಡ ಎಂಜಲಿನ ಆಸೆಗೆ ಬಲಿಬಿದ್ದು ದೇಶ ಎದುರಿಸುತ್ತಿರುವ ಸಮಸ್ಯೆಯನ್ನು ಬದಿಗೊತ್ತಿ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿತು. ಇದಕ್ಕೆ ತಕ್ಕಂತೆ ಬಿಜೆಪಿ ತನ್ನೆಲ್ಲಾ ಮಾತುಗಳನ್ನು ನಂಬುವಂತೆ ಮತ್ತು ಅದನ್ನು ದೂರ ದೂರದ ವರೆಗೆ ಪ್ರಚಾರ ಮಾಡಲು ಕಟ್ಟಿರುವ ಕಾರ್ಯಕರ್ತರ ಪಡೆ ದೇಶದ‌ ಹಿತಾಸಕ್ತಿ ಬಿಟ್ಟು ಸರಕಾರದ ಅಸಮರ್ಥ ನಡೆಗಳನ್ನು ಸಮರ್ಥಿಸುತ್ತ ಸಾಗಿತು. ಅದರ ಬಗ್ಗೆ ಎಚ್ಚರಿಸಿದವರನ್ನೆಲ್ಲಾ ಟ್ರೋಲ್ ಮಾಡುತ್ತ ವಿಷಯವನ್ನು ವಿಷಯಾಂತರಗೊಳಿಸುತ್ತ ಜನರಿಗೆ ಮಂಕುಬೂದಿ ಎರಚುತ್ತ ಸಂಭ್ರಮಿಸಿತು.

ಇದೀಗ ಈ ಎಲ್ಲದರ ಪರಿಣಾಮ ಇಂತಹ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಈ ದೇಶದ ಜನತೆ ಸರಕಾರದ ಅಸಮರ್ಥ ಆಡಳಿತದ ಕಾರಣ ತೀವ್ರವಾದ ಅರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದಾರೆ.‌ದಿನಗೂಲಿ ನೌಕರರು ಹಸಿವೆಯಿಂದ ಬಳಲುತ್ತಿದ್ದಾರೆ. ವಲಸೆ ಕಾರ್ಮಿಕರು, ಸಣ್ಣ ಸಣ್ಣ ಅಂಗಡಿದಾರರು ಕಂಗಾಲಾಗಿ ಕಣ್ಣೀರಿಡುತ್ತಿದ್ದಾರೆ. ಕೆಲವೊಂದು ಕಡೆ ಮಕ್ಕಳು, ಮಹಿಳೆಯರು ಊಟಕ್ಕಾಗಿ ಅಳುವ ವೀಡಿಯೋಗಳು ಕೂಡ ವೈರಲಾಗುತ್ತಿದೆ. ಈ ದೇಶ ಈ ಮುಂಚೆ ಯಾವತ್ತೂ ಇಂತಹ ವೇದನೆ ಅನುಭವಿಸಿರಲಿಲ್ಲ. ಕೇವಲ 500 ರೂ ತಿಂಗಳಿಗೆ ಕೆಲವರಿಗೆ ಸರಕಾರ‌ ನೀಡಿ ಕೈ ತೊಳೆದುಕೊಂಡರೆ ದೇಶದ ದುಸ್ಥಿತಿ ನಿವಾರಣೆಯಾಗಲು ಸಾಧ್ಯವೇ?.ಮೂರು ತಿಂಗಳು ಲಾಕ್ ಡೌನ್ ಆದರೆ ಆ ದೇಶದ ತೀರಾ ಅಗತ್ಯವುಳ್ಳ ಜನರನ್ನು ಸಾಕಾಲು ಸರಕಾರ ಇಷ್ಟು ಅಸಮರ್ಥವಾಗಲು ಏನು ಕಾರಣ? ಈಗ ಕೋರೊನಾದ ನೆಪವಿದೆ. ಆದರೆ ಅವಕಾಶವಿದ್ದಾಗ ಸರಕಾರ ತನ್ನ ಅಸಮರ್ಥ ನೀತಿಯಿಂದ ತಾನೇ ಈ ರೀತಿಯ ಪರಿಸ್ಥಿತಿಗೆ ನೂಕಿದ್ದು? ಈ ಎಲ್ಲ ಪ್ರಶ್ನೆಗಳನ್ನು ಇವತ್ತು ಕಷ್ಟ ಪಡುತ್ತಿರುವ ಎಲ್ಲ‌ ಜೀವಿಗಳ ಪರವಾಗಿ ಕೇಳಲೇ ಬೇಕಾಗಿದೆ. ಮತ್ತು ದೇಶವನ್ನು ಧರ್ಮ, ಜಾತಿ, ದ್ವೇಷ, ಗಲಭೆಗಳಧಾರದಲ್ಲಿ ನಡೆಸಿ ಜನರಿಗೆ ಮಂಕೂಬೂದಿ ಎಸಗುತ್ತೇವೆ ಎನ್ನುವವರಿಗೆಲ್ಲ ಇಂತಹ ಸನ್ನಿವೇಶಗಳ ಕಿಂಚಿತ್ತು ಜ್ಞಾನ ಮತ್ತು ಅದನ್ನು ನಿಭಾಯಿಸುವ ಯೋಗ್ಯತೆ ಇಲ್ಲ ಎಂಬುವುದನ್ನು ನಾವು ಅರಿತು,ಮುಂದಿನ ದಿನಗಳಲ್ಲಿ ಅಸಮರ್ಥರ ಕೈಯಲ್ಲಿ ಆಡಳಿತ‌ ನೀಡುವ ಮುನ್ನ ನೂರು ಬಾರಿ ಯೋಚಿಸಬೇಕಾಗಿದೆ.

Hot Topics

ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್’ಡೌನ್

ಬೆಂಗಳೂರು: ಕರ್ನಾಟಕದಲ್ಲಿ ಮೇ 10 ರಿಂದ ಮೇ 24 ವರೆಗೆ ಲಾಕ್'ಡೌನ್ ವಿಧಿಸಲಾಗಿದೆ.ಲಾಕ್'ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶವಿದೆ. ನಂತರ ಯಾರು ಕೂಡ ರಸ್ತೆಗೆ ಇಳಿಯುವಂತಿಲ್ಲವೆಂದು ಹೇಳಿದ್ದಾರೆ.ಸೋಮವಾರದಿಂದ...

ಉಡುಪಿಯಲ್ಲಿ ಇಂದು 1526 ಮಂದಿಗೆ ಕೋರೊನಾ ಪಾಸಿಟಿವ್, ಐದು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಒಟ್ಟು 1526 ಮಂದಿಗೆ ಕೋರೊನಾ ಪಾಸಿಟಿವ್ ಆಗಿದೆ. ಇಂದಿನ ವರದಿಯಂತೆ ಐದು ಮಂದಿ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಪ್ರಸ್ತುತ 5063 ಸಕ್ರಿಯ ಪ್ರಕರಣಗಳಿವೆ. 384 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ‌. ಜಿಲ್ಲೆಯಲ್ಲಿ...

ಉಡುಪಿಯಲ್ಲಿ ಸಂಪೂರ್ಣ ಲಾಕ್’ಡೌನ್ ಮಾಡಿ – ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನತಾ ಲಾಕ್‌ಡೌನ್ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಕಳೆದ ವರ್ಷದಂತೆ ಸಂಪೂರ್ಣ ಲಾಕ್‌ಡೌನ್‌ ಮಾಡಿ, ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ...

Related Articles

ಛೋಟ ರಾಜನ್ ಮೃತಪಟ್ಟಿಲ್ಲ – ಏಮ್ಸ್ ಸ್ಪಷ್ಟನೆ

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ, ಜೀವಂತವಾಗಿರುವುದಾಗಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಛೋಟಾ ರಾಜನ್ ಅವರು ಶುಕ್ರವಾರ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿರುವ...

ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ – ಬಿಜೆಪಿ ಶಾಸಕ ಉದಯ್ ಗರುಡಾಚಾರ್

ಬೆಂಗಳೂರು: ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ.ಕೋವಿಡ್ ಹಾಸಿಗೆ ಬ್ಲಾಕಿಂಗ್ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ...

ರಾಜ್ಯದಲ್ಲಿ ಲಾಕ್’ಡೌನ್: ನೂತನ ಮಾರ್ಗಸೂಚಿಗಳು ಏನೇನು – ಸಂಪೂರ್ಣ ವಿವರ

ಬೆಂಗಳೂರು: ರಾಜ್ಯದಲ್ಲಿ COVID 19 ಪ್ರಸರಣದ ಸರಪಳಿಯನ್ನು ಮುರಿಯಲು ನೂತನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.ಮೇ 10-24 ವರೆಗೆ ಸಂಪೂರ್ಣ ಲಾಕ್'ಡೌನ್ ಇರಲಿದ್ದು ಈ ಕೆಳಗಿನ ಮಾರ್ಗಸೂಚಿಗಳು ಕಡ್ಡಾಯವಾಗಿ ಜಾರಿಯಾಗಲಿದೆ.(ಆದೇಶ ಸಂಖ್ಯೆ ಆರ್ಡಿ 158...
Translate »
error: Content is protected !!